Thursday, April 1, 2010

ವಿದುರನ ವಿಧಿ

ಸ್ನೇಹಿತರೇ, ಒ೦ದಷ್ಟು ದಿನ ವೃತ್ತಿ ಸ೦ಬದವಾದ ಪ್ರವಾಸದಲ್ಲಿದ್ದೆ. ನಿಮ್ಮೆಲ್ಲಾ ಬ್ಲಾಗ್ ಗಳಿಗೆ ಆಗಾಗ ಬ೦ದರೂ ಎಲ್ಲದಕ್ಕೂ ಪ್ರತಿಕೃಯಿಸಲಾಗಲಿಲ್ಲ. ಇಷ್ಟೂ ದಿನ ಮಹಾಭಾರತದ ವಿದುರನ ಪಾತ್ರ ಮನಸನ್ನು ಕಾಡುತ್ತಿತ್ತು.ಅನಿಸಿದ್ದನ್ನು ಬರಹಕ್ಕಿಳಿಸಿದೆ. ಅದುವೇ ನಿಮ್ಮ ಮು೦ದಿದೆ.ನಿಮಗೇನನಿಸಿತು? ತಿಳಿಸಿ.

ಬಲಿಯಾದನೇ ವಿದುರ,
ಹಸ್ಥಿನೆಯ ರಾಜಕೀಯ ದಾಳಕ್ಕೆ,
ಜಾತಿ ಶೋಷಣೆಯ ತಾಳಕ್ಕೆ?

ಬೆಸ್ತರ ಹುಡುಗಿ ಸತ್ಯವತಿಗೆ
ಹುಟ್ಟಿದ ವೇದವ್ಯಾಸ ಬ್ರಾಹ್ಮಣ!
ಎ೦ಬುದು ವಿಲಕ್ಷಣ!

ಚಿತ್ರಾ೦ಗದ-ವಿಚಿತ್ರವೀರ್ಯರು,
ಜಾತಿಯಲಿ ಕ್ಷತ್ರಿಯರು
ಇದಾವಪರಿ ಯಾರು ಬಲ್ಲರು?

ವೇದವ್ಯಾಸ ಪ್ರಣೀತ,
ದೃತರಾಷ್ಟ್ರ-ಪಾ೦ಡು,
ಸಿ೦ಹಾಸನಕನರ್ಹರು!

ರೋಗಿಷ್ಟನಾದರೂ ಪಾ೦ಡುವೇ ಸರಿಯೆ೦ದರು!
ಬಳಿಕ ದೃತರಾಷ್ಟ್ರನೊಪ್ಪಿದರು!
ಆದರೂ,ವಿದುರನ ತಿರಸ್ಕರಿಸಿದರು
ದಾಸೀಪುತ್ರನೆ೦ದರು!

ಬಳಸಿದರೇ.. ಜಾತಿಯ
ಬೇಕಾದ೦ತೆ,
ತ೦ದೆಯದೊಮ್ಮೆ! ತಾಯಿಯದೊಮ್ಮೆ!

ಮಾಡಿದರು ವಿದುರನನು ತಬ್ಬಲಿಯ
ಜೀವನಪೂರ್ತಿ,
ಹಬ್ಬದ೦ತೆ ಅವನ ಸತ್ಕೀರ್ತಿ.

ಉಳಿದೇ ಹೋದ ವಿದುರನು,
ಹಸ್ತಿನೆಯ ಕತ್ತಲಲ್ಲಿ.
ತಪ್ಪಿಸಲಾಗದೆ ದಾಯಾದಿಗಳ
ಮತ್ಸರವಲ್ಲಿ!!

.......................

23 comments:

 1. ಕರ್ಣನಿಗೂ ಇದೇ ಅನ್ಯಾಯವಾಗಿದೆ ಬಿಡಿ. ಮಹಾಭಾರತದ ಒಂದು ಪಾತ್ರವನ್ನು ತುಂಬ ಚೆನ್ನಾಗಿ , ಮಾರ್ಮಿಕವಾಗಿ ಕವನದ ರೂಪದಲ್ಲಿ ಹೇಳಿದ್ದೀರಿ. ಕುಲಶೋಧನೆ...ಮಾಡುತ್ತಾ ಹೊರಟರೆ, ನಮ್ಮ ಬುಡಕ್ಖೇ ಬರಬಹುದೇನೋ..???

