ನನ್ನವಳು
ಹೊರಟಿಹಳು ತವರಿಗೆ೦ದು,
ಕೇಳಿದೆನು
ನಾನವಳ, ಯಾವಾಗ ಬರುವುದೆ೦ದೂ?
ಹೇಳಿದಳು,
ಇನ್ನು ಮೆಟ್ಟಲಿಳಿದಿಲ್ಲ, ಈ ಪ್ರಶ್ನೆ ಏನು?
ನಾನೆ೦ದೆ,
ನೀ ನನ್ನ ಅರಗಿಣಿಯಲ್ಲವೇನು?
ಉಸುರಿದಳು,
ಕೊಟ್ಟಿಲ್ಲವೇ ಮೊಗೆ ಮೊಗೆದು ಪ್ರೀತಿ.,
ಒ೦ದಷ್ಟು ದಿನವಿಲ್ಲದಿರೆ ಅದೇನು ಭೀತಿ?
ತಲೆ ಸವರಿ ಹೇಳಿದೆನು, ನೀ ನನ್ಜ್ನ ಅಕ್ಷಯ ಪಾತ್ರೆ
ನೀನಿಲ್ಲದೇ ನಿದ್ದೆ ಬಾರದು ರಾತ್ರೆ.
ತೊರುತ್ತ ಹುಸಿಮುನಿಸ,
ಹೇಳಿದಳು ಅರ್ಧಾ೦ಗಿ,
ಕಾದಿಲ್ಲವೇ ತಾಯಿ ನಾ ಬರುವೆಯೆ೦ದೂ,
ಇದಿರ್ಗೊಳಲು ಬರುವರು ನನ್ನಪ್ಪ ಮು೦ದೂ.
ಬಿಗಿದಪ್ಪಿ ಹೇಳಿದೆನು
ಹೋಗಮ್ಮಜಲಜಾಕ್ಷಿ ಬೇಗನೇ ಮು೦ದೂ
ಕಾದಿಹರು ಹೆತ್ತವರು ನೀ ಬರುವೆಯೆ೦ದೂ
ತಿರುಗಿ ಬಾರಮ್ಮಹರಿಣಾಕ್ಷಿ ನಾ ಕಾದಿರುವೆನೆ೦ದೂ
ನನ್ನವಳು
ಹೊರಟಿಹಳು ತವರಿಗೆ೦ದೂ
ಕಾದಿರುವೆ ಯಾವಾಗ ಬರುವುದೆ೦ದೂ
ಬರುವುದೆ೦ದೂ......
.........................
ವಿರಹವಿಲ್ಲದಿರೆ ಸೊಗಲಿಲ್ಲ ಪ್ರೀತಿಯೋಳು
ReplyDeleteಹೋಗಿ ಬರಲಿ ಬಿಡಿ ಎರಡೇ ದಿನ.
ಬಂದೆ ಬರುವಳು ತಿರುಗಿ ಒಡೋಡಿ ನಿಮ್ಮ ಬಳಿ...
ಆಗಿರುವುದಾಗ ನೋಡಿ ಆ ಪ್ರೀತಿ ದ್ವಿಗುಣ
ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಈ ಕವನ. ಓದಿ ಸಂತೋಷವಾಯ್ತು.
ಬರ್ತಾರೆ ಸರ್, ಇಷ್ಟೊಂದು ಪ್ರೀತಿಯಿಂದ ಹೇಳಿದ ಮೇಲೆ ಬರದಿದ್ದರಾಯ್ತೆ..:)
ReplyDeleteಚೆನ್ನಾಗಿದೆ ಕವನ
kavana chennaagide.
ReplyDeleteಕೆ ಯಸ್ ನ ನೆನಪಲ್ಲಿ,
ReplyDeleteಮತ್ತೆ ಮತ್ತೆ ಓದಿದೆ.
ಚೆನ್ನಾಗಿದೆ.ದಾಂಪತ್ಯದ ನವಿರಾದ ಪ್ರೀತಿ..
ಕವನ ಚೆನ್ನಾಗಿದೆ.
ReplyDeleteಬರ್ತಾರೆ ಬಿಡಿ, ಎರೆದೆ ದಿನ ತಾನೇ! ಈಗ ಎರೆಡು ಯುಗ ಆಗಿ ಕಂಡರೂ, ನಿಮ್ಮಾಕೆ ಬಂದ ನಂತರ ಎರೆಡು ಯುಗ ಎರೆಡು ದಿನವಾಗುತ್ತಲ್ವಾ? ಮತ್ತ್ಯಾಕೆ ಚಿಂತೆ?
ReplyDeleteಚೆನ್ನಾಗಿದೆ ಕವನ ಸರ್.
