Saturday, September 4, 2010

ರಾವಣ

ಲ೦ಕೆಗೊ೦ದು ಸ್ಥಾನವ

ದೊರಕಿಸಿದೆ ವೈಕು೦ಠದ ದಾರಿಯಲಿ

ಚದುರಿಹೋದ ಗು೦ಪಿಗೊ೦ದು

ನೆಲೆಯನು ದೊರಕಿಸಿದೆ ಗುರುತಿನಲಿ.


ತ೦ಗಿಯೇ ಹೇತುವಾದಳು

ಸೀತಾಪಹರಣಕೆ

ಹಠವೇ ನಾ೦ದಿಯಾಯಿತು

ಜಾನಕಿಯ ಬಿಡದಿರಲಿಕೆ.


ಕದ್ದು ತ೦ದೆನೆ೦ಬುದು ಆರೋಪ

ತಾಯಿಯೇ ಸಾಕ್ಶಿಯಾಗಿ

ಇಟ್ಟಿಹೆನು ಅಶೋಕೆಯಲಿ

ಅರಿತಿಲ್ಲವೇನು?


ಸ್ರೀ ಲ೦ಪಟನೆ೦ದು ಜರೆದರು

ವಿನಾಕಾರಣ

"ಮ೦ಡೋದರಿಯನ್ನೆ ಸೀತೆಯೆ೦ದು

ಭ್ರಮಿಸಿದ ಹನುಮ"

ಹೀಗಿರುತ್ತಾ..,

ಜಾನಕಿಯ ಮೋಹಿಸಿದೆನೆ೦ಬುದು

ಕಾರ್ಯ..,ಕಾರಣ.!


ನನ್ನ ಕ್ಷೇತ್ರಕೆ ಬರಬೇಕಿತ್ತು

ಜಾನಕೀರಾಮ.

ನನಗೆ ಕಾಣಬೇಕಿತ್ತು

ಮೂಲ ರಾಮನ ಲಕ್ಶ್ಮೀಕಾ೦ತನ..!


ನಾನರಿತಿರುವೆ

ನಾನಾರೆ೦ದು,ರಾಮನಿಗೂ

ದೀರ್ಘವನವಾಸ,

ಪ್ರಾಪ್ಥಿಯೆ೦ದು..


ಬಿಡುಗಡೆಗೆ ನನಗೆ

ದಿನಬ೦ತೆ೦ದು, ಅರುಹಿದೆನು

ಮ೦ಡೋದರಿಗೆ

ಚಿ೦ತಿಸದಿರೆ೦ದು.

13 comments:

 1. ರಾವಣನ ಮನದಾಳ ಹೇಳಿದ೦ತಿದೆ.
  ಆದರೆ "ಮ೦ಡೋದರಿಯನ್ನೆ ಸೀತೆಯೆ೦ದು ಭ್ರಮಿಸಿದ ಹನುಮ" ಅರ್ಥವಾಗಲಿಲ್ಲ!

  ReplyDelete
 2. ಸೀತಾರಾಮ ಸಾರ್ "ಚೂಡಾಮಣಿ" ಪ್ರಕರಣದಲ್ಲಿ ಹನುಮ ಲ೦ಕೆಗೆ ಹೋಗಿ ಸೀತೆಗಾಗಿ ಹುಡುಕುತ್ತಿದ್ದಾಗ ಅಶೋಕವನಕ್ಕೆ ತಲುಪವಮೊದಲು ರಾವಣನ ಅ೦ತಪುರದಲ್ಲಿದ್ದ ಮ೦ಡೋದರಿಯನ್ನು ಕ೦ಡು ಕ್ಷಣಕಾಲ ಸೀತೆಯೇ ಎ೦ದು ಭ್ರಮಿಸುತ್ತಾನೆ.ಅ೦ದರೆ ಅ೦ತಹ ಸು೦ದರಿಯಾದ ಹೆ೦ಡತಿ(ಸೀತೆಗೆ ಸರಿ ಸಮಾನಳಾದ) ಮ೦ಡೋದರಿಯಿದ್ದೂ ,ಸೀತೆಯನ್ನು ಬಯಸಿದ ಎನ್ನುವುದು ರಾವಣನ ಮೂಲರಾಮನ ಕಾಣುವ ಕಾರ್ಯ..ಕಾರಣದ ರಹಸ್ಯ.ಎ೦ದನಿಸುತ್ತದೆ.ವ್ಯತ್ಯಾಸಗಳಿದ್ದರೆ ತಿಳಿಸಿ.

  ReplyDelete
 3. ನನಗೆ ಈ ಬಗ್ಗೆ ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು

  ReplyDelete
 4. ರಾವಣನ ಇನ್ನೊದು ಮುಖದ ಭಾವನೆಗಳ ಅನಾವರಣ ಚೆನ್ನಾಗಿದೆ. ಮಂಡ್ಯಾ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆಲವು ಹಳ್ಳಿಯಲ್ಲಿ ರಾವಣನನ್ನು ಪೂಜಿಸುತ್ತಾರೆ.ಈ ನೆನಪು ನಿಮ್ಮ ಕವಿತೆ ಓದಿದನಂತರ ಬಂತು. ನಿಮಗೆ ಥ್ಯಾಂಕ್ಸ್.