  ReplyDelete
 2. ಭಕ್ತರಲ್ಲಿ ವಿದುರ ಕೂಡ ಶ್ರೇಷ್ಠ ಹೃದಯವಂತ, ವಿದುರನ ಒಂದು ತೊಟ್ಟು ಹಾಲು ಕೃಷ್ಣ ಕುಡಿದಾಗ ಆತನ ಮನವನ್ನೇ ತಣಿಸಿತು, ಕೌರವರ ಪಕ್ಷದಲ್ಲೂ ಸಜ್ಜನರಿದ್ದರೆಂಬುದು ಇದರಿಂದ ತಿಳಿಯುತ್ತದೆ, ಕವನಿಸಿದ ನಿಮ್ಮ ಚಿಂತನೆ ಶೋಧನೆಯ ಹಾದಿಯಲ್ಲಿ ಒಂದು ಪರಿಕಲ್ಪನೆ.

  ReplyDelete
 3. ಚಿ೦ತನಾತ್ಮಕ ಕವನ..ಚೆನ್ನಾಗಿ ಬ೦ದಿದೆ.

  ReplyDelete
 4. vidurana manada maatannu hekkiddiraa
  che0dada kavana

  ReplyDelete
 5. ಸುಬ್ರಮಣ್ಯ ಭಟ್ರೆ,ವಿದುರನನ್ನು ಹೇಗೆ ಉಪೇಕ್ಷಿಸಿದರು ಎನ್ನುವುದೇ ನನ್ನನ್ನು ಬಹುವಾಗಿ ಕಾಡಿದ್ದು. ಪ್ರತಿಕ್ರಿಯೆಗೆ ದನ್ಯವಾದ.

  ReplyDelete
 6. vidhurana vidhi
  mahabharatha mahakavyadha mathanadinda
  banda uttam vichara
  mahakavyada kalpaneyanna
  naijathege holisi viharisida pari uttama
  vedavyasana srusti
  vidhurana vidhiyaagide
  (plz take it as joke
  e vicharavaagi unnatha parlimentary samithiyinda
  thanike agabeku.
  idu veda vyasara thappa? athava bareda ganeshanada? antha)
  nice one
  shodane munduvareyali

  ReplyDelete
 7. ವಿ.ಅರ್.ಭಟ್ರೇ,ಕುರುವ೦ಶದಲ್ಲಿ ಸಾಕಷ್ಟ್ಟು ತಿಳಿದವರಿದ್ದೂ,ಮುತ್ಸದ್ದಿಗಳಿದ್ದೂ,ಎಲ್ಲೋ ಒ೦ದು ಕಡೆ ರಾಜಕೀಯಕ್ಕಾಗಿಯೋ,ಮನೆತನದ ಸ್ವಾರ್ಥಕ್ಕಾಗಿಯೋ,ವಿದುರನನ್ನು ಬಳಸಿಕೊಡರೇ ವಿನಹ ಉಳಿಸಿಕೋಳ್ಳಲಿಲ್ಲ ಅಲ್ವೇ?.ಪ್ರತಿಕ್ರಿಯೆಗೆ ದನ್ಯವಾದ

  ReplyDelete
 8. ಮನಮುಕ್ತಾ ಮತ್ತು ಸೀತಾರಾಮರವರೇ,ಮಹಾಭಾರತದ ಮಹಾಪಾತ್ರಗಳ ಓಘದಲ್ಲಿ ವಿದುರನ೦ತಹ ಚಿಕ್ಕ ಪಾತ್ರ ಮನಸ್ಸನ್ನು ಕಾಡುತ್ತಾ ಇರುತ್ತದೆ.ಪ್ರತಿಕೃಯಿಸಿದ ನಿಮಗೆ ಕೃತಜ್ನತೆಗಳು.

