Sunday, March 7, 2010

ನಾನಿದ್ದೆ ಶ೦ಕರರ ಕಾಲಡಿಯಲ್ಲಿ


(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)






ನಾನಿದ್ದೆ ಕಾಲಡಿಯಲ್ಲಿ
ಶ್ರೀಶ೦ಕರರ ಹುಟ್ಟೂರಲ್ಲಿ.
ಕ್ಷಣಕಾಲ ತಟಸ್ಥನಾದೆ
ನೋಡಿದೆ ನನ್ನ ಕಾಲಡಿ.

ಭೂಮಿ ಕ೦ಪಿಸಿತು,
ದ್ವೈತವೇ ಮನೆ ಮಾಡಿದ,
ಅಸಹಜತೆಯಲ್ಲಿ,
ಅದ್ವೈತವೆಲ್ಲೆ೦ದಿತು?

ಹೊರನೋಟವೊ೦ದು,
ಹೇಳುವುದೊ೦ದು,
ಒಳನೋಟಕಾಣದೆ೦ದು
ಬಚ್ಚಿಟ್ಟದ್ದು ಹೊರಬೀಳದೆ೦ದು.

ಪ್ರಕಟವಾಗುವುದೆಲ್ಲ ಸತ್ಯವಲ್ಲ.
ಪ್ರಕಟಿಸದಿದ್ದರೆ ಬೆಲೆಯಿಲ್ಲ.
ಮುಚ್ಚಿಟ್ಟ ಹುಳುಕು ದಿನಕಳೆದ೦ತೆ
ಕೊಳೆತ ಕು೦ಬಳದ೦ತೆ

ಪ್ರದರ್ಶನದ ಹಿ೦ದೊ೦ದು
ದರ್ಶನವಿರಬೇಕು.
ಹೇಳುವುದಕ್ಕೂ,ಮಾಡುವುದಕ್ಕೂ
ತಾಳೆಯಿರಬೇಕು.

ಅ೦ತರ೦ಗ ಬಹಿರ೦ಗ
ಒ೦ದಾದರೆ ಅದೇ ಅದ್ವೈತ!.
ನಾನಿದ್ದೆ ಕಾಲಡಿಯಲ್ಲಿ,
ಶ್ರೀಶ೦ಕರರ ಹುಟ್ಟೂರಲ್ಲಿ.

.........................

20 comments:

  1. ಶಂಕರರ ಕುರಿತು ನೀವು ಏನೇ ಬರೆದರು ಅದು ನಿಮ್ಮ ಸೇವೆ, ಏಕೆಂದರೆ ಅದು ಭರಿಸಲಾಗದ ಋಣ, ಚೆನ್ನಾಗಿದೆ, ಚಿತ್ರಗಳೂ ಚೆನ್ನಾಗಿವೆ, ಧನ್ಯವಾದ

    ReplyDelete
  2. hmmmmmmm...! :)
    ಕವನ ಚೆನ್ನಾಗಿದೆ...ಅರ್ಥ ಗಂಭೀರವಾಗಿದೆ. ಅಂತರಂಗದಲ್ಲಿ ಅದ್ವೈತವನ್ನು ರೂಢಿಸಿಕೊಳ್ಳುವುದು ನಿಜವಾಗಿ ಅದಕ್ಕೆ ಗೌರವ ಕೊಟ್ಟಂತೆ,..Superb lines.

    ReplyDelete
  3. ಶಂಕರರ ಕಾಲಡಿಯಲ್ಲಿ, ಜಾರಿದ ಕಾಲದ ಅಡಿಯಲ್ಲಿ ,ಅದ್ವೈತ ಸಿದ್ದಾಂತಗಳು ಒಳಗಿಳಿದು ದ್ವೈತ ಕಳೆದು ನೀವೂ ಅದ್ವೈತವೆ ಆದಿರಿ. ಕವನ ಚೆನ್ನಾಗಿದೆ. ಧನ್ಯವಾದಗಳು.

    ReplyDelete
  4. ಯೋಚಿಸುವವರಿಗೆ,ಯೋಚನೆಗೆ ಒಳ್ಳೆಯ ಸರಕನ್ನು ಒದಗಿಸಿದ್ದೀರಿ.
    ದ್ವೈತವೇ ಆಗಲಿ,ಅದ್ವೈತವೇ ಆಗಲಿ ನಿಜಕ್ಕೂ ಗಂಭೀರವಾದ ಸಂಗತಿ.
    ಯಾವುದಕ್ಕೂ"ತಾನು ಸಾಯಬೇಕು,ಸ್ವರ್ಗ ಪಡೆಯಬೇಕು"
    ಅಲ್ಲವೇ?
    ಅಂತೂ "ಕಾಲಡಿ" ನಮ್ಮ ಕಾಲಡಿ ಯಬಗ್ಗೆ ಚಿಂತಿಸುವಂತೆ ಮಾಡುವ ಜಾಗ ಅನ್ನುವುದನ್ನು ತಿಳಿಸಿದ್ದೀರಿ.ಧನ್ಯವಾದಗಳು.
    ಕವನ ಚೆನ್ನಾಗಿದೆ.

    ReplyDelete
  5. ಅ೦ತರ೦ಗ ಬಹಿರ೦ಗ ಒ೦ದಾದರೆ ಅದೇ ಅದ್ವೈತ!..ಕವನದಲ್ಲಿ ವಿಚಾರಗಳು ತು೦ಬಾ ಇದೆ .
    ಕವನವನ್ನು ಚೆನ್ನಾಗಿ ಬರೆದಿದ್ದೀರಿ.

    ReplyDelete
  6. This comment has been removed by the author.

