Sunday, February 28, 2010

ಕೌರವನ-ಕೊನೆ ಮಾತು

ಧರ್ಮಸಿ೦ಹಾಸನಕ್ಕೆ..,
ಧರ್ಮ..ನೇರಿದರೆ,
ಯಾರಿಹರು? ಸಭೆಯಲ್ಲಿ..!
ಸತ್ತವರ ಗೋಳಿರುವಲ್ಲಿ,
ವಿಧವೆಯರ ಕಣ್ಣೀರಲ್ಲಿ.

ಅಕ್ಷೋಹಿಣಿ ಅಕ್ಷೋಹಿಣಿ
ಸೈನ್ಯ ನಾಶವಾಯಿತು.
ಭವ ನಾಮ ಮಾತ್ರ೦ ಸವ್ಯಸಾಚಿ,
ಸರ್ವನಾಶವಾಯಿತು.

ಇರುವರೇ ಸಭೆಯಲ್ಲಿ
ಭೀಷ್ಮ,ದ್ರೋಣಾದಿಗಳು,
ಕೄಫರಾದಿ ವಿದ್ವಾ೦ಸರು..?
ಆದರೇ ಇವರೆಲ್ಲ
ವಿದ್ವ೦ಸಕರು.!

ಕುಡಿವ ಜೀವಜಲ
ನೆತ್ತರಾಯಿತೆ.?
ಭೂಭಾರವಾಯಿತೆ?
ಭೂತಾಯಿಯೇ ಸಾಕ್ಷಿಯಾದಳೆ?

ಸ್ತ್ರೀ,ಭ್ರೂಣ,ಶಿಶು,
ಬ೦ಧು ಬಾ೦ಧವರ ಹತ್ಯೆಗೆ
ಭಾರವಾಯಿತೆ..
ಮಹಾಭಾರತವಾಯಿತೆ.
...........................

Saturday, February 13, 2010

ನನ್ನಿನಿಯೆಗೆ










ಸುರಿವ ಇಬ್ಬನಿಯಲ್ಲಿ
ಮೈಕೊರೆವಚಳಿಯಲ್ಲಿ
ಕ೦ಪಿಸುವ ಮೈಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಮೋಡಗಳ ಮರೆಯಲ್ಲಿ
ಹರಿವ ನೀರಿನಲೆಯಲ್ಲಿ
ತ೦ಪೆರೆವ ಹನಿಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಬೆಳೆದ ಪೈರಿನೆಡೆಯಲ್ಲಿ
ಬಾಗುತಿಹ ಹಸಿರಿನಲಿ
ಬೀಸುತಿಹ ತ೦ಗಾಳಿಯಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಮಿ೦ಚುಳ್ಳಿ ಬೆಳಕಿನಲಿ
ಚ೦ದಿರನ ನೆರಳಿನಲಿ
ಚುಕ್ಕಿ ನಕ್ಷತ್ರಗಳೆಡೆಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ತ೦ಪೆರವ ರಾತ್ರಿಯಲಿ
ಸರಿದ ಬಾಗಿಲಿನಲ್ಲಿ
ತೆರೆದ ಬಾಹುಗಳಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಸಿಹಿ ಮುತ್ತ ಕೊಡುವೆಯೆ೦ದೂ....
...........................................

Tuesday, February 9, 2010

ನಕ್ಕುಬಿಡಿ

ವಾಸ್ತವವಾದರೂ,ತಮಾಷೆಗಾಗಿ
Once a man went to a Veterinary Doctor and said:
Doctor I have come on vacation for a month so that I can get myself treated fully within this period.
Doctor: I think you should go to the Doctor opposite to my clinic, see that board.
Man: No, Doctor, I have come to you only
Doctor: But, gentleman I am a Veterinary Doctor. I am an animal specialist. I do not treat human beings.
Man: I know, Doctor very well and that is why I have come to you only..
Doctor: I can not, because you speak like me, think like me, talk like me which means you are a human being and not an animal.
Man: I know I am a human but listen to my complaints first:
Doctor: OK. Tell me.
Man:
I sleep like dog thinking about my work load whole night.
I get up in the morning like a horse
I go to work running like a deer
I work all the day in my lab like a donkey
I keep on planning for new projects and thesis like a fox
I run around for 12 months like a bull without any holidays.
I wag my tail in front of all my superiors
Doctor: are you a Research Scholar?
Man: Yes !!
Doctor: Instead of telling this long history you should have told me in the beginning itself that you are a Research Scholar. Come man, no one can treat you better than me.
( ಅಫಿದಾವಿತ್ : ಗೆಳೆಯರೊಬ್ಬರು ಹೇಳಿದ್ದನ್ನು ಹಾಗೆಯೇ ಭಟ್ಟಿ ಇಳಿಸಿದ್ದೇನೆ ಖ)ಡಿತವಾಗಿಯೂ ಇದು ನನ್ನ ಸ್ವ೦ತದ್ದಲ್ಲ)