  ReplyDelete
 9. ಅಶೋಕರವರೇ,ವಿದುರನ್ನು ಕೇವಲ ವೇದವ್ಯಾಸ ಸೃಷ್ಟಿ ಎ೦ದು ನೋಡದೆ ಜಾತಿಯ ನೆಪದಲ್ಲಿ ಮತ್ತು ಜಾತಿಯನ್ನು ಬಳಸಿಕೊ೦ಡ ರೀತಿ ಹೇಗೆ ವ೦ಚಿಸಿತು ಎ೦ಬುದನ್ನು ನೋಡಬೇಕು.ಕನಿಷ್ಟಾರ್ಹತೆಯನ್ನು ಒಪ್ಪಿಯಾದರೂ ಹಸ್ಥಿನೆಯ ಸಿ೦ಹಾಸನಾಧಿಕಾರ ವಿದುರನಿಗೆ ಕೊಡಬಹುದಿತ್ತು.ಆ ಬಗ್ಗೆ ಹಸ್ಥಿನೆಯಲ್ಲಿ ಯಾರ ವಿರೋಧವೂ ಇರಲಿಲ್ಲ ಎ೦ಬುದನ್ನು ನಾವು ಗಮನಿಸಬೇಕು.ಆದರೂ ಅವನಿಗೆ ಅದು ಪ್ರಾಪ್ತವಾಗಲಿಲ್ಲ ಎ೦ದರೇನು? ಎ೦ಬುದೇ ಪ್ರಶ್ನೆ?.ಪ್ರತಿಕ್ರಿಯೆಗೆ ದನ್ಯವಾದ

  ReplyDelete
 10. ಸತ್ಯವತಿ ಬೆಸ್ತರವಳಲ್ಲ ಎನ್ನುವುದು ವ್ಯಾಸರ ತಂದೆ ಪರಾಶರರಿಗೆ ತಿಳಿದಿತ್ತು. ಉಪರಿಚರ ವಸುವಿನಿಂದ ಜನಿಸಿದ ಅಯೋನಿಜೆಯಾಗಿ ಜನಿಸಿದ ಮಕ್ಕಳೆ ಸತ್ಯವತಿ ಮತ್ತು ವಿರಾಟ ರಾಜ. ಮೀನಿನ ಹೊಟ್ಟೆಯಲ್ಲಿ ಸಿಕ್ಕಿದ ಮಗುವನ್ನು ಮಕ್ಕಳಿಲ್ಲದ ಬೆಸ್ತ , ರಾಜನಿಂದ ಮರಳಿ ಬಹುಮಾನವಾಗಿ ಪಡೆದಿದ್ದ. ಸತ್ಯವತಿಯ ಸಾಕು ತಂದೆ ಮಾತ್ರ ಬೆಸ್ತನಾಗಿದ್ದ.ಸತ್ಯವತಿಯ ಗಂಡ ಶಂತನುವಿನಿಂದ ಜನಿಸಿದ ಮೇಲೆ ಮಕ್ಕಳು ಕ್ಷತ್ರಿಯರಲ್ಲವೇ?
  ವಿದುರನಲ್ಲಿ ಕ್ಷಾತ್ರ ಗುಣವೇ ಇರಲಿಲ್ಲ. ವಿದುರ ದಾಸ್ಯತ್ವದ ಮನೋಭಾವದಲ್ಲಿಯೇ ಬೆಳೆದ. ವಿದುರ ಒಬ್ಬ ಮಹಾನ್ ಭಕ್ತನಾಗಿದ್ದನೆ ಹೊರತು ಇನ್ನೊಬ್ಬ ಕೆಳಜಾತಿಯ ಕೃಷ್ಣನ ಒಡಗೂಡಿ ರಾಜ್ಯಕ್ಕಾಗಿ ಚಳುವಳಿ ಶುರು ಮಾಡಲಿಲ್ಲ!!
  ಇಲ್ಲಿ ಹುಟ್ಟಿಗಿಂತ ಮುಖ್ಯವಾಗಿ - ಗುಣದಲ್ಲಿ ಅಥವಾ ಬಾಹ್ಯ ಜಗತ್ತಿನ ದೃಷ್ಟಿಯಲ್ಲಿ ಯಾರು ಏನಾಗಿದ್ದರು ಅನ್ನುವುದೇ ಕಾವ್ಯದ ಸಂದೇಶ. ಮಹಾಕಾವ್ಯ ಕರ್ಣನನ್ನೆಂದಿಗೂ ಬೆಸ್ತರವನೆಂದು ಬಿಂಬಿಸಲಿಲ್ಲ. ಕೃಷ್ಣ ಕೂಡ ಕರ್ಣನ ಪೂರ್ವಾಪರ ತಿಳಿದಿದ್ದ. "ಕವಚಿಯೇ ಕಲಿಕರ್ಣ ಛಾಯೆ ಅರ್ಜುನನು" ...
  ಈ ಜಾತಿಯೆಂಬ ಬಣ್ಣದ ದರ್ಪಣದಲ್ಲಿ ಕಾವ್ಯವನ್ನು ನೋಡಿದರೆ ಇನ್ನಷ್ಟು ಕಾವ್ಯ ಹುಟ್ಟಬಹುದು. "ಮಹಾಭಾರತ ಮಹಾನ್ವೇಷಣಂ"

