ಬೇಕಾಗಿದೆ ನೆಮ್ಮದಿ...
ಅದರ ಎಲ್ಲಿ ಹುಡುಕಲಿ
ಮುನಿಗಳ೦ತೆ ಕಾಡಿ ನಲ್ಲೆ..!?
ಪ್ರಾಣಿಗಳೇ ಎಲ್ಲಾ ಗಲಿ ಬಿಲಿ...
ತೆಗೆದುಕೊಳ್ಳ್ಳಲೆ ಸನ್ಯಾಸ...
ಸಾಕಾಗಿದೆ ನೆಲೆಯಿಲ್ಲದವರ ಉಪನ್ಯಾಸ
ಎಲ್ಲವು ಪ್ರದರ್ಶನ
ಕಾಣುವುದಿಲ್ಲ ದರ್ಶನ
ತೆಗೆದುಕೊಳ್ಳಲೇ ಮಾರ್ಗದರ್ಶನ
ಯಾರಲ್ಲಿ ?
ಎಲ್ಲರೂ ಹುಡುಕುವುದು ಮಾರ್ಗವನ್ನೆ.....?
ಹೊಗಲೇ ದೇ ವಸ್ತಾನಕ್ಕೆ
ಆದರೆ ಕಾಣುವುದು ಯಾರದೊ ಆಸ್ತಾನ
ಯಾವುದು ಇಲ್ಲ ಸ್ವ ಸ್ತಾನ
ಯಾವುದು ಕಾಣಬೇಕೊ ಅದಿಲ್ಲ
ಯಾವುದು ಕಾಣಿಸುವುದೊ ಅದು ಬೇಕಿಲ್ಲ
ಹುಡುಕುತ್ತಿದ್ದೇನೆ.....ಇನ್ನೂ ಸಿಕ್ಕಿಲ್ಲ !!
ಹುಡುಕುತ್ತಿದ್ದೇನೆ........
ಅಂತೂ ಹುಡುಕುವ ಆಟ, ಆರಂಭವಾಗಿದೆ.
ReplyDeleteಕೊನೆ ಹೇಗೋ?ಏನೋ?ಬಲ್ಲವರಾರು?
"ಹುಡುಕುವುದಾದರೆ ಹುಡುಕು,ಕಳೆದು ಕೊಂಡಲ್ಲೇ ಹುಡುಕು"
ಅನ್ನುವ ಮಾತು ಕೇಳಿದ್ದೇನೆ.ಆದರೆ ಕಳೆದುಕೊಂಡದ್ದೆಲ್ಲಿ?
ಎನ್ನುವುದು ಅರಿಯದೆ ಇದ್ದೇನೆ,ಇನ್ನೂ ಇಲ್ಲೇ....
ಕುಳಿತಲ್ಲೇ.
ಅಗೆದಸ್ಟು,ಮೊಗೆದಸ್ಟು ನಿಗೂಢವಾಗುವ ’ಕಾಲ”ನಲ್ಲಿ/ದಲ್ಲಿ ತಿಳಿಯುವ ಪುಟ್ಟ ಪ್ರಯತ್ನ.
ReplyDeleteದನ್ಯವಾದಗಳು