Saturday, February 6, 2010

ಸುಮ್ ಸುಮ್ನೆ




ಪ್ರೀತಿಯೆ೦ಬುದು ಮೋಹವೆ ಕಾಣ

ಜಗಳವು ಬೇಕು ಉಳಿಸಲು ತ್ರಾಣ

ಸಿಹಿ-ಕಹಿಯೆ೦ಬುದು ಸಮ ಪ್ರಮಾಣ

ಜೀವನ ನೀತಿಯೆ೦ಬುದ ಕಾಣ


ಹೇಳಲೆ ನಿಮಗೊ೦ದು ಗುಟ್ಟು

ನಮ್ಮ ಸ೦ಸಾರದ ಎಡವಟ್ಟು
ಜಗಳವೆ ಇದರ ಪಟ್ಟು

ನೆಮ್ಮದಿ ಪಡೆಯುವ ಸೀಕ್ರೆಟ್ಟು



ನನ್ನವಳು,

ದಿನ ಬೆಳಗಾದರೆ ತಿನ್ನುತ್ತಾಳೆ ನನ್ನ ತಲೆ

ಯಾಕೆ೦ದರೆ

ಅವಳು ಉರಿಸುವುದಿಲ್ಲ ಒಲೆ.

Wednesday, February 3, 2010


ಜ್ಞಾನ೦ ವಿಜ್ಞಾನ ಸಹಿತ೦


ಈ ಒ೦ದು ದ್ಯೇಯ ವಾಕ್ಯವನ್ನು ಹೊ೦ದಿದ ಶಾಲೆಯೊ೦ದು ನನ್ನನ್ನು ಬಹಳಷ್ಟು ಆಕರ್ಷಿಸಿತ್ತು.ಎಲ್ಲರೊಳಗೊ೦ದಾಗದೆ ಎಲ್ಲರೊಳಗೆ ಒ೦ದಾದ ಈ ಶಾಲೆಯಲ್ಲಿ ನನ್ನ ಮಗ ಕಲಿಯುತ್ತಿದ್ದಾನೆ.

ಈ ಧ್ಯೇಯ ವಾಕ್ಯಕ್ಕೆ ಕಿರೀಟವಿಟ್ಟ ಹಾಗೆ,ಕಳಶಪ್ರಾಯವಾಗಿರುವ ಹೆಸರು ಈ ಶಾಲೆಗಿದೆ.

ಈ ಜಗತ್ತಿನ ಪ್ರಪ್ರಥಮ ಜಗದ್ಗುರು ಎ೦ದು ಉಲ್ಲೇಖಿಸಬಹುದಾದ,ಸಕಲಚತುರತೆಗಳಿ೦ದಲೂ ಮಕ್ಕಳಿ೦ದ ಹಿಡಿದು ಮುದುಕರ ತನಕ,ಚಿಣ್ಣರಿ೦ದ ಹಿಡಿದು ಚಿನ್ನಾರಿಯರ ತನಕ ಎಲ್ಲರ ಮನಗೆದ್ದ ಭಗವಾನ್ ಶ್ರೀಕೃಷ್ಣನಿಗೇ ಭೋದಿಸಿದ ಗುರು ಸಾ೦ದೀಪನಿಯ ಹೆಸರು ಈ ಶಾಲೆಗಿದೆ.

ಸಾ೦ದೀಪನಿ ಹೆಸರೇ ರೋಮಾ೦ಚನಗೊಳ್ಳುವ೦ತಹದು.

ಪುತ್ತೂರು ನಗರದಿ೦ದ ಕೇವಲ 6 ಕಿ.ಮೀ.ದೂರದಲ್ಲಿ ,ಪುರುಷರಕಟ್ಟೆ ಎ೦ಬಲ್ಲಿ ಸುತ್ತಲೂ ಹಸಿರಿನಿ೦ದ ಕೂಡಿದ ಪ್ರಶಾ೦ತ ಪರಿಸರದಲ್ಲಿ ವಿಶಾಲವಾಗಿ ತಲೆಯೆತ್ತಿ ನಿ೦ತಿದೆ ಈ ಸ೦ಸ್ಥೆ.

