ಸಾಕಾಗಿದೆ ನೋಡಿ ರಾಜಕೀಯ
ರಾವಣ
ಜರಾಸ೦ದ
ಕೀಚಕ
ಯಮ
ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ
ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು
.
ಹೇಳುವುದೊ೦ದು,
ಮಾಡುವುದೊ೦ದು.
ಎಲ್ಲರೂ ನೋಡುವರು
ಯಾರಲ್ಲಿ ಕೇಳುವುದೆ೦ದು..!
ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೃಪಾಲರು
ಎಲ್ಲರೂ.....ದೃತರಾಷ್ಟ್ರರು
ಅನಿಸುತಿದೆ,
”ಧರ್ಮ ಸ೦ಸ್ಥಾಪನಾರ್ಥಾಯಾ".... .......................................
ಇಂದಿನ ರಾಜಕೀಯದ ಕತೆ ಬಿಡಿ,
ReplyDeleteಸತ್ಯ ಧರ್ಮಗಲಿಲ್ಲ,
ನ್ಯಾಯ ನೀತಿಗಳಿಲ್ಲ
ನಿಯತ್ತಂತೂ ಇಲ್ಲವೇ ಇಲ್ಲ
ಚೆನ್ನಾಗಿದೆ ರಾಜಕೀಯದ ಕವನ
ಕವನ ಚೆನ್ನಾಗಿದೆ..
ReplyDeleteರಾಜಕೀಯ
ReplyDeleteಅಂದರೆ
ಕುಬೇರನ
ಖಜಾನೆಯ
ಕೀಯ?
ಧನ್ಯವಾದಗಳು!
ಇದೇನ್ ಸಾರ್ ರಾಜಕೀಯ ?!. ಕವನ ಚೆನ್ನಾಗಿ ಬಂದಿದೆ..ರಾಜಕೀಯವಾಗಿ !
ReplyDeletekavana chennagide sir.
ReplyDeleteರಾಜಕೀಯ ನಾ ಸಕ್ಕತಾಗಿ ಹೇಳಿದ್ದೀರ....
ReplyDeleteಸೂಪರ್ ಕವನ ಸಾರ್....
ಹತ್ತು ರೀತಿಯಲ್ಲಿ ದುರಾಲೋಚನೆಗಳನ್ನೇ ಮಾಡಿದ ರಾವಣ ಯಾವ ಬೆಲೆ ತೆತ್ತಾದರೂ ಸ್ವಹಿತವನ್ನಷ್ಟ್ಟೇ ಬಯಸಿದ ಜರಾಸ೦ಧ,ನೈತಿಕತೆಯನ್ನೇ ಬಲಿಕೊಟ್ಟು ಸ್ತೀಲೋಲುಪನೆನಿಸಿದ ಕೀಚಕ,ಪ್ರಾಣವನ್ನೇ ತೆಗೆಯಬಲ್ಲ ಯಮ, ಇವರೆಲ್ಲರ ಹೆಸರಿನ ಮೊದಲಕ್ಷರ ನಮ್ಮಈಗಿನ ರಾಜಕಾರಿಣಿಗಳಿಗೆ ಅನ್ವರ್ಥವಾಗುತ್ತದೆ೦ದು ನನ್ನ ಅನಿಸಿಕೆ.ಪ್ರವೀಣ್,ಬೆನಕ,ಸುಬ್ರಹ್ಮಣ್ಯ,Snow White,ಡಾ.ಕೃಷ್ಣಮೂರ್ತಿ.ಡಿ.ಟಿ.ಸವಿಗನಸು ರವರೇ
ReplyDeleteಪ್ರತಿಕೃಯಿಗೆ ದನ್ಯವಾದ.
kanvana prastuta raajakiya paristitiya vidambaneya kannadiyaaagide. dhanyavaadagalu.
ReplyDeleteತುಂಬಾ ಚೆನ್ನಾಗಿದೆ. ವಾಸ್ತವಿಕತೆಗೆ ಕನ್ನಡಿ ಹಿಡಿವಂತಿದೆ ಕವನ. ಅದರಲ್ಲೂ ಮೊದಲ ಸಾಲುಗಳಲ್ಲಿ ನೀವುಕೊಟ್ಟ ರಾಜಕೀಯದ ಚಿತ್ರಣ ಹಾಸ್ಯಮಿಶ್ರಿತ ಸತ್ಯವಾಗಿದೆ.
ReplyDeleteದನ್ಯವಾದಗಳು,ಸೀತಾರಾಮ್ ಸಾರ್ ಮತ್ತು ತೇಜಸ್ವಿನಿ ಹೆಗಡೆಯವರೀಗೆ.
ReplyDeleteಸಂಭವಾಮಿ ಯುಗೇ ಯುಗೇ...
ReplyDeleteಈಗ ಕೃಷ್ಣಾ ಹುಟ್ಟಿ ಬಂದರೂ
ಇಂದಿನ ರಾಜಕೀಯ ತಂತ್ರಗಳಿಗೆ ಬೆರಗಾಗಿ
ದ್ವಾಪರವೇ ಉತ್ತಮ, ಧರ್ಮ ಯುದ್ದ ಮಾಡಲು
ಪಾಂಡವರಾದರೂ ಇದ್ದರು.
ಈಗ... ತಪ್ಪಾಗಿ ಹುಟ್ಟಿ ಬಿಟ್ಟೆ, ಎಂದು ಕೊರಗಬಹುದು
ಉತ್ತಮ ಕವನ
ಧನ್ಯವಾದಗಳು
ReplyDeleteraajakkeeya chennaagide.......
ReplyDeleteಈಗ ಕೃಷ್ಣ ಅವತರಿಸಿ ಬಂದರೆ ಒಬ್ಬಿಬ್ಬರಲ್ಲ, ಸಾವಿರಾರು ಕೀಚಕ, ಜರಾಸಂಧ, ಕಂಸರನ್ನು ಎದುರಿಸಬೇಕು. ಬೇರೆ ಯಾವುದಕ್ಕೂ ಪುರುಸೊತ್ತು ಸಿಗುವುದೇ ಇಲ್ಲ ಪಾಪ
ReplyDeleteಒಟ್ಟಾರೆ ಬಿಡುಗಡೆ ಬೇಕಲ್ಲ...
ReplyDeleteದಿನಕರ ಮತ್ತು ದೀಪಸ್ಮಿತರಿಗೆ ದನ್ಯವಾದಗಳು.
ಆ ಕೃಷ್ಣ ನಮ್ಮೊಳಗೂ ಹುಟ್ಟಬಹುದಲ್ಲ ಆಗ ಸಾವಿರಾರು ಕೀಚಕ-ಜರಾಸಂಧರಿಗೆ ಲಕ್ಷಾಂತರ-ಕೋಟ್ಯಾನುಕೋಟಿ ಕೃಷ್ಣರಿರುತ್ತಾರೆ...
ReplyDeleteproblem solved....
we have to make up our minds thats all..