  ReplyDelete
 5. ಬಾಲುರವರೆ,ರಾವಣನನ್ನು ಪೂಜಿಸುವವರ ಬಗ್ಗೆ ಗೊತ್ತಿರಲಿಲ್ಲ .ಮಾಹಿತಿಗೆ ಮತ್ತು ಪ್ರತಿಕ್ರಿಯೆಗೆ ದನ್ಯವಾದ.

  ReplyDelete
 6. ಸೀತಾರಾಮ್ ಸರ್ ಹನುಮ ಮೊದಲಾಗಿ ಲಂಕೆಗೆ ಬಂದಾಗ ಮಂಡೋದರಿಯನ್ನೇ ಸೀತೆ ಎಂದುಕೊಳ್ಳುತ್ತಾನೆ, ಆದರೆ ಅಷ್ಟರಲ್ಲೇ ಅವನಿಗೆ ಆಕೆಯ ಅಮಂಗಳದ ಕುರುಹುಗಳು ಕಾಣುತ್ತವೆ, ಸೀತೆಗೆ ಅವು ಇರಲು ಸಾಧ್ಯವಿಲ್ಲವೆಂದು ಬಗೆಯುತ್ತಾನೆ ಅಲ್ಲವೇ ? ಮಂಡೋದರಿ ಕೂಡ ಮಹಾಪತಿವೃತೆಯೇ, ಆದರೆ ಸಂಚಿತಕರ್ಮ ಆಕೆ ಗಂಡನನ್ನು ಕಳೆದುಕೊಳ್ಳುವ ಪ್ರಸಂಗ ತಂದಿಡುತ್ತದೆ, ಇದನ್ನು ನೆನೆಸಿ ಮುಳಿಯಾಲರು ಹಾಗೇ ಬರೆದಿರಬೇಕು, ಚೆನ್ನಾಗಿದೆ ಮುಳಿಯಾಲರೆ, ಮತ್ತಷ್ಟು ಬರಲಿ.

  ReplyDelete
 7. ಪ್ರಿಯ ,ವಿ.ಆರ್.ಭಟ್ಟರೇ.ನನ್ನ ಅನಿಸಿಕೆ ನೀವು ಹೇಳಿದ್ದೇ ಆಗಿತ್ತು.ಪ್ರೋತ್ಸಾಹಕ್ಕೆ ಧನ್ಯವಾದಗಳು.

  ReplyDelete
 8. ರಾವಣನ ಇನ್ನೊ೦ದು ಮುಖವನ್ನು ಕವನದಲ್ಲಿ ಚೆನ್ನಾಗಿ ತಿಳಿಸಿದ್ದೀರಿ..ಧನ್ಯವಾದಗಳು.

  ReplyDelete
 9. ಮುಖವಾಡ ಕಳಚಿದಾಗಲಲ್ಲವೇ ಸತ್ಯದರ್ಶನವಾಗುವುದು.ಮನಮುಕ್ತಾರವರೇ ಧನ್ಯವಾದಗಳು.

  ReplyDelete
 10. Seethe Mandodhariya Magalu endhu ello odhidha nenapu Kumar!Hanuma Mandodhariyannu nodi gondhalakke olagagiddhu sahajave irabahudhu!!

  ReplyDelete
 11. ಹನುಮಂತ ಮಂಡೋದರಿಯನ್ನೇ ಕ್ಷಣಕಾಲ ಸೀತೆ ಎಂದು ಭ್ರಮಿಸಿದ್ದು ತಿಳಿದಿರಲಿಲ್ಲ, ತಮ್ಮ ಕವನ್ದಿಂದ ತಿಳಿಯುವಂತಾಯ್ತು. ಕವನ ಚೆನ್ನಾಗಿದೆ.

  ReplyDelete
 12. ನನಗು ಹನುಮಂತನ ಈ ವಿಷಯ ಹೊಸತು. ತಿಳಿಸಿದ್ದಕ್ಕೆ ಧನ್ಯವಾದಗಳು. ಬರೆಯುವ ಕಳೆ ಗೊತಿದ್ದರೆ ಏನನ್ನು ಏನು ಮಾಡಬಹುದಲ್ಲ??? ಆಶ್ಚರ್ಯ!!! ರಾವಣನ ಪಾತ್ರವನ್ನು ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದ್ದಿರಿ. ಧನ್ಯವಾದ. रावण ಸಿನಿಮಾಗಿಂತ ನಿಮ್ಮ ಕವನ ಸಾವಿರ ಪಾಲು ಹಿಡಿಸಿತು...

  ReplyDelete
 13. kusumuliyaalaravare ashokavanadalli seeteya roopadalli iddavalu "vedavati"endu odiddene,keliddene.ottare kavana chennaagide.abhinandanegalu

  ReplyDelete