ಸ್ವಾಮೀ
ವ್ಯಾಪಾರಕ್ಕಿದೆ
ನನ್ನ ಕನಸುಗಳು
ಬೇಕಾಗಿದೆ ಗಿರಾಕಿಗಳು
ಲ೦ಚ ರಹಿತ ವ್ಯವಸ್ತೆ
ಬೆಳೆಸಬೇಕೆ೦ದುಕನಸು
ಸಾಕಾರಗೊಳಿಸುವರು
ಬೇಕಾಗಿದ್ದಾರೆ
ಸ್ವಾರ್ಥರಹಿತ ಪ್ರೀತಿ
ಬೆಳೆಸಬೇಕೆ೦ದು ಕನಸು
ಬೆಳೆಸ ಹೃದಯ
ಬೇಕಾಗಿದೆ
ಕಲ್ಮಶರಹಿತ ಊರ
ಬೆಳೆಸಬೇಕೆ೦ದು ಕನಸು
ಉಳಿಸುವ ಮನಸ್ಸು
ಬೇಕಾಗಿದೆ
ಕುಡಿತರಹಿತ
ವ್ಯಸನವಿರದಸಮಾಜ
ಬೆಳೆಸುವ ಕನಸು
ಜನರು ಬೇಕಾಗಿದೆ
ನಿಸ್ವಾರ್ಥ ನಾಯಕರು
ನಾಡು ನುಡಿಯ ಪ್ರೇಮಿಗಳು
ಬೇಕಾಗಿದ್ದಾರೆ
ನನ್ನ ಕನಸುಗಳು
ಮಾರಾಟಕ್ಕಿದೆ
ಸ್ವಸ್ಥ ಗಿರಾಕಿಗಳು
ಬೇಕಾಗಿದ್ದಾರೆ
..................
ಕೂಸು ಮುಲಿಯಳ ರವರೆ;ನಿಮ್ಮ ಕನಸಿನ ಕವನ ಚೆನ್ನಾಗಿದೆ,ಆದರೆ ನಿಮ್ಮ ಕನಸು ಮಾರಾಟವಾಗುವ ಸಾಧ್ಯತೆಗಳು ಕಡಿಮೆ.
ReplyDeleteನಿಮ್ಮ ವ್ಯಾಪಾರದಲ್ಲಿ
ReplyDelete"ಉಚಿತ,ಉಡುಗೊರೆ"
ಇತ್ಯಾದಿಗಳಿಗೆ ಅವಕಾಶಗಳಿಲ್ಲವಲ್ಲಾ!!
ಈ ಕಾಲದಲ್ಲಿ ಮಾರಾಟವಾಗುವುದು ಕಷ್ಟ!
ಏನಿದ್ದರೂ ಕವನದ ಆಶಯ ಚೆನ್ನಾಗಿದೆ.
"ಅಭಿನಂದನೆಗಳು"
ಕನಸು ಚೆ೦ದವಿದೆ, ವ್ಯಾಪಾರ ಮಾಡುವ ಬಯಕೆಯಿದೆ. discount ಬಗ್ಗೆ ಎಲ್ಲೂ ತಿಳಿಸಿಲ್ಲವಲ್ಲ..!
ReplyDeleteಶುಭಾಶಯಗಳು
ಅನ೦ತ್
ಸರ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ReplyDeleteಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ
SATISH N GOWDA
http://nannavalaloka.blogspot.com/
(ಸರ್ ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ ........
ReplyDeleteಸುಂದರ ಕವನಗಳು ,ಸುಮಧುರ ಸಾಲುಗಳು , ಅದ್ಭುತ ಕಲ್ಪನೆ ..... ಸುಂದರವಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ .... ನಿಮಗೆ ನನ್ನವಳಲೋಕಕ್ಕೆ ಆತ್ಮಿಯ ಸ್ವಾಗತ)
ಸತೀಶ್ ..ಬರೆದ ಈ ಸಾಲುಗಳು ನನ್ನ ಬ್ಲಾಗಿನಲ್ಲೂ ಇವೆ.
ಸ್ವಲ್ಪ ವಾಕ್ಯಗಳನ್ನು ಬದಲಾಯಿಸಿಕೊಂಡರೆ ಚೆನ್ನ ಅಲ್ಲವೇ?
ಈ ರೀತಿ ಎಲ್ಲ ಕಡೆಗೂ Copy & Paste ಮಾಡೋದು....
ಓದುವಾಗ ಬೇಜಾರಾಗುತ್ತೆ...ಅಲ್ವಾ??
ಕೃಷ್ಣಮೂರ್ತಿ,ಕೆ.ಕೆ.,ಅನ೦ತರಾಜ್,ರವರೀಗೆ ಧನ್ಯವಾದಗಳು.ನೀವೆಲ್ಲ ಅ೦ದ೦ತೆ ಮಾರಾಟ ಕಷ್ಟವಾದರೂ ಕನಸಿನ ಆನ೦ದ ಅನುಭವಿಸಬಹುದಲ್ಲ.
ReplyDeleteಸತೀಶ ಗೌಡರಿಗೆ ಧನ್ಯವಾದಗಳು.
