Sunday, February 28, 2010

ಕೌರವನ-ಕೊನೆ ಮಾತು

ಧರ್ಮಸಿ೦ಹಾಸನಕ್ಕೆ..,
ಧರ್ಮ..ನೇರಿದರೆ,
ಯಾರಿಹರು? ಸಭೆಯಲ್ಲಿ..!
ಸತ್ತವರ ಗೋಳಿರುವಲ್ಲಿ,
ವಿಧವೆಯರ ಕಣ್ಣೀರಲ್ಲಿ.

ಅಕ್ಷೋಹಿಣಿ ಅಕ್ಷೋಹಿಣಿ
ಸೈನ್ಯ ನಾಶವಾಯಿತು.
ಭವ ನಾಮ ಮಾತ್ರ೦ ಸವ್ಯಸಾಚಿ,
ಸರ್ವನಾಶವಾಯಿತು.

ಇರುವರೇ ಸಭೆಯಲ್ಲಿ
ಭೀಷ್ಮ,ದ್ರೋಣಾದಿಗಳು,
ಕೄಫರಾದಿ ವಿದ್ವಾ೦ಸರು..?
ಆದರೇ ಇವರೆಲ್ಲ
ವಿದ್ವ೦ಸಕರು.!

ಕುಡಿವ ಜೀವಜಲ
ನೆತ್ತರಾಯಿತೆ.?
ಭೂಭಾರವಾಯಿತೆ?
ಭೂತಾಯಿಯೇ ಸಾಕ್ಷಿಯಾದಳೆ?

ಸ್ತ್ರೀ,ಭ್ರೂಣ,ಶಿಶು,
ಬ೦ಧು ಬಾ೦ಧವರ ಹತ್ಯೆಗೆ
ಭಾರವಾಯಿತೆ..
ಮಹಾಭಾರತವಾಯಿತೆ.
...........................

14 comments:

  1. ನಮ್ಮ ಯಾವ ಪುರಾಣವೂ
    ಮೇಲ್ನೊಟಕ್ಕೆ ಕಾಣುವಷ್ಟು ಸರಳವಲ್ಲ.
    ಅದರಲ್ಲೂ "ಮಹಾಭಾರತ"...
    ಅದರ ಒಂದೊಂದು ಪಾತ್ರಗಳ ಒಳಗೆ ಇಳಿದಂತೆ..
    ನಮ್ಮನೆಲ್ಲಿಗೊ ಒಯ್ಯುವ,ಸಾಮರ್ಥ್ಯ ಮೆಚ್ಚಬೇಕಾದ್ದೇ!!!
    ಕೌರವನನ್ನು-ರವಷ್ಟಾದರೂ ಅನಾವರಣ ಮಾಡುವ ಪ್ರಯತ್ನದಲ್ಲಿ
    ಸಫಲರಾಗಿದ್ದೀರಿ..ಮುಂದುವರಿಸಿ..ಚೆನ್ನಾಗಿದೆ.

    ReplyDelete
  2. ಕವನ ಚೆನ್ನಾಗಿದೆ..ಬರೆಯುತ್ತಿರಿ.

    ReplyDelete
  3. Superb...ತುಂಬಾ ಚೆನ್ನಾಗಿ ಬರ್ದಿದಿರಾ..

    ReplyDelete
  4. ಕೌರವನ ಕೊನೆ ಮಾತು - ಕಲ್ಪನೆ ಮತ್ತೆ ಕವನ ಎರಡೂ ಚೆನ್ನಾಗಿದೆ.

    ReplyDelete
  5. ಅದ್ಭುತವಾದ ಕವನ. ಅರ್ಥ ವಿಸ್ತಾರತೆ ತು೦ಬಾ. ಕೌರವನ ಕೊನೆ ಮಾತಲ್ಲಿ ಮಹಾಭಾರತದ ಸಮಗ್ರ "ಶೋಧನೆ"ಯಾಗಿದೆ. ಎಲ್ಲದಕ್ಕೂ ಸಾಕ್ಷಿ ಈ ಭುತಾಯಿ.
    ವಿಶಿಷ್ಟವಾದ ತಮ್ಮ ಶೈಲಿ ಆಪ್ತವಾಯಿತು.

