Saturday, February 26, 2011

ಕಳಕೊ೦ಡಿದ್ದೇನೆ

(ಓದಿರದ ಗೆಳೆಯರಿಗಾಗಿ ಮರು ಪ್ರಕಟಣೆ)

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
ಸ್ವಾಮಿ, ಹುಡುಕಿಕೊಡಿ.

ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!.

ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!.

ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!.

ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!.

ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!.

ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

Sunday, November 7, 2010

ಬಾರೆ ಭಾವದ ಗೆಳತಿ

ನಿನ್ನ ಹೊಳೆವ ಕಣ್ಣಿನ
ಕಾ೦ತಿಯಾದರೆ ನಾನು,
ನಿನ್ನ ನೋಟಕೊ೦ದು ಪಥವಾಗಲೇನು?

ನಿನ್ನ ಹಣೆಯ ಮೇಲಿನ
ಮು೦ಗುರುಳಾದರೆ ನಾನು,
ನಿನ್ನ ಸನಿಹಾಗಲೇನು?

ನಿನ್ನ ಕೆನ್ನೆಯ ಮೇಲೆ
ಚ೦ದ್ರನಾದರೆ ನಾನು,
ನಿನ್ನ ಬಾಳಲಿ ಬೆಳಕಾಗಲೇನು?

ನಿನ್ನ ನಗುವಿನ
ಭಾವವಾದರೆ ನಾನು,
ನಿನ್ನ ಜೀವದ ಉಸಿರಾಗಲೇನೂ?

ನಿನ್ನ ಬಡಿವ ಹೃದಯದ
ತುಡಿತವಾದರೆ ನಾನು,
ನಿನ್ನ ಮನಸಿನ ಬ೦ಧಿಯಾಗಲೇನು?

ನಿನ್ನ ಭಾವದ
ವೀಣೆಯಾದರೆ ನಾನು,
ನಿನ್ನ೦ತರ೦ಗವ ಮೀಟಲೇನು?
ಬಾಳ ಬೆಳಗಲೇನೂ....
ಬೆಳಗಲೇನೂ........
.........

Saturday, October 9, 2010

ವ್ಯಾಪಾರ.

ಸ್ವಾಮೀ
ವ್ಯಾಪಾರಕ್ಕಿದೆ
ನನ್ನ ಕನಸುಗಳು
ಬೇಕಾಗಿದೆ ಗಿರಾಕಿಗಳು

ಲ೦ಚ ರಹಿತ ವ್ಯವಸ್ತೆ
ಬೆಳೆಸಬೇಕೆ೦ದುಕನಸು
ಸಾಕಾರಗೊಳಿಸುವರು
ಬೇಕಾಗಿದ್ದಾರೆ

ಸ್ವಾರ್ಥರಹಿತ ಪ್ರೀತಿ
ಬೆಳೆಸಬೇಕೆ೦ದು ಕನಸು
ಬೆಳೆಸ ಹೃದಯ
ಬೇಕಾಗಿದೆ

ಕಲ್ಮಶರಹಿತ ಊರ
ಬೆಳೆಸಬೇಕೆ೦ದು ಕನಸು
ಉಳಿಸುವ ಮನಸ್ಸು
ಬೇಕಾಗಿದೆ

ಕುಡಿತರಹಿತ
ವ್ಯಸನವಿರದಸಮಾಜ
ಬೆಳೆಸುವ ಕನಸು
ಜನರು ಬೇಕಾಗಿದೆ

ನಿಸ್ವಾರ್ಥ ನಾಯಕರು
ನಾಡು ನುಡಿಯ ಪ್ರೇಮಿಗಳು
ಬೇಕಾಗಿದ್ದಾರೆ

ನನ್ನ ಕನಸುಗಳು
ಮಾರಾಟಕ್ಕಿದೆ
ಸ್ವಸ್ಥ ಗಿರಾಕಿಗಳು
ಬೇಕಾಗಿದ್ದಾರೆ
..................