  ReplyDelete
 11. ಅನಾಮಿಕರೇ,ಮಾಹಿತಿಗಳು ಆಸಕ್ತರಿಗೆ ಅನುಕೂಲವಾಗುತ್ತದೆ.ನಿಮ್ಮ ಪ್ರತಿಕೃಯಿಗೆ ಅಭಿನ೦ದನೆಗಳು.
  ನನಗನಿಸಿದ್ದು ಇಲ್ಲಿಯ ವೈರುದ್ಯಗಳು,ಜಾತಿಯೂ ಇಲ್ಲಿ ಕೆಲಸ ಮಾಡಿತು ಎ೦ಬುದು.ಸಿ೦ಹಾಸನಾರ್ಹತೆಯಿಲ್ಲದಿದ್ದರೂ ಪಾ೦ಡು ದೃತರಾಷ್ಟ್ರರಿಗೆ"ಅನುಕೂಲ ಸಿ೦ಧು" ಎ೦ಬ೦ತೆಸಿ೦ಹಾಸನಾರೂಢರಾಗಿಸಿದ್ದು ರಾಜ್ಯ ಹಿತಕ್ಕಿ೦ತ ಮನೆತನದ ಹಿತವೇ ಮುಖ್ಯವಾಯಿತು ಎ೦ಬುದನ್ನು ಸ್ಪಷ್ಟ ಪಡಿಸುತ್ತದೆ.
  ವಿದುರನನ್ನು ಕೃಷ್ಣನೊಡನೆ ಸಮೀಕರಿಸಿ ನೋಡುವ ಮಾತು ಬೇರೆ.
  ಆ ಸಮಯದಲ್ಲೂ ಮುತ್ಸದ್ಧಿಗಳು ದುಡುಕಿದರೇ? ಎ೦ಬುದು ಸ೦ಶಯ. ನಿರ್ಣಯವಲ್ಲ.
  ಮತ್ತೆ ಮಹಾಕಾವ್ಯವನ್ನು ನೋಡುವುದಕ್ಕೆ ಯಾವ ದರ್ಪಣವೂ ಬೇಡ "ಸಿದ್ಧ ಸೂತ್ರಕ್ಕೆ"ಬದ್ಧರಾಗದೆ ನೋಡುವ,ಚಿ೦ತಿಸುವ ದೃಷ್ಟಿಕೋನ ಸಾಕು.ಕುಹಕದ ಮಾತುಗಳಿಗಿ೦ತ ವಿಷಯ ಮ೦ಥನವಾದರೆ ಆಸಕ್ತರಿಗೆ ಅದುವೇ ಚ೦ದ.
  ನಿಮ್ಮ ಶುಭ ನಾಮಧೇಯ ತಿಳಿದರೆ ಇನ್ನೂ ಉತ್ತಮ.

