(ಮಹಾಭಾರತದಲ್ಲಿ ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬೆ ,ಅ೦ಬಿಕೆ,ಅ೦ಬಾಲಿಕೆಯರನ್ನು ಮದುವೆ ಮಾಡಿಸಿದ ಪ್ರಕಣವೊ೦ದಿದೆ.ಕಾಶಿರಾಜ ಹಸ್ತಿನಾವತಿಗೆ ಆಮ೦ತ್ರಣವೀಯದೆ ಸ್ವಯ೦ವರವೊದನ್ನು ಏರ್ಪಡಿಸುತ್ತಾನೆ. ಸೇರಿದ ರಾಜಕುಮಾರರಲ್ಲಿ ಯಾರು ಎಲ್ಲರನ್ನೂ ಗೆಲ್ಲಬಲ್ಲ ವೀರನೋ ಅವನಿಗೆ ತನ್ನ ಕುವರಿಯರನ್ನು ಮದುವೆ ಮಾಡಿ ಕೊಡುತ್ತೇನೆ ಎ೦ಬುದಾಗಿ ಪ್ರಕಟಿಸುತ್ತಾನೆ .ಈ ಸ್ವಯ೦ವರ ಮ೦ಟಪವನ್ನು ಬ್ರಹ್ಮಚಾರಿಯಾದ ಭೀಷ್ಮಪ್ರವೇಶಿಸಿ ರಾಜಕುಮಾರಿಯರನ್ನು ಹಸ್ತಿನಾವತಿಗೆ ಕರೆದೋಯ್ದು ರಾಜರಾದ ತನ್ನ ತಮ್ಮ೦ದಿರನ್ನು ಮದುವೆಯಾಗಿ ಎ೦ಬುದಾಗಿ ಹೇಳುತ್ತಾನೆ.ಅ೦ಬಿಕೆ ,ಅ೦ಬಾಲಿಕೆಯರು ಒಪ್ಪುತ್ತಾರೆ.ಅ೦ಬೆ ಮಾತ್ರ ಪ್ರತಿಭಟಿಸುತ್ತಾಳೆ.--ಈ ಹಿನ್ನೆಲೆಯಲ್ಲಿ ಕವನವಿದೆ.)
ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.
ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.
ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ
ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.
ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.
ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.
ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................
ಅ೦ಬೆಯ ಮನದಾಳದಲ್ಲಿಳಿದು ಮನದ ಮಾತನ್ನು ಕವನವಾಗಿಸಿದ್ದಿರಾ.....ಅದ್ಭುತ!!!
ReplyDeleteತುಂಬಾ ಚೆನ್ನಾಗಿದೆ... ಇಷ್ಟವಾಯಿತು.
ReplyDeletevery good. Liked it.
ReplyDeletetumba chennagide..
ReplyDeleteಚೆನ್ನಾಗಿದೆ.
ReplyDeletenice one....
ReplyDeletevibhinavaagi chennagide...
tumba chennagide :)
ReplyDeleteಪ್ರತಿಕೃಯಿಸಿದ ಸೀತಾರಾಮ,ತೇಜಸ್ವಿನಿ ಹೆಗಡೆ,Subrahmanya,ಜ್ಯೋತಿ ಶೀಗೆಪಾಲ್,Narayan Bhat,ರವರಿಗೆ ದನ್ಯವಾದಗಳು.
ReplyDeleteಪ್ರತಿಕೃಯಿಸಿದ ಸವಿಗನಸು,Ranjita,ರವರಿಗೆ ವ೦ದನೆಗಳು .
ReplyDeleteಅಗಾಗ ಬರುತ್ತಿರಿ.
ಸುಂದರ ಕವನ.........
ReplyDeleteಆದರೆ,
ಇಲ್ಲೊಂದು ಸಣ್ಣ ತಪ್ಪಾಗಿದೆ ಎಂದು ನನ್ನ ಬಾವನೆ!
ಮಹಾಭಾರತದಲ್ಲಿ ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬಿಕೆ,ಅ೦ಬಾಲಿಕೆಯರನ್ನು ಮಾತ್ರ ಮದುವೆ ಮಾಡಿಸುತ್ತಾನೆ. ಅಂಬೆ ಮದುವೆ ಆಗುವುದಿಲ್ಲ!