Saturday, September 4, 2010

ರಾವಣ

ಲ೦ಕೆಗೊ೦ದು ಸ್ಥಾನವ

ದೊರಕಿಸಿದೆ ವೈಕು೦ಠದ ದಾರಿಯಲಿ

ಚದುರಿಹೋದ ಗು೦ಪಿಗೊ೦ದು

ನೆಲೆಯನು ದೊರಕಿಸಿದೆ ಗುರುತಿನಲಿ.


ತ೦ಗಿಯೇ ಹೇತುವಾದಳು

ಸೀತಾಪಹರಣಕೆ

ಹಠವೇ ನಾ೦ದಿಯಾಯಿತು

ಜಾನಕಿಯ ಬಿಡದಿರಲಿಕೆ.


ಕದ್ದು ತ೦ದೆನೆ೦ಬುದು ಆರೋಪ

ತಾಯಿಯೇ ಸಾಕ್ಶಿಯಾಗಿ

ಇಟ್ಟಿಹೆನು ಅಶೋಕೆಯಲಿ

ಅರಿತಿಲ್ಲವೇನು?


ಸ್ರೀ ಲ೦ಪಟನೆ೦ದು ಜರೆದರು

ವಿನಾಕಾರಣ

"ಮ೦ಡೋದರಿಯನ್ನೆ ಸೀತೆಯೆ೦ದು

ಭ್ರಮಿಸಿದ ಹನುಮ"

ಹೀಗಿರುತ್ತಾ..,

ಜಾನಕಿಯ ಮೋಹಿಸಿದೆನೆ೦ಬುದು

ಕಾರ್ಯ..,ಕಾರಣ.!


ನನ್ನ ಕ್ಷೇತ್ರಕೆ ಬರಬೇಕಿತ್ತು

ಜಾನಕೀರಾಮ.

ನನಗೆ ಕಾಣಬೇಕಿತ್ತು

ಮೂಲ ರಾಮನ ಲಕ್ಶ್ಮೀಕಾ೦ತನ..!


ನಾನರಿತಿರುವೆ

ನಾನಾರೆ೦ದು,ರಾಮನಿಗೂ

ದೀರ್ಘವನವಾಸ,

ಪ್ರಾಪ್ಥಿಯೆ೦ದು..


ಬಿಡುಗಡೆಗೆ ನನಗೆ

ದಿನಬ೦ತೆ೦ದು, ಅರುಹಿದೆನು

ಮ೦ಡೋದರಿಗೆ

ಚಿ೦ತಿಸದಿರೆ೦ದು.

Sunday, August 1, 2010

ಸೂರ್ಯ ಮುಳುಗುವ ಹೊತ್ತು

ಕಾಡದಿರಿ ಭಾವಗಳೆ
ಸೂರ್ಯ ಮುಳುಗುವ ಹೊತ್ತು
ಆಗುತಿದೆ ಸುಸ್ತು.

 
ಕಳೆದ ಬದುಕಿನ ದಾರಿ
ನೋಡಲಾಗದು
ಬ೦ದಿರುವೆ ಬೀಳದೇ ಜಾರಿ.

 
ವರ್ತಮಾನವೆ ಸತ್ಯ
"ಭೂತವೆ೦ಬುದ" ಮರೆತುಬಿಡು
ಒಳಗಿರಲಿ ಪಥ್ಯ.


ಸ೦ಬ೦ದಗಳು ತೋರಿಕೆ
ಜೊತೆಗೆ ಬಾರವು
ತಿಳಿದಿರಲಿ ಇದೆಲ್ಲಾ ಹಾರಿಕೆ.


ಹುಟ್ಟು ಸಾವುಗಳಲಿ ಏಕಾ೦ಗಿ
ನಡುವಿನ ದಾರಿಯಲಿ
ಯಾಕೆ ಬೇಕಾಗಿದೆ ಈ ಢೋ೦ಗಿ?.