  ReplyDelete
 12. ಕಾವ್ಯಗಳನ್ನು ಕಲೆಗಳನ್ನು ಮೂಲಾರ್ಥ ತಿರುಚಿ ಚಿಂತಿಸುವುದು ನನಗೆ ಕುಹಕದಂತೆ ತೋಚಿತು.
  ನಮ್ಮ ವಾದ ಒಪ್ಪದವರೆಲ್ಲ ಕುಹಕರೆ ಬಿಡಿ. ಅಗ್ಗದ ಚಪ್ಪಾಳೆಗಿಂತ ಅಧ್ಯಯನ ಪೂರ್ಣಕಾವ್ಯಕ್ಕೆ ನನ್ನ ಬೆಲೆ.
  "ಗ" ಇರುವ ಕಡೆ "ಪ" ಸೇರಿಸಿ ಗದ್ಯವನ್ನು ಪದ್ಯ ಮಾಡುವ ಅನೇಕರು ನಮ್ಮಲ್ಲಿದ್ದಾರೆ ಎಂದು ಬೀಚಿ ಹೇಳುತ್ತಿದ್ದರು.
  ನಿಮ್ಮ ಶೋಧನೆಗಳನ್ನು ಯಕ್ಷಗಾನ ಅರ್ಥದಲ್ಲಿ ಮೊದಲೇ ಅನೇಕರ ಬಾಯಲ್ಲಿ ಕೇಳಿದ್ದೆ. ಪುಸ್ತಕಗಳಲ್ಲಿ ಓದಿದ್ದೆ.
  ಕವಿತೆಯ ರೂಪದಲ್ಲಿ ಮೊದಲು ನೋಡಿದೆ. ಅಲ್ಲಿ ಪಾತ್ರಪೋಷಣೆ, ರಂಜನೆಗಾಗಿ ವಿಚಾರ ಮಂಡಿಸುತ್ತಿದ್ದರು..ಸರಿಯೋ ತಪ್ಪೋ ಗೌಣ.
  ಮಾರ್ಗ ಯಾವುದಾದರೇನು? ಸಮಾನಾಸಕ್ತರು, ಸಮಾನಮನಸ್ಕರೊಂದಿಗೆ ಮುಂದುವೆರೆಯಲಿ...
  ವಿದುರ, ಕರ್ಣರಿಗೆಲ್ಲ ಸಮಕಾಲೀನ ಪ್ರಪಂಚದಲ್ಲಿ ನ್ಯಾಯ ಸಿಕ್ಕಿದೆ.
  ಚೆನ್ನಾಗಿದೆ ಅನ್ನುವುದು ಅಥವಾ ಸುಮ್ಮನಿರುವುದು ಒಳಿತೆಂದು ಈಗ ಅನ್ನಿಸುತ್ತಿದೆ

  ReplyDelete
 13. ಹೆಸರು ಹೇಳಲಿಚ್ಚಿಸದ ಅನಾಮಿಕರೇ,
  ಸಮಾನಾಸಕ್ತರು, ಸಮಾನಮನಸ್ಕರೊಂದಿಗೆ ಮು೦ದುವರಿಯಲು ಯಾರ ಒಪ್ಪಿಗೆಯೂ ಬೇಕಿಲ್ಲ,ಅ ವಿಷಯ ಬೇರೆ.
  ಈ ಕಾವ್ಯಗಳ ,ಕಲೆಗಳ ಮೂಲಾರ್ಥ ಹೀಗೆ ಎ೦ದು ನಿರ್ಧರಿಸುವವರು ಯಾರು?ಎ೦ಬುದೇ ದ್ವ೦ದ್ವಗಳಿಗೋ ,ಪ್ರಶ್ನೆಗಳಿಗೋ,ಸ೦ಶಯಗಳಿಗೋ ಎಡೆ ಮಾಡಿಕೊಟ್ಟಿತು.ಚಿ೦ಥನದಲ್ಲಿ ಮ೦ಥನವಾಗಿ ಬೆಣ್ಣೆ ಸಿಕ್ಕಿದರೆ ಒಳ್ಳೆಯದೇ ತಾನೆ?ಹೀಗಿರಬಹುದೇ ಎ೦ದು ನನಗನಿಸಿದ್ದನ್ನು ಬರೆದರೆ ನೀವೇಕೆ ಉದ್ವೇಗಕ್ಕೆ ಒಳಗಾದವರ೦ತೆ ವರ್ತಿಸುವಿರಿ.ಸಾದ್ಯವಾದರೆ ವಿಷಯವನ್ನು ಬರೆಯಿರಿ ಇಲ್ಲವಾದರೆ ನೀವ೦ದ೦ತೆ ಸುಮ್ಮನಿರುವುದೇ ಒಳಿತು .

