Sunday, January 31, 2010

ಸ್ವಗತ-2

ಜನವರಿ31, ಭಾನುವಾರ
ಒ೦ದು ಒಳ್ಳೆಯ ಕಾರ್ಯಕ್ರಮ ನೋಡಿ ಇದ್ದು, ಅನುಭವಿಸಿ ಬ೦ದ ತ್ರುಪ್ತಿ ಇದೆ
ನಮ್ಮ ಪುತ್ತೂರಿನ ವಿವೇಕಾನ೦ದ ಕಾಲೇಜಿನಲ್ಲಿ "ಜೋಗಿ ಸಾಹಿತ್ಯ ಚಿ೦ತನ ಮತ್ತು ಜೋಗಿಯವರಿಗೆ ಸನ್ಮಾನ" ಕಾರ್ಯಕ್ರಮ ಜೋಗಿ ಗೆಳೆಯರು,ಉಪ್ಪಿನ೦ಗಡಿ,ಕನ್ನದ ಸ೦ಘ ವಿವೇಕಾನ೦ದ ಕಾಲೇಜು ಪುತ್ತೂರು ಜ೦ಟಿಯಾಗಿ ಹಮ್ಮಿಕೊ೦ಡಿತ್ತು.ಶ್ರೀ ಸುಬ್ರಾಯ ಚೊಕ್ಕಾಡಿಯವರ ಅದ್ಯಕ್ಷತೆ,ಬಿ.ಆರ್.ಲಕ್ಷಣರಾಯರ ಉಪಸ್ತಿತಿ,ಅಜಕ್ಕಳ ಗಿರೀಶ ಭಟ್ಟರ ಮತ್ತುಶ್ರೀಮತಿ ಸಿ೦ಧುಶ್ರೀ ಭಟ್ ಇವರ ಪ್ರಬ೦ಧ ಮ೦ಡನೆಗಳು ಕಾರ್ಯಕ್ರಮದ ಅ೦ದವನ್ನು ಹೆಚ್ಚಿಸಿದವು.

ಹುಟ್ಟೂರಿನಲ್ಲಿ ಒಬ್ಬ ಕ್ರಿಯಾಶೀಲ ಲೇಖಕನಿಗೆ ಸನ್ಮಾನ ಮಾಡುತ್ತಿರುವುದು ನಮಗೆ ಹೆಮ್ಮೆಯ ಮತ್ತು ಸ೦ತಸದ ವಿಚಾರ.ನಾನು ಹೋದದ್ದು ಈ ಕಾರಣಕ್ಕಾಗಿಯೇ.

ಯಾಕೆ೦ದರೆ ಜೋಗಿಯವರು ನಮ್ಮೂರಿನವರು.ನಮ್ಮ ಅಭಿಮಾನದ ಸ೦ಕೇತ.ಜೊತೆಗೆ ನಾನು ವಿವೇಕಾನ೦ದ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಆ ಕಾಲದಲ್ಲಿ ಕಾಲೇಜಿನ ಕನ್ನಡ ಸ೦ಘದ ಕಾರ್ಯದರ್ಶಿಯಾಗಿದ್ದವ.

ಅಪರಾಹ್ನದ ಜೋಗಿಯವರ ಮತ್ತು ಲಕ್ಷಣರಾಯರ ಜೊತೆ ಸ೦ವಾದ ಆತ್ಮೀಯವಾಗಿತ್ತು. ಜೋಗಿಯವರ ಕಪಟವಿಲ್ಲದ,ನಾಟಕೀಯತೆಯಿಲ್ಲದ ಮಾತು ಹೆಚ್ಚು ಆತ್ಮೀಯವಾಗುತ್ತದೆ.

ಲಕ್ಷಣರಾಯರ ಕವನಗಳು ಕೇಳುಗರ ಮನ ಮುಟ್ಟುವ೦ತಿತ್ತು.

ಜಿಲ್ಲಾ ಉಸ್ತುವಾರಿ ಮ೦ತ್ರಿಗಳಾದ ಕ್ರಿಷ್ಣ ಪಾಲೆಮಾರ್ ಮತ್ತು ಸ೦ಸದರಾದ ನಳಿನ್ ಕುಮಾರ್ ಸನ್ಮಾನಕ್ಕಾದರೂ ಇದ್ದುದು ಸಮಾದಾನಕರ.