ReplyDeleteಚೆನ್ನಾಗಿದೆ. ನಿಮ್ಮಿಬ್ಬರ ಪ್ರೀತಿ ಸದಾ ಹಸಿರಾಗಿರಲಿ.
ReplyDeleteಕುಸು....
ReplyDeleteನರಸಿಂಹಸ್ವಾಮಿಯವರ ನೆನಪಾಯಿತು ನೋಡಿ...
ಬಹಳ ಚಂದವಾಗಿದೆ...
ಸರಸ ದಾಂಪತ್ಯ ಚೆನ್ನಾಗಿ ಮೂಡಿ ಬಂದಿದೆ..
ಅಭಿನಂದನೆಗಳು..
ನಿಮ್ಮೆಲ್ಲರ ಹಾರೈಕೆ ಸದಾ ಹಸಿರಾಗಿರಲಿ,
ReplyDeleteಅದೆ ನಮ್ಮ ಪ್ರೀತಿಯ ಉಸಿರಾಗಲಿ.
ಹಾರೈಸಿದ ಒ ಮನಸೇ ,ಸುಬ್ರಹ್ಮಣ್ಯ ಭಟ್ರೇ,ಮೊರ್ತಿಯವರೆ,ನಾರಾಯಣ ಭಟ್ರೇ,ವೆ೦ಕಟಕೃಷ್ಣರೆ,ಸೀತಾರಾಮರೆ,ಮನಮುಕ್ತಾ ಅವರೇ,ಪ್ರಕಾಶ್ ಅವರೇ ನಿಮಗೆಲ್ಲಾ ಆತ್ಮೀಯ ಧನ್ಯವಾದಗಳು.
ಕವನ ನವ್ಯದಲ್ಲಿ ಚೆನ್ನಾಗಿದೆ, ಪ್ರಾಸ ಜೋಡಿಸಲು ಬಹಳ ಪ್ರಯತ್ನಿಸಿದ್ದೀರಿ, Good Luck, Thanks
ReplyDeleteಬಂದೆ ಬರ್ತಾರೆ...
ReplyDeleteನಿಮ್ಮ ಪ್ರೀತಿ ಹಸಿರಾಗಿರಲಿ....
ಚೆನ್ನಾಗಿದೆ ಕವನ...
ದಾಂಪತ್ಯ ಗೀತೆ ಚೆನ್ನಾಗಿದೆ. ಈಗ ಇದು ನನಗೂ ಅನ್ವಯಿಸುತ್ತದೆ, ನನ್ನ ಹೆಂಡತಿಯೂ ತವರುಮನೆಗೆ ಹೋಗಿದ್ದಾಳೆ
ReplyDeletekavana chennagide.
ReplyDeletehappy ugadi
habba mugisikondu baruttaare bidi.
hogi barali. illadiddare jothege hodaraayitu...
thavarina nenapaagirabahudu...
ವಿ.ಆರ್.ಭಟ್,ಸವಿಗನಸು,DeepasmithaH. S. ASHOK KUMAR,
ReplyDeleteನಿಮಗೆಲ್ಲಾ ಆತ್ಮೀಯ ಧನ್ಯವಾದಗಳು.happy ugadi to all
ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.
ReplyDeleteChennagide sir... viraha vedaneyanna chennagi vyaktapadisiddeera... keep writing :)
ReplyDeletethank u mr rameshh.agaaga baruttiri.namaskaara.
ReplyDeleteಕೂಮು..
ReplyDeleteಯಾಕೆ ಈ ಆತಂಕ...ಬರ್ತಾರೆ ಬಿಡಿ...ಅಮ್ಮನ್ನ ಅಪ್ಪನ್ನ ನೋಡಿ ತವರಿನ ಸುಖ ಉಂಡು ಒಂದೆರಡು ದಿನದಲ್ಲಿ....
ಆದ್ರೂ ......ಮೆಚ್ಚಬೇಕಾದ್ದೇ ನಿಮ್ಮ ಅರ್ಧನಾರೀಶ್ವರ ಪ್ರಲಾಪ...
jalanayanaravare,
ReplyDeleteche!che! yenandubittiri,idu pralaapavalla,alaapa!
ಬಹಳ ಚೆನ್ನಾಗಿ ಮನಸ್ಸಿನ ಭಾವನೆಗಳನ್ನ ಬರಹದಲ್ಲಿ ಮೂಡಿಸಿದ್ದೀರಿ, ಆ ಸಂಭಾಷಣೆಯ ಹಿಂದಿನ ಪ್ರೀತಿ-ಸ್ನೇಹವನ್ನ ಸವಿಯುವಂತೆ ಮಾಡಿದ್ದಕ್ಕೆ ಧನ್ಯವಾದ.
ReplyDeletegeete ರವರೆ, ದನ್ಯವಾದ.
ReplyDelete