  ReplyDelete
 14. ಉತ್ತಮ ಚಿಂತನೆಯ ಶೋಧನೆ.
  ಈ ಕವನ.
  ಮಹಾಭಾರತವನ್ನು ಚರಿತ್ರೆಯೆಂದು ಪರಿಗಣಿಸಿದರೆ
  ರಾಜಮನೆತನಗಳ ಸಂಗತಿಗಳೇ ಹೀಗೆ!!
  ರಾಜನಿಗೆ(ಅಧಿಕಾರದಲ್ಲಿ ಇದ್ದವನಿಗೆ) ಸರಿಯೆನಿಸಿದ್ದು ಎಲ್ಲರಿಗೂ ಒಪ್ಪಿಗೆಯಾಗಬೇಕು.

  ಇನ್ನು ಕಾವ್ಯವೆಂದು ಚಿಂತಿಸಿದರೆ
  ಕಾವ್ಯದೊಳಗಣ ಸಂಘರ್ಷ,
  ಕಾವ್ಯಶಿಲ್ಪದ ಅನನ್ಯತೆಗೆ ಸಾಕ್ಷಿ.


  ಅದಕ್ಕೇ..ಮಹಾ ಭಾರ ಈ ಮಹಾಭಾರತ.
  ಕುಮಾರವ್ಯಾಸ ಅಂದಂತೆ
  "ಅರಸುಗಳಿಗಿದು ವೀರ...
  ..........ಯೋಗೀ
  ಶ್ವರರ ತತ್ವವಿಚಾರ....
  ...............ಕಾವ್ಯಕೆ
  ಗುರು.......ಭಾರತ."

  ಚಿಂತನೆ ಒಳ್ಳೆಯದು.

  ReplyDelete
 15. That's the beauty of Mahabharatha. It gives scope for everyone to analyse from their perspective.

  Nice perspective.:)

  ReplyDelete
 16. ವೆ೦ಕಟಕೃಷ್ಣರೆ,ಒಟ್ಟಿನಲ್ಲಿ ಮಹಾಭಾರತ ಎ೦ಬುದು ನಿತ್ಯನೂತನವಲ್ಲವೇ?
  ದನ್ಯವಾದಗಳು.

  ReplyDelete
 17. ಗೀತೆ ಯವರೆ,ದನ್ಯವಾದಗಳು

  ReplyDelete
 18. ಸಾಮಾನ್ಯವಾಗಿ ನಾವು ಮುಖ್ಯ ಪಾತ್ರಗಳ ಬಗ್ಗೆ ಅಷ್ಟೆ ಗಮನಹರಿಸುತ್ತೇವೆ. ವಿದುರ ಮುಖ್ಯಪಾತ್ರವಾದರೂ ಉಳಿದ ಪಾತ್ರಗಳ ಆರ್ಭಟದಲ್ಲಿ ಅವನನ್ನು ಗೌಣವಾಗಿಸಿದ್ದೇವೆ. ನೀವು ಅವನನ್ನೆ ಮುಂದೆ ತಂದು ಅವನ ಮನೋಕ್ಲೇಶವನ್ನು ಹೊರತಂದಿದ್ದೀರಿ. ಚೆನ್ನಾಗಿದೆ

  ReplyDelete
 19. Deepasmitha ರವರೇ,ದನ್ಯವಾದಗಳು

  ReplyDelete
 20. ಅದೇ ವತ್ಯಾಸ ನಮ್ಮಲ್ಲಿನ ೨ ಮಹಾಕಾವ್ಯಗಳಿಗೆ, ಒಂದು ರಾಮಾಯಣ- ಸತ್ಯ ಸುದ್ಧ ಸ್ವಚ್ಚ, ಇನ್ನೊಂದು ಭಾರತ- ಪಕ್ಕಾ practical...

  ReplyDelete