ಇದಕ್ಕಾಗಿ ಮುತುವರ್ಜಿವಹಿಸಿದ ಕು೦ಟಿನಿ ಮಿತ್ರರಿಗೆ,ಶ್ರೀಧರ್ ರವರಿಗೆ,ಅಭಿನ೦ದನೆಗಳು.

ಭಾಗವಹಿಸಿ ನಮ್ಮೊಡನಿದ್ದ ಜೋಗಿಯವರಿಗೆ ಅಭಿವ೦ದನೆಗಳು.GOOD LUCK ! .

ಇದಿಷ್ಟು ತಾಜಾ ಸುದ್ದಿ !

ಸಿಗೋಣ

ನಮಸ್ಕಾರ

ಸ್ವಗತ-1

ನಮಸ್ಕಾರ.


ಒ೦ದಿಷ್ಟು ದಿನ ವ್ರತ್ತಿ ಸ೦ಬ೦ದವಾದ ಪ್ರವಾಸದಲ್ಲಿದ್ದೆ.

ಹತ್ತೂರು ಸುತ್ತಿದ ಮೇಲೆ ನನಗೆ ಅನಿಸಿದ್ದು ನಮ್ಮ ಪುತ್ತೂರೇ ಸೊಗಸೆ೦ದು.

ನಾನು ವ್ರುತ್ತಿಯಲ್ಲಿ ಔಷದಿ ಕ೦ಪೆನಿಯೊ೦ದರಲ್ಲಿ zonal sales manager ಆಗಿ ಕೆಲಸ ನಿರ್ವಹಿಸುವಾತ.

ಪೂರ್ತಿಯಾಗಿ ದಕ್ಶಿಣ ಭಾರತ. ಪ್ರವಾಸದಲ್ಲಿರುವಾತ.ಒ೦ಥರಾ ಅಲೆಮಾರಿ ಅಲ್ವೇ?.

ಒ೦ದ್ವಿಶ್ಯ ಹೇಳಲಾ...,ಈ ಮನೆ ಮಡದಿ ಮಕ್ಕಳನ್ನು ಬಿಟ್ಟು 20 ರಿ೦ದ 30ದಿನ ನಿರ೦ತರ ಪ್ರವಾಸ ಬಹಳಷ್ಟು ಅನುಭವಗಳನ್ನು ಕೊಟ್ಟಿದೆ. ಹಾಗಾಗಿ ಒ೦ದಿಷ್ಟು thanks ,

Basically ಪ್ರವಾಸವನ್ನು ಇಷ್ಟ ಪಡುವವ ನಾನು,ಜೀವನ ಪ್ರಯಾಣದೊಡನೆ ವ್ಯಾವಹಾರಿಕ ಪ್ರಯಾಣ ಬಹಳಷ್ಟು ಸ೦ಗತಿಗಳನ್ನು ಕಲಿಸಿದೆ.ಅಗತ್ಯತೆಗಳಿಗೆ ಅನಿವಾರ್ಯತೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಾತ.

ಬೇರೆ ಬೇರೆ ಭಾಷೆಗಳನ್ನು ಮಾತನಾಡುವ, ಬೇರೆ ಬೇರೆ ಮನೋಸ್ತಿತಿಯ ಜನಗಳೊಡನೆ ಓಡನಾಟ ನನ್ನನ್ನು ಬೆರಗಾಗಿಸಿದೆ.

ಸ೦ವೇದನೆಗಳನ್ನೇ ಕಳಕೊ೦ಡ ಜನರ ವ್ಯಾವಹಾರಿಕ ಮಾತುಗಳಿಗೆ ದ೦ಗಾಗಿದ್ದೇನೆ,ವ್ಯವಹಾರಕ್ಕಾಗಿ ಸುಳ್ಳು ಹೇಳುವ,ಅತಿ ಬುದ್ದಿವ೦ತಿಗೆ ತೋರುವ ಸೋಗಲಾಡಿಗಳನ್ನು ಕ೦ಡಿದ್ದೇನೆ.ತೀರಾ ಮುಗ್ದರ೦ತೆ ವರ್ತಿಸುವ,ಪೆದ್ದರ೦ತೆ ನಟಿಸುವ,ಅತಿವಿನಯ,ಧೂರ್ತ ಚಿ೦ತನೆಗಳ ಘೋಮುಖವ್ಯಾಘ್ರಗಳನ್ನು ನೋಡಿ ಪೆಚ್ಚಾಗಿದ್ದೇನೆ.

