Wednesday, January 13, 2010

ರಾಜಕೀಯ

ಸಾಕಾಗಿದೆ ನೋಡಿ ರಾಜಕೀಯ
ರಾವಣ
ರಾಸ೦ದ
ಕೀಚಕ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು.

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೄಪಾಲರು
ಎಲ್ಲರೂ.....ದೄತರಾಷ್ಟ್ರರು

ಅನಿಸುತಿದೆ,
” ಧರ್ಮ ಸ೦ಸ್ತಾಪನಾರ್ಥಾಯಾ.................”

2 comments:

  1. ಸಂಸ್ಥಾಪನಾರ್ಥಾಯ..
    ಕನ್ನಡದಲ್ಲಿ ಕುಟ್ಟುವುದು ಒಂದು ಕಲೆ.ಏನಂತೀರಾ?
    ಭಾರೀ ಮಜಾ ಇದೆ ಅಲ್ವಾ?

    ReplyDelete