ಸುರಿವ ಇಬ್ಬನಿಯಲ್ಲಿ
ಮೈಕೊರೆವಚಳಿಯಲ್ಲಿ
ಕ೦ಪಿಸುವ ಮೈಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಮೋಡಗಳ ಮರೆಯಲ್ಲಿ
ಹರಿವ ನೀರಿನಲೆಯಲ್ಲಿ
ತ೦ಪೆರೆವ ಹನಿಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಬೆಳೆದ ಪೈರಿನೆಡೆಯಲ್ಲಿ
ಬಾಗುತಿಹ ಹಸಿರಿನಲಿ
ಬೀಸುತಿಹ ತ೦ಗಾಳಿಯಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಮಿ೦ಚುಳ್ಳಿ ಬೆಳಕಿನಲಿ
ಚ೦ದಿರನ ನೆರಳಿನಲಿ
ಚುಕ್ಕಿ ನಕ್ಷತ್ರಗಳೆಡೆಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ತ೦ಪೆರವ ರಾತ್ರಿಯಲಿ
ಸರಿದ ಬಾಗಿಲಿನಲ್ಲಿ
...........................................
ತೆರೆದ ಬಾಹುಗಳಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಸಿಹಿ ಮುತ್ತ ಕೊಡುವೆಯೆ೦ದೂ...............................................
ಕೊಟ್ಟುಬಿಡಿ ಬೇಗ..! ಸೊಗಸಾದ ಪ್ರೇಮ ಕವನ..
ReplyDeleteVery romantic :)
ReplyDeletenice romantic song
ReplyDelete"ಕಾದವರೇ ಬಲ್ಲರು ಮುತ್ತಿನ ಸವಿಯ"
ReplyDeleteಚುಂಬನದ ಪ್ರತೀಕ್ಷೆ..
ಸೊಗಸಾಗಿ ಮೂಡಿಬಂದಿದೆ..
ಪ್ರೇಮಿಗಳ ದಿನಕ್ಕೆ ಸೊಗಸಾದ ಪ್ರೇಮಕವನ.
KMP yavare...enu estondu muttu kodo iraade nimage...chennagi layakke pada kunisiddeeri...good..
ReplyDeleteplease translate in hindi
ReplyDeletepraveen jain
ಚೆನ್ನಾಗಿದೆ ನಿಮ್ಮ ಪ್ರಯತ್ನ, ಮುಂದುವರಿಸಿ, ಶುಭವಾಗಲಿ !
ReplyDeleteRomantic ಕವನ.. ತುಂಬಾ ಚೆನ್ನಗಿದೆ ...:)
ReplyDeleteಭಾವ ಮತ್ತು ಹಾಡುವ ಅನುಕೂಲತೆಯನ್ನು ಗಮನದಲ್ಲಿಟ್ಟು ಈ ಕವನ ರಚಿಸಿದ್ದೇನೆ.ಎಷ್ಟರಮಟ್ಟಿಗೆ ಯಶಸ್ವಿಯಾಗಿದೆಯೋ ಗೊತ್ತಿಲ್ಲ.ಪ್ರೀತಿಯಿಟ್ಟು ಪ್ರತಿಕೃಯಿಸಿದ ಸುಬ್ರಮಣ್ಯ ಭಟ್,geete,ಸೀತಾರಾಮ .ಕೆ,ಕೆ.ಕೆ,ಜಲನಯನ,ವಿ.ಅರ್.ಭಟ್,ಮನಮುಕ್ತಾ,ರ೦ಜಿತಾ ಎಲ್ಲರಿಗೂ ದನ್ಯವಾದಗಳು.
ReplyDelete