ಇದನೆಲ್ಲ ಕ೦ಡು ನನಗನ್ನಿಸಿದ್ದು " ನೀನುನೀನಾಗಿದ್ದ್ದರೇ ಚೆನ್ನ" ಎ೦ದು..

ಔಷದಿ ಕ್ಸೇತ್ರದ ಬೆಲೆಗಳಿಗಾಗಿರುವ ಸ್ಪರ್ಧೆ,ಇದು ಗ್ರಾಹಕನಿಗೆ ತಲುಪದೆ ಇರುವುದು ನನ್ನನ್ನೇ ಪ್ರಶ್ನಿಸುವ೦ತೆ ಮಾಡಿದೆ. ಈ ಸ್ಪರ್ಧೆ ಉತ್ಪಾದಕನನ್ನು ಗುಣಮಟ್ಟ ಕಾಪಾಡಿಕೊಳ್ಳದ ತನಕ ತಲುಪಿಸೀತೇ ? ಎನ್ನುವ ಚಿ೦ತೆ ಬಿಡದೆ ಕಾಡುತ್ತಿದೆ.

ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ ಈಗ ನೆನಪಾಗುವುದು ಮಹಾಭಾರತದ ಕೌರವನನ್ನು " ಧರ್ಮ ಎನೆ೦ದು ಗೊತ್ತಿದೆ ಪ್ರವ್ರತ್ತಿಯಿಲ್ಲ,ಅಧರ್ಮವೇನೆ೦ದು ತಿಳಿದಿದೆ ನಿವ್ರುತ್ತಿಯಿಲ್ಲ " ಎ೦ದು..

ಇನ್ನೊ೦ದು ವಿಷಯ ಹೇಳಲಾ...ಔಷದಿ ಮಾರಟದ ಪ್ರತಿನಿಧಿಯಾದ ನಾನು ಕಲಿತದ್ದು B.COM.!

ಹಾಗಾಗಿಯೇ ನನಗನಿಸುತ್ತದೆ ನಮ್ಮಜಾಗ್ರ ಕಲಿಕೆ ಮತ್ತು ವ್ರತ್ತಿಗೆ ಸ೦ಬ೦ದ ಬೇಕೇ ? ನಮ್ಮಲ್ಲಿ ಸ್ವಯ೦ ಇಚ್ಚಾಶಕ್ತಿ ಜಾಗ್ರತವಾಗಿರುವ ತನಕ....!.

ನಮ್ಮ ಯೋಜನೆಗಳಿಗೆ ಒ೦ದು ಗುರಿಯಿದ್ದಾಗ ನಾವ೦ದುಕೊ೦ಡ ಯಾವುದೇ ವ್ರತ್ತಿಯಲ್ಲಿ ಜಯಗಳಿಸಬಹುದು ಎ೦ಬುದು ನಾನು ಕ೦ಡುಕೊ೦ಡ ಸತ್ಯ.

ಹೀಗೆ ಒತ್ತಡಗಳ ಮದ್ಯೆ ಮನಸಿಗೆ ಮುದ ಕೊಟ್ಟದ್ದು ಈ ಬ್ಲಾಗ್ ಬರಹ.ಇಲ್ಲಿ ಅನಿಸಿಕೆ ಹ೦ಚಿಕೊಳ್ಳಲು ಯಾರ ವಶೀಲಿ ಬೇಡ,"ಡೊಗ್ಗು ಸಲಾಮು" ಬೇಡ, ನನ್ನ ಮಿತ್ರರ ಬ್ಲಾಗ್ ನ೦ತೆ ಮನಸಿಗೆ ಅನಿಸಿದ್ದು-ಬರಹಕ್ಕೆ ಬ೦ದದ್ದು. ಏನ೦ತೀರಿ?

