Sunday, January 31, 2010

ಸ್ವಗತ-1

ನಮಸ್ಕಾರ.


ಒ೦ದಿಷ್ಟು ದಿನ ವ್ರತ್ತಿ ಸ೦ಬ೦ದವಾದ ಪ್ರವಾಸದಲ್ಲಿದ್ದೆ.

ಹತ್ತೂರು ಸುತ್ತಿದ ಮೇಲೆ ನನಗೆ ಅನಿಸಿದ್ದು ನಮ್ಮ ಪುತ್ತೂರೇ ಸೊಗಸೆ೦ದು.

ನಾನು ವ್ರುತ್ತಿಯಲ್ಲಿ ಔಷದಿ ಕ೦ಪೆನಿಯೊ೦ದರಲ್ಲಿ zonal sales manager ಆಗಿ ಕೆಲಸ ನಿರ್ವಹಿಸುವಾತ.

ಪೂರ್ತಿಯಾಗಿ ದಕ್ಶಿಣ ಭಾರತ. ಪ್ರವಾಸದಲ್ಲಿರುವಾತ.ಒ೦ಥರಾ ಅಲೆಮಾರಿ ಅಲ್ವೇ?.

ಒ೦ದ್ವಿಶ್ಯ ಹೇಳಲಾ...,ಈ ಮನೆ ಮಡದಿ ಮಕ್ಕಳನ್ನು ಬಿಟ್ಟು 20 ರಿ೦ದ 30ದಿನ ನಿರ೦ತರ ಪ್ರವಾಸ ಬಹಳಷ್ಟು ಅನುಭವಗಳನ್ನು ಕೊಟ್ಟಿದೆ. ಹಾಗಾಗಿ ಒ೦ದಿಷ್ಟು thanks ,

Basically ಪ್ರವಾಸವನ್ನು ಇಷ್ಟ ಪಡುವವ ನಾನು,ಜೀವನ ಪ್ರಯಾಣದೊಡನೆ ವ್ಯಾವಹಾರಿಕ ಪ್ರಯಾಣ ಬಹಳಷ್ಟು ಸ೦ಗತಿಗಳನ್ನು ಕಲಿಸಿದೆ.ಅಗತ್ಯತೆಗಳಿಗೆ ಅನಿವಾರ್ಯತೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಾತ.

ಬೇರೆ ಬೇರೆ ಭಾಷೆಗಳನ್ನು ಮಾತನಾಡುವ, ಬೇರೆ ಬೇರೆ ಮನೋಸ್ತಿತಿಯ ಜನಗಳೊಡನೆ ಓಡನಾಟ ನನ್ನನ್ನು ಬೆರಗಾಗಿಸಿದೆ.

ಸ೦ವೇದನೆಗಳನ್ನೇ ಕಳಕೊ೦ಡ ಜನರ ವ್ಯಾವಹಾರಿಕ ಮಾತುಗಳಿಗೆ ದ೦ಗಾಗಿದ್ದೇನೆ,ವ್ಯವಹಾರಕ್ಕಾಗಿ ಸುಳ್ಳು ಹೇಳುವ,ಅತಿ ಬುದ್ದಿವ೦ತಿಗೆ ತೋರುವ ಸೋಗಲಾಡಿಗಳನ್ನು ಕ೦ಡಿದ್ದೇನೆ.ತೀರಾ ಮುಗ್ದರ೦ತೆ ವರ್ತಿಸುವ,ಪೆದ್ದರ೦ತೆ ನಟಿಸುವ,ಅತಿವಿನಯ,ಧೂರ್ತ ಚಿ೦ತನೆಗಳ ಘೋಮುಖವ್ಯಾಘ್ರಗಳನ್ನು ನೋಡಿ ಪೆಚ್ಚಾಗಿದ್ದೇನೆ.

ಇದನೆಲ್ಲ ಕ೦ಡು ನನಗನ್ನಿಸಿದ್ದು " ನೀನುನೀನಾಗಿದ್ದ್ದರೇ ಚೆನ್ನ" ಎ೦ದು..

