ನಿನ್ನ ಹೊಳೆವ ಕಣ್ಣಿನ
ಕಾ೦ತಿಯಾದರೆ ನಾನು,
ನಿನ್ನ ನೋಟಕೊ೦ದು ಪಥವಾಗಲೇನು?
ನಿನ್ನ ಹಣೆಯ ಮೇಲಿನ
ಮು೦ಗುರುಳಾದರೆ ನಾನು,
ನಿನ್ನ ಸನಿಹಾಗಲೇನು?
ನಿನ್ನ ಕೆನ್ನೆಯ ಮೇಲೆ
ಚ೦ದ್ರನಾದರೆ ನಾನು,
ನಿನ್ನ ಬಾಳಲಿ ಬೆಳಕಾಗಲೇನು?
ನಿನ್ನ ನಗುವಿನ
ಭಾವವಾದರೆ ನಾನು,
ನಿನ್ನ ಜೀವದ ಉಸಿರಾಗಲೇನೂ?
ನಿನ್ನ ಬಡಿವ ಹೃದಯದ
ತುಡಿತವಾದರೆ ನಾನು,
ನಿನ್ನ ಮನಸಿನ ಬ೦ಧಿಯಾಗಲೇನು?
ನಿನ್ನ ಭಾವದ
ವೀಣೆಯಾದರೆ ನಾನು,
ನಿನ್ನ೦ತರ೦ಗವ ಮೀಟಲೇನು?
ಬಾಳ ಬೆಳಗಲೇನೂ....
ಬೆಳಗಲೇನೂ........
.........
ಕವನ ಬಹಳ ಚೆನ್ನಾಗಿ ಮೂಡಿಬಂದಿದೆ, ಭಾವಗಳ ಲೋಕದಲ್ಲಿ ಯಾರೂ ಏನನ್ನೂ ಚಿಂತಿಸಬಹುದಲ್ಲವೇ ? ಅದಕ್ಕೆ ಯಾರಿಂದಲೂ ನಿರ್ಬಂಧವಿಲ್ಲವಲ್ಲ ? ಹೀಗಾಗಿ ಗೆಳತಿಯೊಬ್ಬಳ ಕಲ್ಪನೆಯಲ್ಲಿ ವಿಹರಿಸಿ ಅವಳ ಭಾಗವಾಗಿ ತಾನೇನಾದರೆ ಏನನ್ನು ಕೊಡಬಹುದು ಎಂದು ಬಿಂಬಿಸಿದ್ದೀರಿ, ಅಭಿನಂದನೆಗಳು ಮತ್ತು ಧನ್ಯವಾದಗಳು
ReplyDeleteಕುಮಾರ,
ReplyDeleteಈ ಮಧುರವಾದ ಭಾವಗೀತೆಯನ್ನು ಕೇಳಿದ ಯಾವುದೇ ಹುಡುಗಿಯಾದರೂ ನಿಮ್ಮ ಬಿನ್ನಹಕ್ಕೆ ಒಪ್ಪುವಳು ಎನ್ನುವ ಭರವಸೆ ನನಗಿದೆ!
ಪ್ರೇಮದ ಮಧುರ ನಿವೇದನೆ..
ReplyDeleteever green topic..
ಸುಂದರವಾಗಿ ಓದುಗರ ಮನ ಮುಟ್ಟುವಂತೆ ಅಲ್ಲ..ಗೆಲ್ಲುವಂತಿದೆ..
ಮುದ್ದಾದ ಕವನಕ್ಕೊಂದು...ಪ್ರೀತಿಯ ಮುತ್ತು.
very romantic...nice one:)
ReplyDeleteರಸಸಮಯದ ಕವನ ಮುದ ನೀಡಿತು.
ReplyDeleteವಿ.ಆರ್.ಭಟ್ಟರಿಗೆ ಧನ್ಯವಾದಗಳು.