    ReplyDelete
  6. ಮಹಾಭಾರತ ನನಗೆ ಅತ್ಯ೦ತ ಕುತೂಹಲ ಮತ್ತು ಆಪ್ತವಾದದ್ದು ಅದೊ೦ದು ಕುಟು೦ಬದ ಕತೆಯಾದ್ದರಿ೦ದ.ಅಲ್ಲಿಯ ಪ್ರತಿ ಪಾತ್ರವೂ ಪ್ರಮುಖ ಮತ್ತು ವಿಶೇಷತೆಯನ್ನು ಹೊ೦ದಿದೆ.ಪ್ರತಿಕ್ರಯಿಸಿದ ಕೆ.ಕೆ.ಯವರಿಗೆ,ಮನಮುಕ್ತರವರಿಗೆ,ಜ್ಯೋತಿಯವರಿಗೆ,ಸೀತಾರಾಮರಿಗೆ,ನಾರಾಯಣ ಭಟ್ರೀಗೆ ವ೦ದನೆಗಳು

    ReplyDelete
  7. ನೀವು ಮತ್ತು ವಿ.ಕೆ.ಕೆ. ಮಹಾಭಾರತದ ಪಾತ್ರಗಳನ್ನು ನೋಡುತ್ತಿರುವ ಮತ್ತು ಕವನಿಸುತ್ತಿರುವ ರೀತಿಯೇ ವಿಭಿನ್ನವಾಗಿದೆ, ಮತ್ತು
    ಆರೋಗ್ಯಕರ ಪೈಪೋಟಿಯೂ ಕಾಣುತ್ತಿದೆ ..(ನನಗೆ ) !. ಚೆನ್ನಾಗಿದೆ.

    ReplyDelete
  8. ಕೌರವನ ಕೊನೆ ಮಾತು ಚೆನ್ನಾಗಿ ಮೂಡಿ ಬಂದಿದೆ...

    ಮಹಾಭಾರತದ ಪಾತ್ರಗಳೇ ಹಾಗೆ..

    ಓದುತ್ತಾ ಹೋದಂತೆ..
    ಮತ್ತಷ್ಟು ಹೊಸ ವಿಷಯ ಕಾಣುತ್ತಿರುತ್ತದೆ...

    ಹಾಗಾಗಿ ಅದು ಇಂದಿಗೂ ಪ್ರಸ್ತುತವಾಗಿದೆ...

    ಅಭಿನಂದನೆಗಳು...

    ReplyDelete
  9. ಮಹಾಭಾರತದ ಪ್ರತಿ ಪಾತ್ರವೂ ಇಡೀ ಕತೆಯಲ್ಲಿ ಆದಿಯಿ೦ದ ಅ೦ತ್ಯದವರೇಗೆ ಒ೦ದಲ್ಲ ಒ೦ದು ರೀತಿಯಲ್ಲಿ ಆವಾಹಿಸಿದೆ.ಸ್ಪ೦ದಿಸಿದ ಸುಬ್ರಮಣ್ಯ ಭಟ್ರೀಗೆ,ಪ್ರಕಾಶರಿಗೆ ವ೦ದನೆಗಳು.

    ReplyDelete
  10. mahabahrathada padakke
    bere arthavanne kottiddiri.

    hosa jeevana or bharath or dharmakke
    modalu, aa dharma sangrama mattu adakke thakka
    bele athyantha avashyakavgittu.

    there is no sankranthi without kranthi

    ReplyDelete
  11. ಮೂರ್ತಿ,ಅಶೋಕ್ ಕುಮಾರ್, ಚುಕ್ಕಿ ಚಿತ್ತಾರರವರೀಗೆ ದನ್ಯವಾದಗಳು.ಅಗಾಗ ಬರುತ್ತಿರಿ.ನಮಸ್ಕಾರ.

    ReplyDelete
  12. ಕವನ ಚೆನ್ನಾಗಿದೆ . ನೇರ ಉತ್ತರಕೊಡುವಂತಹದ್ದು .

    ReplyDelete