ReplyDeleteಕೆ.ಕೆ.ಯವರೇ,ನೀವ೦ದ೦ತೆ ಇವರು(ಸತೀಶ ಗೌಡ) ಬಹುಶ ಓದುಗರಲ್ಲ.ಯಾವುದೋ ಪೂರ್ವ ನಿರ್ಧರಿತ ಆಶಯದೊ೦ದಿಗೆ ನಮ್ಮ ಬ್ಲಾಗ್ ಗೆ ಬ೦ದಿರಬೇಕು.ಅವರಿಗೆ ಪ್ರಯೋಜನವಾಗುವುದಿದ್ದಲ್ಲಿ ನಮಗೆ ಬೇಸರವಾದರೂ ಚಿ೦ತೆಯಿಲ್ಲ,ಅವರಿಗೆ ಒಳ್ಳೆಯದಾಗಲಿ. ಏನ೦ತೀರಿ..?
ReplyDeleteಆಶಯ ಸುಂದರವಾಗಿದೆ, ಈಡೇರಿಸುವ ಪ್ರಯತ್ನ ಮಾಡೋಣ.
ReplyDeleteಒಳ್ಳೆಯ ವ್ಯಾಪಾರ ಶುರು ಮಾಡಿದಿರಾ . . .
ಕುಸು ಅವರೆ,
ReplyDeleteಒಳ್ಳೆಯ ಸರಕುಗಳನ್ನು ಇಟ್ಟುಕೊಂಡಿದ್ದೀರಿ. ನಿಮ್ಮ ವ್ಯಾಪಾರ ಸಾಧಿಸಲಿ, ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತೇನೆ!
ವ್ಯಾಪಾರಕ್ಕೆ ಸುಮಾರು ಸರಕು ಪೇರಿಸಿ ಕವನ ಬರೆದದ್ದು ಚೆನ್ನಾಗಿದೆ, ಹಾರ್ದಿಕ ಶುಭಾಶಯಗಳು, ವ್ಯಾಪಾರ ಚೆನ್ನಾಗಿ ನಡೆಯಲಿ !
ReplyDeleteನಾಗರಾಜ್, sunaath,ವಿ.ಆರ್.ಭಟ್ ರವರೇ ನಿಮ್ಮೆಲ್ಲರ ಹಾರೈಕೆಯಲ್ಲಿ ಒಳ್ಳೆಯ ಗಿರಾಕಿಗಳು ಸಿಗಲೆ೦ದು ಹಾರೈಸುತ್ತೇನೆ.ಧನ್ಯವಾದ.
ReplyDeleteಕುಸು ಮೂಲಿಯವರೇ,
ReplyDeleteಚೆಂದದ ಆಶಯ..ಆದರೆ ತುಂಬಾ ಅಸಾಧಾರಣ ’ಬೇಕು’ಗಳಿವೆ !
ನಿಮ್ಮ ಕವನ ಆದರ್ಶ ಪೂರ್ಣವಾಗಿದ್ದು ಅರ್ಥಗರ್ಭಿತವಾಗಿದೆ. ಕನಸುಗಳು ವ್ಯಾಪಾರದ ಸರಕಾಗುವುದು ಬೇಡ. ನನ್ನ ಮಗಳದ್ದು ಕನಸುಗಳದೇ ಬ್ಲಾಗ್ ಗಳಿವೆ..(ಲಿ೦ಕ್ ಈ ಕೆಳಕ೦ಡ೦ತಿದೆ.)ಒಮ್ಮೆ ಭೇಟಿ ಕೊಡಿ ಹಾಗೂ ನನ್ನ ಬ್ಲಾಗ್ ಗೂ ಬನ್ನಿ.
ReplyDeletehttp://kandenanondhukanasu.blogspot.com/, http://mydreamwritings.blogspot.com/, http://nanaganisidhdhu.blogspot.com/
ಸರ್ ಸ್ವಾರ್ಥಿಗಳ ಸಂತೆಯಲ್ಲಿ ನಿಸ್ವಾರ್ಥಿಗಳ ಬೇಟೆಗೆ ಹೊರಟರೆ ಹಿಂದಿರುಗುವುದು ಬರಿಕೈ ನಲ್ಲೆ,ಅವರನ್ನೇ ಇವರೆಂದು ಕೊಳ್ಳದಿದ್ದರೆ, ಸಂತಸವೇ ಸೊನ್ನೇ . ನಿಮ್ಮ ಕವನದ ಆಶಯ ತುಂಬಾ ಚೆನ್ನಾಗಿದೆ.ಅಭಿನಂದನೆಗಳು
ReplyDeleteನಿಮ್ಮ ಕನಸುಗಳನ್ನು ಯಾರಾದರೂ ಕೊಂಡಲ್ಲಿ ನಂಗೂ ತಿಳಿಸಿ.. ನಾನು ಮಾರಬೇಕಿದೆ..
ReplyDeleteಕವನ ಚೆನ್ನಾಗಿ ಮೂಡಿ ಬಂದಿದೆ,
ReplyDeleteಕವಿಯ ಆಶಯವೇ ನನ್ನದೂ.
ಅಪ್ಪ-ಅಮ್ಮ(Appa-Amma,
ReplyDeleteprabhamani nagaraja
ಕಲರವ, ಕತ್ತಲೆ ಮನೆ,ಗುಬ್ಬಚ್ಚಿ ಸತೀಶ್,
ವಸಂತ್,ಎಲ್ಲರಿಗೂ ದನ್ಯವಾದಗಳು.
ಸುಂದರ ಆಶಯದ ಕವನ. ನಮ್ಮಿಂದಲೇ ಪ್ರಾರಂಭಿಸೋಣ ಅಲ್ಲವೇ!
ReplyDeleteಒಹ್... ಮನ ತಡವಿದ ನಿಮ್ಮ ಭಾವನೆಗಳು. ...ಪದ ರೂಪ ದಲ್ಲಿ ಹೊಮ್ಮಿದೆ.
ReplyDelete