ReplyDeleteಸುನಾಥ್ ರವರೇ ಒಪ್ಪಿದವರೇ ಅಪ್ಪಿಕೊ೦ಡಿರುವಾಗ ಚಿ೦ತಿಲ್ಲ. ಧನ್ಯವಾದಗಳು.
ReplyDeleteವೆ೦ಕಟಕೃಷ್ಣರಿಗೆ ಪ್ರೀತಿಯ ಅಭಿನ೦ದನೆಗೆ ಧನ್ಯವಾದ.
ReplyDeleteಶ್ರೀಕಾ೦ತ್ ಮತ್ತು ಸೀತಾರಾಮ್ ರವರೀಗೆ ಧನ್ಯವಾದ.
ReplyDeleteಶುದ್ದ ಒಲವಿನ ನವಿರಾದ ಭಾವನೆಗಳನ್ನು ಬಹಳ ಚೆನ್ನಾಗಿ ಬರಹವಾಗಿಸಿದ್ದಿರಿ. ಬಹಳ ಚೆನ್ನಾಗಿದೆ ಕವನ - ಭಾವನೆಯ ಅಭಿವ್ಯಕ್ತಿ.
ReplyDeleteಬಹಳ ಚೆನ್ನಾಗಿದೆ...
ReplyDeleteಕು.ಸು.ಮುಲಿಯಾಲ ರವರೆ ;ಭಾವಪೂರ್ಣ ಕವಿತೆ ತುಂಬಾ ಚೆನ್ನಾಗಿದೆ.ಧನ್ಯವಾದಗಳು.
ReplyDeleteಸುಬ್ರಮಣ್ಯ...
ReplyDeleteಒಪ್ಪಿಕೊಂಡವಳು..
ಅಪ್ಪಿಕೊಂಡರೆ...
ತಪ್ಪಿಲ್ಲದಿದ್ದರೆ ಎಲ್ಲವೂ ಒಪ್ಪೇ...
ಭಾವಗಳು ಸುಂದರವಾಗಿ ಚಿತ್ರಿತವಾಗಿದೆ...
ಅಭಿನಂದನೆಗಳು...
ಕುಸು ಮುಲಿಯಾಳರವರೆ ಸೊಗಸಾದ ಭಾವಗೀತೆ ಬರೆದಿದ್ದೀರಿ.ಅಭಿನಂದನೆಗಳು
ReplyDeleteಕಲರವ ,ವಸಂತ್ ರವರೀಗೆ ಧನ್ಯವಾದಗಳು.
ReplyDeleteಮಂಗ್ಳೂರ ಮಾಣಿ,Shrikrishna Bhat M ರವರೀಗೆ ಧನ್ಯವಾದಗಳು.
ReplyDeleteDr.D.T.krishna Murthy,ಯವರೀಗೆ ಧನ್ಯವಾದಗಳು.
ReplyDeleteಸಿಮೆಂಟು ಮರಳಿನ ಮಧ್ಯೆ ಪ್ರಕಾಶಣ್ಣಾ,
ReplyDeleteಒಪ್ಪಿಕೊಂಡವಳು..
ಅಪ್ಪಿಕೊಂಡರೆ...
ತಫ್ಫೇನು..., ಎಲ್ಲವೂ ಒಪ್ಪೇ.
ಇಲ್ಲದಿರೆ,
ಜೀವನವೆಲ್ಲ ಬರೇ ಸಪ್ಪೆ.
ನಮಸ್ತೆ,
ReplyDeleteನಿಮ್ಮ ಭಾವದ ಗೆಳತಿಯ ಭಾವನೆಗಳ ಚೆನ್ನಾಗಿ ಅರಿತಿದಿರ..
ಸುಂದರವಾದ ಸಾಲುಗಳು..
ಪ್ರೋತ್ಸಾಹಕ್ಕೆ ಧನ್ಯವಾದಗಳು!
ReplyDeleteಶುಭವಾಗಲಿ.
ಪ್ರೀತಿಯಿಂದ,
ಅದಮ್ಯಾಯುಷ್ಯ