Saturday, February 26, 2011

ಕಳಕೊ೦ಡಿದ್ದೇನೆ

(ಓದಿರದ ಗೆಳೆಯರಿಗಾಗಿ ಮರು ಪ್ರಕಟಣೆ)

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
ಸ್ವಾಮಿ, ಹುಡುಕಿಕೊಡಿ.

ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!.

ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!.

ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!.

ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!.

ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!.

ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

18 comments:

 1. ಸುಂದರ ಕವನ ಸರ್!ಇಷ್ಟವಾಯಿತು.ಬ್ಲಾಗಿಗೆ ಬನ್ನಿ.ನಮಸ್ಕಾರ.

  ReplyDelete
 2. ಕವನ ತುಂಬಾ ಚೆನ್ನಾಗಿದೆ.
  ಮರು ಪ್ರಕಟಣೆ ಮಾಡಿದ್ದು ಒಳ್ಳೆಯದಾಯ್ತು.

  ReplyDelete
 3. ಸುಬ್ರಮಣ್ಯ..

  ತುಂಬಾ ಅರ್ಥಪೂರ್ಣವಾಗಿದೆ...

  ReplyDelete
 4. ಫೇಸ್ ಬುಕ್ಕಿನಲ್ಲಿ, ಟ್ವಿಟರ್ ಡೆಸ್ಕಿನಲಿ,
  ಚೆನ್ನಾಗಿದೆ

  ReplyDelete
 5. ಕೃಷ್ಣಮೂರ್ತಿಯವರಿಗೆ,ಮ೦ಜುಳಾರವ್ರೀಗೆ,ಧನ್ಯವಾದಗಳು

  ReplyDelete
 6. ಈ ಕವನವು ಸದಾಕಾಲದಲ್ಲೂ ಸಮಂಜಸವಾಗಿರುವದರಿಂದ ನೀವು ಮರುಪ್ರಕಟಣೆ ಮಾಡುವದು ಯೋಗ್ಯವೇ ಆಗಿದೆ!

  ReplyDelete
 7. ತುಂಬಾ ಚೆನಾಗಿದೆ.

  ReplyDelete
 8. Tumbaane chennagide sir, arthapurana...Ishta aitu...Nanna Blog gu barta iri...

  ReplyDelete
 9. ಚೆನ್ನಾಗಿದೆ. ಮರು ಪ್ರಕಟಣೆಗಾಗಿ ಧನ್ಯವಾದಗಳು.

  ReplyDelete
 10. tumbaa chennaagide,arthapoornavaada kavanakke dhanyavaadagalu.

  ReplyDelete
 11. ಚೆನ್ನಾಗಿದೆ ಸಾಲುಗಳು....

  ReplyDelete
 12. Nice lines...:)
  Nimmava,
  Raghu.

  ReplyDelete
 13. ಮತ್ತೊಮ್ಮೆ ಓದಿದೆ...ಮು೦ದುವರೆಸಿ... ಸಾಹಿತ್ಯ ಕೃಷಿಯನ್ನು..ಅಭಿನ೦ದನೆಗಳು.

  ಅನ೦ತ

  ReplyDelete
 14. channagide
  suragange.blogspot.com

  ReplyDelete
 15. Win Exciting and Cool Prizes Everyday @ www.2vin.com, Everyone can win by answering simple questions. Earn points for referring your friends and exchange your points for cool gifts.

  ReplyDelete
 16. Win Exciting and Cool Prizes Everyday @ www.2vin.com, Everyone can win by answering simple questions. Earn points for referring your friends and exchange your points for cool gifts.

  ReplyDelete