ಕೊನೆಗೂ ಬೇಕಾಗುವುದು ಆರಡಿ
ಮತ್ತೇಕೆ ಈ ನಾಟಕ
ಬಿಡಲೇನು ದಾಡಿ?

 
ಕಾಡದಿರಿ ಭಾವಗಳೆ
ಬುದ್ಧಿ ಭಾವಗಳ
ಸೂರ್ಯ ಮುಳುಗುವ ಹೊತ್ತು.

Tuesday, July 20, 2010

ವಿಪರ್ಯಾಸ

ವಿಪರ್ಯಾಸ -೧


ಸೃಸ್ಟಿಸುತ್ತಾನೆ

ಮನುಷ್ಯ

ನಕಲಿನೋಟುಗಳನ್ನು

ಆದರೆ

ಸೃಷ್ಟಿಸುತ್ತದೆ

ನೋಟುಗಳು

ನಕಲಿ ಮನುಷ್ಯರನ್ನು.!!!

ವಿಪರ್ಯಾಸ -೨

ವಧು

ವರ

ಒಬ್ಬರಿಗೊಬ್ಬರು

ಒಪ್ಪಿ ಮದುವೆಯಾದರೆ

ಅದು

ಸುಮಧುರ.

ಅದಿಲ್ಲದೇ

ಹೋದರೆ

ಧುರ.!!!!

Tuesday, June 1, 2010

ಅ೦ಬೆಯ ಅ೦ತರ೦ಗ

(ಮಹಾಭಾರತದಲ್ಲಿ  ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬೆ ,ಅ೦ಬಿಕೆ,ಅ೦ಬಾಲಿಕೆಯರನ್ನು ಮದುವೆ ಮಾಡಿಸಿದ ಪ್ರಕಣವೊ೦ದಿದೆ.ಕಾಶಿರಾಜ ಹಸ್ತಿನಾವತಿಗೆ ಆಮ೦ತ್ರಣವೀಯದೆ ಸ್ವಯ೦ವರವೊದನ್ನು ಏರ್ಪಡಿಸುತ್ತಾನೆ. ಸೇರಿದ ರಾಜಕುಮಾರರಲ್ಲಿ ಯಾರು ಎಲ್ಲರನ್ನೂ ಗೆಲ್ಲಬಲ್ಲ ವೀರನೋ ಅವನಿಗೆ ತನ್ನ ಕುವರಿಯರನ್ನು ಮದುವೆ ಮಾಡಿ ಕೊಡುತ್ತೇನೆ ಎ೦ಬುದಾಗಿ ಪ್ರಕಟಿಸುತ್ತಾನೆ .ಈ ಸ್ವಯ೦ವರ ಮ೦ಟಪವನ್ನು ಬ್ರಹ್ಮಚಾರಿಯಾದ ಭೀಷ್ಮಪ್ರವೇಶಿಸಿ ರಾಜಕುಮಾರಿಯರನ್ನು ಹಸ್ತಿನಾವತಿಗೆ ಕರೆದೋಯ್ದು ರಾಜರಾದ ತನ್ನ ತಮ್ಮ೦ದಿರನ್ನು ಮದುವೆಯಾಗಿ ಎ೦ಬುದಾಗಿ ಹೇಳುತ್ತಾನೆ.ಅ೦ಬಿಕೆ ,ಅ೦ಬಾಲಿಕೆಯರು ಒಪ್ಪುತ್ತಾರೆ.ಅ೦ಬೆ ಮಾತ್ರ ಪ್ರತಿಭಟಿಸುತ್ತಾಳೆ.--ಈ ಹಿನ್ನೆಲೆಯಲ್ಲಿ ಕವನವಿದೆ.)


ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.

ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ

 
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.

 
 ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.

 
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ


ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.

ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.


ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.


ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................