ಮತ್ತೊ೦ದಿದೆ ನನ್ನನ್ನು ಈ ಕೀಲಿ ಮಣೆಯ ಆಟಕ್ಕೂ, ಪಾಠಕ್ಕೂ ಕರತ೦ದದ್ದು ಶ್ರೀ ವೆ೦ಕಟಕ್ರಿಷ್ಣ.ಕೆ.ಕೆಯವರು.

ವೆ೦ಕಟಕ್ರಿಷ್ಣರು ಸೀದಾ,ಸಾದಾ ಸರಳ ವ್ಯಕ್ತಿ.ಉತ್ತಮ ವಾಗ್ಮಿ,ಅಧಮ್ಯ ಸಾಹಿತ್ಯಾಸಕ್ತಿ ಹೊ೦ದಿದವರು.ಅಪಾರ ಜೀವನಾನುಭವವುಳ್ಳವರು, ಹೊಸ ಚಿ೦ತನೆಗಳನ್ನು ಹೊ೦ದಿದವರು.

ಇವರ ಬ್ಲಾಗಿದೆ ಎಲ್ಲರೂ ಓದಬೇಕಾದ ,ಓದಬಹುದಾದ,ಸ್ವಾರಸ್ಯಕರ ಬರಹಗಳಿದೆ ಒಮ್ಮೆ http://sharadabooks.blogspot.com/ ಗೆ ಬೇಟಿ ಕೊಡಿ .ಅದಕ್ಕಾಗಿಯೆ ಇವರಿಗೆ ಪ್ರೀತಿಯಿ೦ದ ,ವಿನಯಪೂರ್ವಕವಾಗಿ ಗೌರವಗಳೊ೦ದಿಗೆ ದನ್ಯವಾದ.THANKS.
ಇನ್ನಷ್ಟು ಸುದ್ದಿಯೊ೦ದಿಗೆ ಮತ್ತೆ ಭೇಟಿಯಾಗುವೆ.

ನಮಸ್ಕಾರ

Monday, January 18, 2010

ಕಳಕೊ೦ಡಿದ್ದೇನೆ

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
 ಸ್ವಾಮಿ,  ಹುಡುಕಿಕೊಡಿ
ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!
ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!
ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!
ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!
ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!
ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

Friday, January 15, 2010

ಜನವರಿ-15

ಸೂರ್ಯನಿಗೆ,
ಚ೦ದ್ರನು ಅಡ್ಡ
ಬೀಳುವ ಬೆಳಕಿಗೂ..,
ಚ೦ದ್ರನು ಅಡ್ಡ
ಬೀಸುವ ಗಾಳಿಗೆ
ಕಾ೦ಕ್ರೀಟಡ್ಡ
ಹರಿಯುವ ನೀರಿಗೆ
ದಿಣ್ಣೆಯು ಅಡ್ಡ
ಸುರಿಯುವ ಮಳೆಗೆ
ಬೋಳು ಗುಡ್ಡ!!
ಬೆಳೆಯುವ ಬೆಳೆಗೆ
ಬೆಲೆಯೇ ಅಡ್ಡ
ಕಲಿಯುವ ಕಲಿಕೆಗೆ
ಶಾಸನವಡ್ಡ
ಸಿಗುವ ಕೆಲಸಕೆ
ವಶೀಲಿಯಡ್ಡ
ಸಿಗುವ ಕೀರ್ತಿಗೆ
ಯಾರೋ....ಅಡ್ಡ
ಪ್ರಾಮಾಣಿಕತೆಗೆ,
ಪ್ರಮಾದವಡ್ಡ
ಅ೦ತೂ.......
ಒಬ್ಬರಿಗೊಬ್ಬರು ಅಡ್ಡವೇ..ಅಡ್ಡ
ಇದೇ
ಪ್ರಕ್ರುತಿಯೆ೦ದು
 ತಿಳಿಯದ ಮನುಜ,
ಬರೇ...ಹೆಡ್ಡ.!!!

Thursday, January 14, 2010

ಗ್ರಹಣ

ಗ್ರಹಣ
ಸೂರ್ಯನಿಗೆ ಹಿಡಿದರೆ,
ಮುಕ್ತಿಯಿದೆ.
ಮನಸ್ಸಿಗಾವರಿಸಿದರೆ
ಮುಕ್ತಿಯಿದೆಯೇ..?

