Thursday, March 11, 2010

ಹೊರಟಿಹಳು ನನ್ನವಳು

ನನ್ನವಳು
ಹೊರಟಿಹಳು ತವರಿಗೆ೦ದು,
ಕೇಳಿದೆನು
ನಾನವಳ, ಯಾವಾಗ ಬರುವುದೆ೦ದೂ?

ಹೇಳಿದಳು,
ಇನ್ನು ಮೆಟ್ಟಲಿಳಿದಿಲ್ಲ, ಈ ಪ್ರಶ್ನೆ ಏನು?
ನಾನೆ೦ದೆ,
ನೀ ನನ್ನ ಅರಗಿಣಿಯಲ್ಲವೇನು?

ಉಸುರಿದಳು,
ಕೊಟ್ಟಿಲ್ಲವೇ ಮೊಗೆ ಮೊಗೆದು ಪ್ರೀತಿ.,
ಒ೦ದಷ್ಟು ದಿನವಿಲ್ಲದಿರೆ ಅದೇನು ಭೀತಿ?
ತಲೆ ಸವರಿ ಹೇಳಿದೆನು, ನೀ ನನ್ಜ್ನ ಅಕ್ಷಯ ಪಾತ್ರೆ
ನೀನಿಲ್ಲದೇ ನಿದ್ದೆ ಬಾರದು ರಾತ್ರೆ.

ತೊರುತ್ತ ಹುಸಿಮುನಿಸ,
ಹೇಳಿದಳು ಅರ್ಧಾ೦ಗಿ,
ಕಾದಿಲ್ಲವೇ ತಾಯಿ ನಾ ಬರುವೆಯೆ೦ದೂ,
ಇದಿರ್ಗೊಳಲು ಬರುವರು ನನ್ನಪ್ಪ ಮು೦ದೂ.

ಬಿಗಿದಪ್ಪಿ ಹೇಳಿದೆನು
ಹೋಗಮ್ಮಜಲಜಾಕ್ಷಿ ಬೇಗನೇ ಮು೦ದೂ
ಕಾದಿಹರು ಹೆತ್ತವರು ನೀ ಬರುವೆಯೆ೦ದೂ
ತಿರುಗಿ ಬಾರಮ್ಮಹರಿಣಾಕ್ಷಿ ನಾ ಕಾದಿರುವೆನೆ೦ದೂ

ನನ್ನವಳು
ಹೊರಟಿಹಳು ತವರಿಗೆ೦ದೂ
ಕಾದಿರುವೆ ಯಾವಾಗ ಬರುವುದೆ೦ದೂ
ಬರುವುದೆ೦ದೂ......
.........................

22 comments:

  1. ವಿರಹವಿಲ್ಲದಿರೆ ಸೊಗಲಿಲ್ಲ ಪ್ರೀತಿಯೋಳು
    ಹೋಗಿ ಬರಲಿ ಬಿಡಿ ಎರಡೇ ದಿನ.
    ಬಂದೆ ಬರುವಳು ತಿರುಗಿ ಒಡೋಡಿ ನಿಮ್ಮ ಬಳಿ...
    ಆಗಿರುವುದಾಗ ನೋಡಿ ಆ ಪ್ರೀತಿ ದ್ವಿಗುಣ

    ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಈ ಕವನ. ಓದಿ ಸಂತೋಷವಾಯ್ತು.

    ReplyDelete
  2. ಬರ್ತಾರೆ ಸರ್, ಇಷ್ಟೊಂದು ಪ್ರೀತಿಯಿಂದ ಹೇಳಿದ ಮೇಲೆ ಬರದಿದ್ದರಾಯ್ತೆ..:)
    ಚೆನ್ನಾಗಿದೆ ಕವನ

    ReplyDelete
  3. ಕೆ ಯಸ್ ನ ನೆನಪಲ್ಲಿ,
    ಮತ್ತೆ ಮತ್ತೆ ಓದಿದೆ.
    ಚೆನ್ನಾಗಿದೆ.ದಾಂಪತ್ಯದ ನವಿರಾದ ಪ್ರೀತಿ..

    ReplyDelete
  4. ಕವನ ಚೆನ್ನಾಗಿದೆ.

    ReplyDelete
  5. ಬರ್ತಾರೆ ಬಿಡಿ, ಎರೆದೆ ದಿನ ತಾನೇ! ಈಗ ಎರೆಡು ಯುಗ ಆಗಿ ಕಂಡರೂ, ನಿಮ್ಮಾಕೆ ಬಂದ ನಂತರ ಎರೆಡು ಯುಗ ಎರೆಡು ದಿನವಾಗುತ್ತಲ್ವಾ? ಮತ್ತ್ಯಾಕೆ ಚಿಂತೆ?