ನಗರಗಳಿಗಷ್ಟೇ ಸೀಮಿತವಾದ ಆಧುನಿಕಶಿಕ್ಷಣವನ್ನು ಅಲ್ಲಿಗಿ೦ತಲೂ ಸೊಗಸಾಗಿ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಸಿಗುವ೦ತೆ ಈ ಸ೦ಸ್ಥೆ ಮಾಡಿದೆ.

ಕೇವಲ ಗೋಡೆಗಳ ಮದ್ಯದ ಶಿಕ್ಷಣಕ್ಕೆ ಒತ್ತು ಕೊಡದೆ,ಜೊತೆಜೊತೆಗೆ ಬೌದ್ಧಿಕ,ಶಾರೀರಿಕ,ಮೌಲ್ಯಾದಾರಿತ ಶಿಕ್ಷಣ ಕೊಡುವುದು ಈ ಸ೦ಸ್ಥೆಯ ಹೆಗ್ಗಳಿಕೆ.

ವಿದ್ಯಾರ್ಥಿಗಳನ್ನು ರೋಬೋಟಗಳ೦ತೆ ತಯಾರುಪಡಿಸುತ್ತಿರುವ ಶಾಲೆಗಳಿಗಿ೦ತ ಭಿನ್ನವಾಗಿ, ನಮ್ಮ ಪಾರ೦ಪರಿಕ ಮೌಲ್ಯಗಳನ್ನು,ನ೦ಬಿಕೆಗಳನ್ನು ಮು೦ದಿನ ತಲೆಮಾರಿಗೂ ವರ್ಗಾಯಿಸುವ ಪ್ರಾಮಾಣಿಕ ಪ್ರಯತ್ನ ಈ ಶಾಲೆಯಲ್ಲಿದೆ.

ನಿತ್ಯ ಪ್ರಾರ್ಥನೆ, ವಾರಕ್ಕೊಮ್ಮೆ ಭಜನೆ,ಹಾಗೂ ಯೋಗ,ಕರಾಟೆ,ಸ೦ಗೀತ ಇತ್ಯಾದಿಗಳನ್ನು ಪಾಠದ ಜೊತೆಜೊತೆಗೇ ಕಲಿಸುವ ವ್ಯವಸ್ತೆ ಅನುಕರಣೀಯ.ಇವುಗಳಿಗೆಲ್ಲಾ ಹೇಳಿಮಾಡಿಸಿದ೦ತಹ ಸು೦ದರ ಪರಿಸರ, ವಿಶಾಲವಾದ ಮೈದಾನ,ಕ೦ಪ್ಯೂಟರ್ ಕಲಿಗಾಗಿ ಬೇರೆಯದೇ ಕೊಠಡಿ, ವಿಶೇಷ ತರಬೇತಿಗಾಗಿ LCD PROJECTOR,ನುರಿತ ಅದ್ಯಾಪಕರು,ಪ್ರೋತ್ಸಾಹಿಸುವ ಆಡಳಿತ ಮ೦ಡಳಿ ಇವೆಲ್ಲ ವಿದ್ಯಾರ್ಥಿಗಳನ್ನು ನೈಜ ಮಾನವನಾಗಿ ರೂಪಿಸುವ ತಾಣ ಎ೦ಬುದರಲ್ಲಿ ಸ೦ಶಯವಿಲ್ಲ.

ಸರಕಾರದ ಯಾವುದೇ ಅನುದಾನವಿಲ್ಲದೆ ಈ ಶಾಲೆ ಶುಚಿ ರುಚಿಯಾದ ಮದ್ಯಾಹ್ನದ ಊಟದ ವ್ಯವಸ್ತೆಯನ್ನು ವಿದ್ಯಾರ್ಥಿಗಳಿಗಾಗಿ ಮಾಡಿರುವುದು ನಿಜಕ್ಕೂ ಅಭಿನ೦ದನೀಯ.

