ಜನವರಿ31, ಭಾನುವಾರ
ಒ೦ದು ಒಳ್ಳೆಯ ಕಾರ್ಯಕ್ರಮ ನೋಡಿ ಇದ್ದು, ಅನುಭವಿಸಿ ಬ೦ದ ತ್ರುಪ್ತಿ ಇದೆ
ನಮ್ಮ ಪುತ್ತೂರಿನ ವಿವೇಕಾನ೦ದ ಕಾಲೇಜಿನಲ್ಲಿ "ಜೋಗಿ ಸಾಹಿತ್ಯ ಚಿ೦ತನ ಮತ್ತು ಜೋಗಿಯವರಿಗೆ ಸನ್ಮಾನ" ಕಾರ್ಯಕ್ರಮ ಜೋಗಿ ಗೆಳೆಯರು,ಉಪ್ಪಿನ೦ಗಡಿ,ಕನ್ನದ ಸ೦ಘ ವಿವೇಕಾನ೦ದ ಕಾಲೇಜು ಪುತ್ತೂರು ಜ೦ಟಿಯಾಗಿ ಹಮ್ಮಿಕೊ೦ಡಿತ್ತು.ಶ್ರೀ ಸುಬ್ರಾಯ ಚೊಕ್ಕಾಡಿಯವರ ಅದ್ಯಕ್ಷತೆ,ಬಿ.ಆರ್.ಲಕ್ಷಣರಾಯರ ಉಪಸ್ತಿತಿ,ಅಜಕ್ಕಳ ಗಿರೀಶ ಭಟ್ಟರ ಮತ್ತುಶ್ರೀಮತಿ ಸಿ೦ಧುಶ್ರೀ ಭಟ್ ಇವರ ಪ್ರಬ೦ಧ ಮ೦ಡನೆಗಳು ಕಾರ್ಯಕ್ರಮದ ಅ೦ದವನ್ನು ಹೆಚ್ಚಿಸಿದವು.
ಹುಟ್ಟೂರಿನಲ್ಲಿ ಒಬ್ಬ ಕ್ರಿಯಾಶೀಲ ಲೇಖಕನಿಗೆ ಸನ್ಮಾನ ಮಾಡುತ್ತಿರುವುದು ನಮಗೆ ಹೆಮ್ಮೆಯ ಮತ್ತು ಸ೦ತಸದ ವಿಚಾರ.ನಾನು ಹೋದದ್ದು ಈ ಕಾರಣಕ್ಕಾಗಿಯೇ.
ಯಾಕೆ೦ದರೆ ಜೋಗಿಯವರು ನಮ್ಮೂರಿನವರು.ನಮ್ಮ ಅಭಿಮಾನದ ಸ೦ಕೇತ.ಜೊತೆಗೆ ನಾನು ವಿವೇಕಾನ೦ದ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಆ ಕಾಲದಲ್ಲಿ ಕಾಲೇಜಿನ ಕನ್ನಡ ಸ೦ಘದ ಕಾರ್ಯದರ್ಶಿಯಾಗಿದ್ದವ.
ಅಪರಾಹ್ನದ ಜೋಗಿಯವರ ಮತ್ತು ಲಕ್ಷಣರಾಯರ ಜೊತೆ ಸ೦ವಾದ ಆತ್ಮೀಯವಾಗಿತ್ತು. ಜೋಗಿಯವರ ಕಪಟವಿಲ್ಲದ,ನಾಟಕೀಯತೆಯಿಲ್ಲದ ಮಾತು ಹೆಚ್ಚು ಆತ್ಮೀಯವಾಗುತ್ತದೆ.
ಲಕ್ಷಣರಾಯರ ಕವನಗಳು ಕೇಳುಗರ ಮನ ಮುಟ್ಟುವ೦ತಿತ್ತು.
ಜಿಲ್ಲಾ ಉಸ್ತುವಾರಿ ಮ೦ತ್ರಿಗಳಾದ ಕ್ರಿಷ್ಣ ಪಾಲೆಮಾರ್ ಮತ್ತು ಸ೦ಸದರಾದ ನಳಿನ್ ಕುಮಾರ್ ಸನ್ಮಾನಕ್ಕಾದರೂ ಇದ್ದುದು ಸಮಾದಾನಕರ.
ಇದಕ್ಕಾಗಿ ಮುತುವರ್ಜಿವಹಿಸಿದ ಕು೦ಟಿನಿ ಮಿತ್ರರಿಗೆ,ಶ್ರೀಧರ್ ರವರಿಗೆ,ಅಭಿನ೦ದನೆಗಳು.
ಭಾಗವಹಿಸಿ ನಮ್ಮೊಡನಿದ್ದ ಜೋಗಿಯವರಿಗೆ ಅಭಿವ೦ದನೆಗಳು.GOOD LUCK ! .
ಇದಿಷ್ಟು ತಾಜಾ ಸುದ್ದಿ !
ಸಿಗೋಣ
ನಮಸ್ಕಾರ
ವ್ಯಾವಹಾರಿಕ ಬದುಕಿನ ಏಕತಾನತೆಯನ್ನು ಒಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಆಗಾಗ ತೊಡಗಿಕೊಂಡರೆ ನಮ್ಮನ್ನು ನಾವೇ Refresh ಮಾಡಿಕೊಡಂತೆ
ReplyDeleteಅಲ್ಲವೇ?
ಒಳ್ಳೆಯ change.
ಸಾಹಿತಿಗಳ ಜೊತೆ ಕಾಲ ಕಳೆದಿದ್ದೀರಿ...ಆ ಸಮಯಗಳು ಖಂಡಿತ ರಸಾನುಭವವನ್ನು ಕೊಟ್ಟಿರುತ್ತದೆ.. ಹಂಚಿಕೊಂದಿದ್ದಕ್ಕೆ ಧನ್ಯವಾದಗಳು
ReplyDeleteಕಾರ್ಯಕ್ರಮದ ವಿವರಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
ReplyDelete