ಹಾಗೆಯೇ ಬೇರೊಬ್ಬರನ್ನು ಇಷ್ಟಪಟ್ಟ ಅಂಬೆ ಪ್ರತಿಭಟಿಸುವುದಲ್ಲ, ಭೀಷ್ಮನಿಂದ ಬಿಡುಗಡೆಯ ಭಿಕ್ಷೆ ಕೇಳುವುದು. ತನ್ನ ಪ್ರಿಯಕರನೂ ಆಕೆಯನ್ನು ನಿರಾಕರಿಸಿದಾಗ ಭೀಷ್ಮನನ್ನೇ ಮದುವೆಯಾಗುವಂತೆ ಕೇಳುವುದು ಎಂದು ಮಹಾಭಾರತದಲ್ಲಿ ಓದಿದ ನೆನಪು!(ಇದು ನನ್ನ ಅಭಿಪ್ರಾಯ ಅಷ್ಟೇ, ಅನ್ಯತಾ ಬಾವಿಸಬಾರದು!)
ಪ್ರವೀಣ್ ಅವರೆ,
ReplyDeleteಭೀಷ್ಮ ಮೂವರನ್ನೂ ಕರೆತರುವುದು ತನ್ನ ತಮ್ಮ೦ದಿರಿಗೆ ಮದುವೆ ಮಾಡಿಸಲೆ೦ದೇ.ಅ೦ಬಿಕೆ,ಅ೦ಬಾಲಿಕೆಯರು ಭೀಷ್ಮನ ಆಜ್ಣೆಗೆ ತಲೆದೂಗುತ್ತಾರೆ,ಅ೦ಬೆಯು ಗೆದ್ದವನು ನೀನು ಮದುವೆಯಾಗುವುದಾದರೆ ನಿನ್ನನ್ನು,ನಿನ್ನ ತಮ್ಮ೦ದಿರನ್ನು ವರಿಸಲಾರೆ ಎನ್ನುತ್ತಾಳೆ.ಅದಕ್ಕೆ ಭೀಷ್ಮನು ನಾನು ಜೀವನ ಪರ್ಯ೦ತ ಬ್ರಹ್ಮಚಾರಿ ಹಾಗಾಗಿ ಯಾರನ್ನೂ ವರಿಸಲಾರೆನು ಎನ್ನುತ್ತಾನೆ.ಆಗ ಅ೦ಬೆಯು ತನ್ನ ಪ್ರೀತಿಯ ವಿಷಯವನ್ನು ಅರುಹುತ್ತಾಳೆ.ಅದಕ್ಕಾಗಿ ಭೀಷ್ಮನು ಅವಳನ್ನು ವೃದ್ಧ ಬ್ರಾಹ್ಮಣನೊಬ್ಬನೊಡನೆ ಅವಳ ಪ್ರಿಯಕರನಲ್ಲಿಗೆ ಕಳುಹಿಸುತ್ತಾನೆ.ಬಳಿಕ ಅವನು ತಿರಸ್ಕರಿಸಿದಾಗ ಪುನಹ ಭೀಷ್ಮನಲ್ಲಿಗೆ ಬ೦ದು ಪ್ರಿಯಕರನೂ ತಿರಸ್ಕರಿಸಿದ ನಿನ್ನಿ೦ದಾಗಿ,ಆದುದರಿ೦ದ ನೀನೆ ನನ್ನನ್ನು ಮದುವೆಯಾಗು ಎನ್ನುವುದು.ಮು೦ದಿನದ್ದು ನಿಮಗೆ ಗೊತ್ತೇ ಇದೆ.
ಅಂಬೆಯ ಅಂತರಂಗ ಉತ್ತಮವಾಗಿದೆ
ReplyDeleteಮಹಾಭಾರತದಲ್ಲಿ ಅ೦ಬೆಗೆ ಪ್ರಿಯಕರನಿದ್ದ ಸಂಗತಿ
ಇಲ್ಲಿ ಉಲ್ಲೇಖವಿಲ್ಲ.
ಅಂಬೆಯ ಶಾಪ ಕುರುವ೦ಶದ ಉರುಳು ಸತ್ಯ
rash ರವರೆ,ಅ೦ಬೆಯ ಪ್ರಿಯಕರನ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೇನೆ.
ReplyDeleteದನ್ಯವಾದ
tumba chennagide.... adarallu vibhinnavaagide
ReplyDeleteಕವನ ತುಂಬಾ ಚೆನ್ನಾಗಿದೆ, ಒಬ್ಬರ ಆದರ್ಶಕ್ಕೆ ಮತ್ತೊಂದು ಜೀವ ಬಲಿಯಾಯ್ತು.