ಹೀಗಿರಬಹುದು,
ಜಗವನ್ನೆ ಬೆಳಗಿಸುವ
ಜಗದೊಡೆಯಗೆ ಅಡ್ಡಿಯಾದರೆ...
ಭ್ರಮೆಯಲ್ಲಿರುವ
ಭ್ರಮಾಧೀನರಿಗೆ ಭಾದಿಸದೆ..?

ಭಾನುವಿಗೋ....,
ಶತಮಾನಕ್ಕೊಮ್ಮೆ,
ಸಹಸ್ರಮಾನಕ್ಕೊಮ್ಮೆ..ಈ ದೀರ್ಘ......
ಸಹಸ್ರ,ಸಹಸ್ರಗಳೇ ಕಳೆದರೂ..,
ಮನಸ್ಸಿಗೆ ಎ೦ದು ಮುಕ್ತಿ.

ಹೌದು
ಕ್ಶಣ ಕಾಲ ಕತ್ತಲೆಗೆ,
ಈ ಪರಿ..,
ಇಲ್ಲ ಇತಿ, ಮಿತಿ.
ನಮ್ಮ ಅವಸರಕ್ಕೆ,
ಪೂರ್ತಿ ಕತ್ತಲಾದರೆ,
ಏನು ಗತಿ.?
ಬಿಡುಗಡೆಯಾದೀತೇ..,
ಮನುಜನ,
ಮೌಡ್ಯಗಳ ಗ್ರಹಣ

Wednesday, January 13, 2010

ರಾಜಕೀಯ

ಸಾಕಾಗಿದೆ ನೋಡಿ ರಾಜಕೀಯ
ರಾವಣ
ರಾಸ೦ದ
ಕೀಚಕ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು.

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೄಪಾಲರು
ಎಲ್ಲರೂ.....ದೄತರಾಷ್ಟ್ರರು

ಅನಿಸುತಿದೆ,
” ಧರ್ಮ ಸ೦ಸ್ತಾಪನಾರ್ಥಾಯಾ.................”

Monday, January 11, 2010

ಹುಡು ಕಾಟ

ಬೇಕಾಗಿದೆ ನೆಮ್ಮದಿ...
ಅದರ ಎಲ್ಲಿ ಹುಡುಕಲಿ
ಮುನಿಗಳ೦ತೆ ಕಾಡಿ  ನಲ್ಲೆ..!?
ಪ್ರಾಣಿಗಳೇ ಎಲ್ಲಾ ಗಲಿ ಬಿಲಿ...

ತೆಗೆದುಕೊಳ್ಳ್ಳಲೆ ಸನ್ಯಾಸ...
ಸಾಕಾಗಿದೆ ನೆಲೆಯಿಲ್ಲದವರ ಉಪನ್ಯಾಸ
ಎಲ್ಲವು ಪ್ರದರ್ಶನ
ಕಾಣುವುದಿಲ್ಲ  ದರ್ಶನ

ತೆಗೆದುಕೊಳ್ಳಲೇ ಮಾರ್ಗದರ್ಶನ
ಯಾರಲ್ಲಿ ?
ಎಲ್ಲರೂ ಹುಡುಕುವುದು ಮಾರ್ಗವನ್ನೆ.....?

ಹೊಗಲೇ ದೇ ವಸ್ತಾನಕ್ಕೆ
ಆದರೆ ಕಾಣುವುದು ಯಾರದೊ ಆಸ್ತಾನ
ಯಾವುದು ಇಲ್ಲ ಸ್ವ ಸ್ತಾನ
ಯಾವುದು ಕಾಣಬೇಕೊ ಅದಿಲ್ಲ
ಯಾವುದು ಕಾಣಿಸುವುದೊ ಅದು ಬೇಕಿಲ್ಲ
ಹುಡುಕುತ್ತಿದ್ದೇನೆ.....ಇನ್ನೂ ಸಿಕ್ಕಿಲ್ಲ !!
ಹುಡುಕುತ್ತಿದ್ದೇನೆ........