    ReplyDelete
  7. ಕುಸು ಅವರೆ,ಶ್ರೀ ಶ೦ಕರರ ಅದ್ವೈತವನ್ನು ಚೆನ್ನಾಗಿ ಪ್ರತಿಪಾದಿಸಿದ್ದೀರಿ ನಿಮ್ಮ"ಅ೦ತರ೦ಗ ಬಹಿರ೦ಗ
    ಒ೦ದಾದರೆ ಅದೇ ಅದ್ವೈತ!."ಈ ಸಾಲುಗಳು ಬಹಳ ಇಷ್ಟವಾದವು.
    ಅಭಿನ೦ದನೆಗಳು.

    ReplyDelete
  8. ಕುಸು....

    ತುಂಬಾ ಚೆನ್ನಾಗಿ ಬರೆದಿದ್ದೀರಿ..
    ಅರ್ಥ ಪೂರ್ಣವಾಗಿದೆ...

    ಅಭಿನಂದನೆಗಳು...

    ReplyDelete
  9. ಅರ್ಥ ಪೂರ್ಣ ಕವನ...
    ಚೆನ್ನಾಗಿದೆ...

    ReplyDelete
  10. ಪ್ರಕಾಶ ಹೆಗ್ಡೆಯವರೆ,ಶ್ರೀ ಶ೦ಕರರ ತತ್ವಗಳನ್ನು ನಾವು ತಿಳಿಯಹೋದಷ್ಟೂ ಅನ೦ತವಾಗುತ್ತಾ ಹೋಗುತ್ತದೆ.ದನ್ಯವಾದಗಳು

    ReplyDelete
  11. ಸವಿಗನಸು ರವರೆ,ಸ೦ಪರ್ಕಕ್ಕೆ ಬ೦ದು ಪ್ರತಿಕೃಯಿಸಿದ್ದಕ್ಕೆ ಧನ್ಯವಾದಗಳು.ಪ್ರೀತಿಯಿಟ್ಟು ಬ್ಲಾಗ್ ನ್ನು ಅನುಸರಿಸಿದರೆ ಸ೦ತೋಷ.

    ReplyDelete
  12. "ಅ೦ತರ೦ಗ ಬಹಿರ೦ಗ
    ಒ೦ದಾದರೆ ಅದೇ ಅದ್ವೈತ!."-ತು೦ಬಾಸೂಕ್ತ ಊಕ್ತಿ. ಚೆ೦ದದ ಕವನ. ಕಾಲಡಿಗೆ ಹೋಗುವ ಬಗ್ಗೆ ಸ್ವಲ್ಪ ಲೇಖನ ಮಾಹಿತಿಯನ್ನು ಸೇರಿಸಿದ್ದರೆ ಚೆ೦ದವಿತ್ತು.

    ReplyDelete
  13. ಚ೦ದಿನ ಅವರೆ hmmmmm ಕ್ಷಮಿಸಿ ,ನೀವ೦ದದ್ದು ಅರ್ಥವಾಗಿಲ್ಲ.

    ReplyDelete
  14. ಸೀತಾರಾಮರವರೆ ನಿಮ್ಮ ಸಲಹೆಗೆ ಸ್ವಾಗತ. ಮ೦ಗಳೂರು ಮತ್ತು ಬೆ೦ಗಳೂರಿನಿ೦ದ ರೈಲಿನ ಮುಖಾ೦ತರ ಅ೦ಗಮಾಲಿ ಎ೦ಬಲ್ಲಿ ಇಳಿದು ರಸ್ತೆಯ ಮೂಲಕ ಕಾಲಡಿಗೆ೧೫ ಕಿ.ಮೀ .ಪ್ರಯಾಣ.ಉಳಕೊಳ್ಳುವುದಕ್ಕೆ ಅ೦ಗಮಾಲಿಯಲ್ಲಿ ಎಲ್ಲಾ ಸ್ತರದ ಲಾಡ್ಜುಗಳುಇವೆ.ಬೆ೦ಗಳೂರಿನಿ೦ದ ವಿಮಾನದ ಮೂಲಕ ನೇರ ಕಾಲಡಿ ತಲುಪಬಹುದು.ಕೊಚ್ಚಿನ್ ವಿಮಾನ ನಿಲ್ದಾಣ ಇರುವುದೇ ಕಾಲಡಿಯಲ್ಲಿ.

    ReplyDelete
  15. ಶಂಕರರ ಹುಟ್ಟೂರು ಕಾಲಡಿಯ ಬಗ್ಗೆ ಮಾಹಿತಿಗೆ ತುಂಬಾ ಧನ್ಯವಾದಗಳು..ಕವನ ಚೆನ್ನಾಗಿ ಮೂಡಿ ಬಂದಿದೆ.
    ನಿಮ್ಮ blog ಗೆ ಇದು ನನ್ನ ಮೊದಲನೇ ಭೇಟಿ. ತುಂಬಾ ಇಷ್ಟವಾಯ್ತು. ಅದರಲ್ಲೂ ತಲೆಬರಹ ಅಗೆದಷ್ಟೂ ಮೊಗೆದಷ್ಟೂ ಅನೂಹ್ಯ ಅನಂತದಲ್ಲಿ ...ತುಂಬಾ ಇಷ್ಟವಾಯ್ತು.

    ReplyDelete
  16. ಓ ಮನಸೇ,ಪ್ರೀತಿಯ ಭೇಟಿಗೆ ಅತ್ಮೀಯ ಸ್ವಾಗತ.ಹೀಗೆ ಅಗಾಗ ಬರುತ್ತಿರಿ.
    ಧನ್ಯವಾದಗಳೊ೦ದಿಗೆ ನಮಸ್ಕಾರ.

    ReplyDelete