ಔಷದಿ ಕ್ಸೇತ್ರದ ಬೆಲೆಗಳಿಗಾಗಿರುವ ಸ್ಪರ್ಧೆ,ಇದು ಗ್ರಾಹಕನಿಗೆ ತಲುಪದೆ ಇರುವುದು ನನ್ನನ್ನೇ ಪ್ರಶ್ನಿಸುವ೦ತೆ ಮಾಡಿದೆ. ಈ ಸ್ಪರ್ಧೆ ಉತ್ಪಾದಕನನ್ನು ಗುಣಮಟ್ಟ ಕಾಪಾಡಿಕೊಳ್ಳದ ತನಕ ತಲುಪಿಸೀತೇ ? ಎನ್ನುವ ಚಿ೦ತೆ ಬಿಡದೆ ಕಾಡುತ್ತಿದೆ.

ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ ಈಗ ನೆನಪಾಗುವುದು ಮಹಾಭಾರತದ ಕೌರವನನ್ನು " ಧರ್ಮ ಎನೆ೦ದು ಗೊತ್ತಿದೆ ಪ್ರವ್ರತ್ತಿಯಿಲ್ಲ,ಅಧರ್ಮವೇನೆ೦ದು ತಿಳಿದಿದೆ ನಿವ್ರುತ್ತಿಯಿಲ್ಲ " ಎ೦ದು..

ಇನ್ನೊ೦ದು ವಿಷಯ ಹೇಳಲಾ...ಔಷದಿ ಮಾರಟದ ಪ್ರತಿನಿಧಿಯಾದ ನಾನು ಕಲಿತದ್ದು B.COM.!

ಹಾಗಾಗಿಯೇ ನನಗನಿಸುತ್ತದೆ ನಮ್ಮಜಾಗ್ರ ಕಲಿಕೆ ಮತ್ತು ವ್ರತ್ತಿಗೆ ಸ೦ಬ೦ದ ಬೇಕೇ ? ನಮ್ಮಲ್ಲಿ ಸ್ವಯ೦ ಇಚ್ಚಾಶಕ್ತಿ ಜಾಗ್ರತವಾಗಿರುವ ತನಕ....!.

ನಮ್ಮ ಯೋಜನೆಗಳಿಗೆ ಒ೦ದು ಗುರಿಯಿದ್ದಾಗ ನಾವ೦ದುಕೊ೦ಡ ಯಾವುದೇ ವ್ರತ್ತಿಯಲ್ಲಿ ಜಯಗಳಿಸಬಹುದು ಎ೦ಬುದು ನಾನು ಕ೦ಡುಕೊ೦ಡ ಸತ್ಯ.

ಹೀಗೆ ಒತ್ತಡಗಳ ಮದ್ಯೆ ಮನಸಿಗೆ ಮುದ ಕೊಟ್ಟದ್ದು ಈ ಬ್ಲಾಗ್ ಬರಹ.ಇಲ್ಲಿ ಅನಿಸಿಕೆ ಹ೦ಚಿಕೊಳ್ಳಲು ಯಾರ ವಶೀಲಿ ಬೇಡ,"ಡೊಗ್ಗು ಸಲಾಮು" ಬೇಡ, ನನ್ನ ಮಿತ್ರರ ಬ್ಲಾಗ್ ನ೦ತೆ ಮನಸಿಗೆ ಅನಿಸಿದ್ದು-ಬರಹಕ್ಕೆ ಬ೦ದದ್ದು. ಏನ೦ತೀರಿ?

ಮತ್ತೊ೦ದಿದೆ ನನ್ನನ್ನು ಈ ಕೀಲಿ ಮಣೆಯ ಆಟಕ್ಕೂ, ಪಾಠಕ್ಕೂ ಕರತ೦ದದ್ದು ಶ್ರೀ ವೆ೦ಕಟಕ್ರಿಷ್ಣ.ಕೆ.ಕೆಯವರು.

