Saturday, February 26, 2011

ಕಳಕೊ೦ಡಿದ್ದೇನೆ

(ಓದಿರದ ಗೆಳೆಯರಿಗಾಗಿ ಮರು ಪ್ರಕಟಣೆ)

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
ಸ್ವಾಮಿ, ಹುಡುಕಿಕೊಡಿ.

ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!.

ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!.

ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!.

ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!.

ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!.

ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?