ReplyDeleteಮನಸು-ರವರೇ,ದನ್ಯವಾದ.ಆಗಾಗ ಬರುತ್ತಿರಿ
ReplyDeleteಸಾಗರಿಯವರೆ ನಿಮಗೆ ಸ್ವಾಗತ ಮತ್ತು ಪ್ರತಿಕೃಯಿಗೆ ದನ್ಯವಾದ
ReplyDeleteಎಂತಹ ಮೋಸ!ಗೆದ್ದವನು ಯಾರೋ,ಗಂಡನಾದವನು ಯಾರೋ!ಇವರೆಲ್ಲಾ ನಮಗೆ ಹೇಗೆ ಆದರ್ಶ ವಾಗಬಲ್ಲರು?ನಿಮ್ಮ ಬ್ಲಾಗ್ ಅಪ್ಡೇಟ್ ಆಗಿರಲಿಲ್ಲ.ಪ್ರತಿಕ್ರಿಯಿಸುವುದು ತಡವಾಯಿತು.ಒಳ್ಳೆಯ ಕವನ .ಚೆನ್ನಾಗಿದೆ.ಧನ್ಯವಾದಗಳು.
ReplyDeleteಮೂರ್ತಿಯವರೆ,ಒಟ್ಟಾರೆಯಾಗಿ ಈ ಪ್ಪ್ರಕರಣವೇ ಅತ್ಯ೦ತ ಸೂಕ್ಷ್ಮವಾದುದು.ನಾನು ಅ೦ಬೆಯನ್ನಷ್ಟೇ ಕಲ್ಪಿಸಿಕೊ೦ಡು ಬರೆದಿದ್ದೇನೆ.ಒಟ್ಟಿನಲ್ಲಿ ಪ್ರಕರಣವನ್ನು ನಾವು ಆ ಕಾಲಘಟ್ಟದಲ್ಲಿ ನಿ೦ತು ಗಮನಿಸಬೇಕು.ಭೀಷ್ಮನ ಆದರ್ಶವೂ ಪ್ರಶ್ನಾತೀತವಾದದ್ದು,ಒ೦ದು ರಾಜಮನೆತನವನ್ನು ಉಳಿಸುವಲ್ಲಿ ,ಬೆಳೆಸುವಲ್ಲಿ ಭೀಷ್ಮನ ಪರಿಶ್ರಮ ಅಗಾಧವೂ ಅನ೦ತವೂ ಆದುದಾಗಿದೆ.ನಿಮ್ಮ ಪ್ರತಿಕೃಯಿಗೆ ದನ್ಯವಾದ.
ReplyDeletesundara kavana....
ReplyDeletechennagidhe...
ಸವಿಗನಸು ರವರೀಗೆ ದನ್ಯವಾದ.
ReplyDeletetumba chennagide kavana..pada prayoga tumba idisitu :)
ReplyDeleteಹೌದು, ಆಹ್ವಾನ ಇಲ್ಲದಿದ್ದರೂ ಹೋಗಿ, ಇಚ್ಛೆಗೆ ವಿರುದ್ಧವಾಗಿ ಸ್ತ್ರೀಯೋರ್ವಳ ಬದುಕನ್ನೇ ಮೂರಾಬಟ್ಟೆ ಆಗಿಸಿದ್ದು ಯಾವ ತರ್ಕಕ್ಕೂ ನಿಲುಕದ ಅನ್ನ್ಯಾಯ. ಚೆನ್ನಾಗಿ ಬರೆದಿದ್ದೀರ :)
ReplyDeletegeete ಯವರೇ,ಭೀಷ್ಮ ಯಾವ /ಯಾರ ತರ್ಕಕ್ಕೂ ನಿಲುಕದವ ಅಲ್ಲವೇ?
ReplyDeleteದನ್ಯವಾದ.
ಬಹಳ ಚೆನ್ನಾಗಿದೆ.
ReplyDeleteಅಧ್ಭುತ
ReplyDeleteಅಧ್ಭುತ
ಅಧ್ಭುತ
i have no other words to say... very well pictured... very nice very nice...
ತುಂಬ ಇಷ್ಟವಾದ ಕವನ, ಅಂಬೆಯ ಅಂತರಂಗದ ಒಳಗಾಗಿ ಬರೆದಿದ್ದೀರಿ.ಕಥನವನ್ನು ಕವನವಾಗಿ ಹೇಳುತ್ತಾ ಒಳಗಿನ ಧ್ವನಿಯೊಂದನ್ನು ಕಟ್ಟಿಕೊಡುವ ರೀತಿ ಇಷ್ಟವಾಯ್ತು.
ReplyDelete