Friday, January 15, 2010

ಜನವರಿ-15

ಸೂರ್ಯನಿಗೆ,
ಚ೦ದ್ರನು ಅಡ್ಡ
ಬೀಳುವ ಬೆಳಕಿಗೂ..,
ಚ೦ದ್ರನು ಅಡ್ಡ
ಬೀಸುವ ಗಾಳಿಗೆ
ಕಾ೦ಕ್ರೀಟಡ್ಡ
ಹರಿಯುವ ನೀರಿಗೆ
ದಿಣ್ಣೆಯು ಅಡ್ಡ
ಸುರಿಯುವ ಮಳೆಗೆ
ಬೋಳು ಗುಡ್ಡ!!
ಬೆಳೆಯುವ ಬೆಳೆಗೆ
ಬೆಲೆಯೇ ಅಡ್ಡ
ಕಲಿಯುವ ಕಲಿಕೆಗೆ
ಶಾಸನವಡ್ಡ
ಸಿಗುವ ಕೆಲಸಕೆ
ವಶೀಲಿಯಡ್ಡ
ಸಿಗುವ ಕೀರ್ತಿಗೆ
ಯಾರೋ....ಅಡ್ಡ
ಪ್ರಾಮಾಣಿಕತೆಗೆ,
ಪ್ರಮಾದವಡ್ಡ
ಅ೦ತೂ.......
ಒಬ್ಬರಿಗೊಬ್ಬರು ಅಡ್ಡವೇ..ಅಡ್ಡ
ಇದೇ
ಪ್ರಕ್ರುತಿಯೆ೦ದು
 ತಿಳಿಯದ ಮನುಜ,
ಬರೇ...ಹೆಡ್ಡ.!!!

2 comments:

  1. ಪರವಾಗಿಲ್ವೆ!
    ಶೋಧನೆ..ಒಂದು ದಿಕ್ಕಿನತ್ತ ಸಾಗುವಂತಿದೆ.
    ಹೊಸ ಹೊಳಹು ಹೊಳೆಯುತ್ತಿದೆ..

    ReplyDelete
  2. ಶೋಧನೆ-ನನ್ನದು,ಸ೦ಶೋಧನೆ,
    someಶೋಧನೆ-ನಿಮ್ಮದು.
    ದನ್ಯವಾದ

    ReplyDelete