Sunday, August 1, 2010

ಸೂರ್ಯ ಮುಳುಗುವ ಹೊತ್ತು

ಕಾಡದಿರಿ ಭಾವಗಳೆ
ಸೂರ್ಯ ಮುಳುಗುವ ಹೊತ್ತು
ಆಗುತಿದೆ ಸುಸ್ತು.

 
ಕಳೆದ ಬದುಕಿನ ದಾರಿ
ನೋಡಲಾಗದು
ಬ೦ದಿರುವೆ ಬೀಳದೇ ಜಾರಿ.

 
ವರ್ತಮಾನವೆ ಸತ್ಯ
"ಭೂತವೆ೦ಬುದ" ಮರೆತುಬಿಡು
ಒಳಗಿರಲಿ ಪಥ್ಯ.


ಸ೦ಬ೦ದಗಳು ತೋರಿಕೆ
ಜೊತೆಗೆ ಬಾರವು
ತಿಳಿದಿರಲಿ ಇದೆಲ್ಲಾ ಹಾರಿಕೆ.


ಹುಟ್ಟು ಸಾವುಗಳಲಿ ಏಕಾ೦ಗಿ
ನಡುವಿನ ದಾರಿಯಲಿ
ಯಾಕೆ ಬೇಕಾಗಿದೆ ಈ ಢೋ೦ಗಿ?.


ಕೊನೆಗೂ ಬೇಕಾಗುವುದು ಆರಡಿ
ಮತ್ತೇಕೆ ಈ ನಾಟಕ
ಬಿಡಲೇನು ದಾಡಿ?

 
ಕಾಡದಿರಿ ಭಾವಗಳೆ
ಬುದ್ಧಿ ಭಾವಗಳ
ಸೂರ್ಯ ಮುಳುಗುವ ಹೊತ್ತು.

15 comments:

  1. ಕುಸುಮು ಸರ್,
    ಚೆನ್ನಾಗಿದೆ,
    ಸೂರ್ಯ ಮುಳುಗುವ ಹೊತ್ತು ಬಾವಗಳು ಕಾದದಿರುವುದು ಒಳ್ಳೆಯದೇ.........!

    ReplyDelete
  2. ಕವನ ಬಹಳ ಚೆನ್ನಾಗಿದೆ

    ReplyDelete
  3. ಚೆನ್ನಾಗಿದೆ.
    ಸೂರ್ಯ ಮುಳುಗುವ ಹೊತ್ತಿಗಾದರೂ
    ಭಾವಗಳ ಕಾಟದಿಂದ ಬಿಡುಗಡೆ ದೊರಕಿದರೆ
    ಗೆದ್ದಂತೆ...
    ಪುಟ್ಟ ಸಾಲುಗಳಲ್ಲಿ,
    ದಿಟವನ್ನು ಕಟ್ಟಿಕೊಡುವ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ.

    ReplyDelete
  4. ಕವನ ಇಷ್ಟವಾಯಿತು.ಒಳ್ಳೆಯ ಪ್ರಯತ್ನ.ನಿಮ್ಮ ಲೇಖನಿಯಿಂದ ಇನ್ನಷ್ಟು ಒಳ್ಳೆಯ ಕವನಗಳು ಮೂಡಿಬರಲಿ.ಧನ್ಯವಾದಗಳು.

    ReplyDelete
  5. ದನ್ಯವಾದಗಳು ಪ್ರವೀಣ್ ಮತ್ತು ಸಾಗರಿಯವರೀಗೆ.

    ReplyDelete
  6. ಕೆ.ಕೆ.ಯವರೇ,ನೆಮ್ಮದಿ ಸಿಕ್ಕರೆ ಗೆದ್ದ೦ತೆ.
    ದನ್ಯವಾದಗಳು.

    ReplyDelete
  7. ಮೂರ್ತಿಯವರೆ ನಿಮ್ಮ ಪ್ರೋತ್ಸಾಹ ಮು೦ದೆಯೂ ಹೀಗೆಯೇ ಇರಲಿ ಎ೦ದು ಆಶಿಸುತ್ತೇನೆ.ದನ್ಯವಾದಗಳು.

    ReplyDelete
  8. ಜ್ಯೋತಿಯವರೀಗೆ ಮತ್ತು ವಿ.ಆರ್.ಭಟ್ರೀಗೆ ದನ್ಯವಾದಗಳು.

    ReplyDelete
  9. ಒಳ್ಳೆಯ ಅರ್ಥಪೂರ್ಣ ಕವನ.

    ReplyDelete
  10. ಮನಮುಕ್ತಾ,Snow White,ರವರೀಗೆ ದನ್ಯವಾದಗಳು.

    ReplyDelete