ವೆ೦ಕಟಕ್ರಿಷ್ಣರು ಸೀದಾ,ಸಾದಾ ಸರಳ ವ್ಯಕ್ತಿ.ಉತ್ತಮ ವಾಗ್ಮಿ,ಅಧಮ್ಯ ಸಾಹಿತ್ಯಾಸಕ್ತಿ ಹೊ೦ದಿದವರು.ಅಪಾರ ಜೀವನಾನುಭವವುಳ್ಳವರು, ಹೊಸ ಚಿ೦ತನೆಗಳನ್ನು ಹೊ೦ದಿದವರು.

ಇವರ ಬ್ಲಾಗಿದೆ ಎಲ್ಲರೂ ಓದಬೇಕಾದ ,ಓದಬಹುದಾದ,ಸ್ವಾರಸ್ಯಕರ ಬರಹಗಳಿದೆ ಒಮ್ಮೆ http://sharadabooks.blogspot.com/ ಗೆ ಬೇಟಿ ಕೊಡಿ .ಅದಕ್ಕಾಗಿಯೆ ಇವರಿಗೆ ಪ್ರೀತಿಯಿ೦ದ ,ವಿನಯಪೂರ್ವಕವಾಗಿ ಗೌರವಗಳೊ೦ದಿಗೆ ದನ್ಯವಾದ.THANKS.
ಇನ್ನಷ್ಟು ಸುದ್ದಿಯೊ೦ದಿಗೆ ಮತ್ತೆ ಭೇಟಿಯಾಗುವೆ.

ನಮಸ್ಕಾರ

6 comments:

  1. ನನ್ನ ಬ್ಲಾಗ್ ನ ಮಾರ್ಕೇಟಿಂಗ್ ಮಾಡ್ತೀರೇನ್ರೀ?
    ನೀವು ಔಷದಗಳನ್ನು ಮಾರ್ಕೇಟ್ ಮಾಡುವವರಲ್ಲವೇ?
    ನನ್ನ ಬ್ಲಾಗ್ ಯಾರಿಗೆ ಮತ್ತು ಹೇಗೆ ಔಷದಿಯಾಗುತ್ತೆ ಸಾರ್?
    ಆದ್ರೆ ಮಾತ್ರ..
    ನಾನು ಬರೆದದ್ದು ಸಾರ್ಥಕ.
    ಧನ್ಯವಾದಗಳು ಸಾರ್.
    ಪ್ರೀತಿಯಿಂದ,
    ತಮ್ಮ,ವೆಂಕಟ್.

    ReplyDelete
  2. ನಿಮ್ಮ ಸ್ವಗತ ಇಷ್ಟವಾಯ್ತು...ಇದು ಹೀಗೇ ಮುಂದುವರಿಯಲಿ.

    ReplyDelete
  3. ವೆ೦ಕಟಕ್ರಿಷ್ಣ್ರೆರೆ ,ಸ೦ತೋಷವನ್ನು ಒ೦ದಷ್ಟು ಜನರಿಗೆ ಹ೦ಚೋಣ.ಇದೇ ಔಷಧಿಯಾಗಿ ಕೆಲಸ ಮಾಡಿದರೆ, ನಾನು ಔಷಧಿ ಹ೦ಚುವ ಒತ್ತಡ ಕಡಿಮೆಯಾಗುವುದೋ ಎನೋ..?
    ನಾರಾಯಣ ಭಟ್ಟ್ರೆ,THANKS

    ReplyDelete
  4. ತೆರೆದ ಹೃದಯದ ಮಾತು ನಿಮ್ಮದು...ಮುಜುಗರವಿಲ್ಲದೆ ಮನಸ್ಸು ಬಿಚ್ಚಿ ಮಾತನಾಡಿದ್ದೀರಿ...ಒಳ್ಳೆಯದಾಗಲಿ. ಧನ್ಯವಾದಗಳು.

    ReplyDelete
  5. i know u well...but dont know side is very interesting also...keep it up..
    chandrashekhar yethadka

    ReplyDelete
  6. ಸುಬ್ರಹ್ಮಣ್ಯ ಭಟ್ ಮತ್ತು ಚ೦ದ್ರಶೇಖರ್ ಏತಡ್ಕ ಅವರಿಗೆ ಧನ್ಯವಾದಗಳು

    ReplyDelete