    ReplyDelete
  6. ಚೆನ್ನಾಗಿದೆ. ನಿಮ್ಮಿಬ್ಬರ ಪ್ರೀತಿ ಸದಾ ಹಸಿರಾಗಿರಲಿ.

    ReplyDelete
  7. ಕುಸು....

    ನರಸಿಂಹಸ್ವಾಮಿಯವರ ನೆನಪಾಯಿತು ನೋಡಿ...

    ಬಹಳ ಚಂದವಾಗಿದೆ...
    ಸರಸ ದಾಂಪತ್ಯ ಚೆನ್ನಾಗಿ ಮೂಡಿ ಬಂದಿದೆ..
    ಅಭಿನಂದನೆಗಳು..

    ReplyDelete
  8. ನಿಮ್ಮೆಲ್ಲರ ಹಾರೈಕೆ ಸದಾ ಹಸಿರಾಗಿರಲಿ,
    ಅದೆ ನಮ್ಮ ಪ್ರೀತಿಯ ಉಸಿರಾಗಲಿ.
    ಹಾರೈಸಿದ ಒ ಮನಸೇ ,ಸುಬ್ರಹ್ಮಣ್ಯ ಭಟ್ರೇ,ಮೊರ್ತಿಯವರೆ,ನಾರಾಯಣ ಭಟ್ರೇ,ವೆ೦ಕಟಕೃಷ್ಣರೆ,ಸೀತಾರಾಮರೆ,ಮನಮುಕ್ತಾ ಅವರೇ,ಪ್ರಕಾಶ್ ಅವರೇ ನಿಮಗೆಲ್ಲಾ ಆತ್ಮೀಯ ಧನ್ಯವಾದಗಳು.

    ReplyDelete
  9. ಕವನ ನವ್ಯದಲ್ಲಿ ಚೆನ್ನಾಗಿದೆ, ಪ್ರಾಸ ಜೋಡಿಸಲು ಬಹಳ ಪ್ರಯತ್ನಿಸಿದ್ದೀರಿ, Good Luck, Thanks

    ReplyDelete
  10. ಬಂದೆ ಬರ್ತಾರೆ...
    ನಿಮ್ಮ ಪ್ರೀತಿ ಹಸಿರಾಗಿರಲಿ....
    ಚೆನ್ನಾಗಿದೆ ಕವನ...

    ReplyDelete
  11. ದಾಂಪತ್ಯ ಗೀತೆ ಚೆನ್ನಾಗಿದೆ. ಈಗ ಇದು ನನಗೂ ಅನ್ವಯಿಸುತ್ತದೆ, ನನ್ನ ಹೆಂಡತಿಯೂ ತವರುಮನೆಗೆ ಹೋಗಿದ್ದಾಳೆ

    ReplyDelete
  12. kavana chennagide.
    happy ugadi
    habba mugisikondu baruttaare bidi.
    hogi barali. illadiddare jothege hodaraayitu...
    thavarina nenapaagirabahudu...

    ReplyDelete
  13. ವಿ.ಆರ್.ಭಟ್,ಸವಿಗನಸು,DeepasmithaH. S. ASHOK KUMAR,
    ನಿಮಗೆಲ್ಲಾ ಆತ್ಮೀಯ ಧನ್ಯವಾದಗಳು.happy ugadi to all

    ReplyDelete
  14. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete
  15. Chennagide sir... viraha vedaneyanna chennagi vyaktapadisiddeera... keep writing :)

    ReplyDelete
  16. ಕೂಮು..
    ಯಾಕೆ ಈ ಆತಂಕ...ಬರ್ತಾರೆ ಬಿಡಿ...ಅಮ್ಮನ್ನ ಅಪ್ಪನ್ನ ನೋಡಿ ತವರಿನ ಸುಖ ಉಂಡು ಒಂದೆರಡು ದಿನದಲ್ಲಿ....
    ಆದ್ರೂ ......ಮೆಚ್ಚಬೇಕಾದ್ದೇ ನಿಮ್ಮ ಅರ್ಧನಾರೀಶ್ವರ ಪ್ರಲಾಪ...

    ReplyDelete
  17. ಬಹಳ ಚೆನ್ನಾಗಿ ಮನಸ್ಸಿನ ಭಾವನೆಗಳನ್ನ ಬರಹದಲ್ಲಿ ಮೂಡಿಸಿದ್ದೀರಿ, ಆ ಸಂಭಾಷಣೆಯ ಹಿಂದಿನ ಪ್ರೀತಿ-ಸ್ನೇಹವನ್ನ ಸವಿಯುವಂತೆ ಮಾಡಿದ್ದಕ್ಕೆ ಧನ್ಯವಾದ.

    ReplyDelete