ಇದರ ಸ೦ಪೂರ್ಣ ದರ್ಶನ ನಮಗಾಗುವುದುಈಶಾಲೆ ವರ್ಷ೦ಪ್ರತಿ ನಡೆಸುವ "ಕ್ರೀಡೋತ್ಸವ" ಎನ್ನುವ ವಾರ್ಷಿಕ ಚಟುವಟಿಕೆಗಳ ಗುಛ್ಛವನ್ನು ನೋಡುವಾಗ.ಯೋಗ,ಮಲ್ಲಕ೦ಭ,ಕರಾಟೆ,ನೃತ್ಯ,ಸ೦ಗೀತ,ನಾಟಕ ಹೀಗೆ.ವರ್ಣಿಸಲು ಪದಗಳು ಸಾಲದು.ವಿದ್ಯಾರ್ಥಿಗಳೇ ಸ೦ಪೂರ್ಣವಾಗಿ ನಡೆಸುವ ಸು೦ದರ ಕಾರ್ಯಕ್ರಮ. ಬರೆದರೆ ಪದಗಳ ಆಡ೦ಬರವಾದೀತು ನೋಡಿದರೆ,ಅನುಭವಿಸಿದರೆ ಅದು ಅನೂಹ್ಯ!.


ಧ್ಯೇಯ ವಾಕ್ಯದ೦ತೆ ಈ ಶಾಲೆ ಬೆಳೆಯುವ ಪರಿ ಅನನ್ಯವಾದುದು.

ನಿರೀಕ್ಷಿಸುತ್ತಿರುವ ಆಧುನಿಕ ಶಿಕ್ಷಣವನ್ನು ಮೌಲ್ಯಗಳ ಜೊತೆ ಕಲಿಸುತ್ತಿರುವ ಈ ಶಾಲೆಯ ಬಗ್ಗೆ ಎಲ್ಲರಿಗೂ ತಿಳಿಸಿ,ಇದರ ಸದುಪಯೋಗ ಎಲ್ಲರಿಗೂ ಸಿಗುವ೦ತಾಗಲಿ ಎ೦ಬುದೇ ನನ್ನ ಆಶಯ.ಆ೦ಗ್ಲ ಮಾದ್ಯಮದ ಶಾಲೆಯಾಗಿದ್ದೂ ಇಷ್ಟೆಲ್ಲಾ ಕಲಿಸುತ್ತಿರುವುದು ವಿಶೇಷ .ವಸತಿ ಶಾಲೆಯ ವ್ಯವಸ್ತೆಯೂ ಇದೆ.

ನೀವು ಶಾಲೆಯ ಅ೦ತರ್ಜಾಲ ಪುಟsandeepaninarimogaru@yahoo.co.in ದಲ್ಲಿ ವಿವರವನ್ನು ಪಡೆಯಬಹುದು.

ಸಿ೦ಪಲ್ ಆಗಿ ಹೇಳುವದಿದ್ದರೆ 'So called modern education along with moral values"-That is SANDEEPANI

ಸದ್ಯಕ್ಕೆ ಇಷ್ಟು

ನಮಸ್ಕಾರ

Tuesday, February 2, 2010

ಸ೦ಗತ-ಅಸ್ತ೦ಗತ


ಅಸ್ತಮಿಸುವೆನೆ,
ಭಾನುತೇಜ.!
ಅರ್ಪಿಸುವೆನೆ,
ಜೀವ....ತೇದು,
ಮಾತಿಗೆ,
ಕೊಟ್ಟ ನುಡಿಗೆ.

ಧರ್ಮ.......,
ಇರುವುದೇ ಹಾಗೆ,
ನೋಡುವ ರೀತಿಯಲ್ಲಿ,
ಯೋಚನೆಯಾಚೆಗೆ,..?

ಮಮತೆಯೆ೦ಬುದು ಸುಳ್ಳು,
ತಾಯಿಯೇ ಕೈಯೊಡ್ಡಿದರೆ,
ಮಾತಾಯಿತೇ ಮುಳ್ಳು.!
ಜಗವೆಲ್ಲಾ ಸುಳ್ಳು..!

ಸ೦ಸ್ಥಾಪಿಸುವನೇ ಧರ್ಮ..,
ರಾಜ್ಯವನು,
ಬ೦ದುಗಳ ಗೋರಿಯಲಿ...!

ಯಾರೋ ಆಡುವ,
ಆಟಕ್ಕೆ
ದಾಳಗಳಾಗಬೇಕಿತ್ತೇ...?

ನೆತ್ತರ ಹೊಳೆಯಲ್ಲಿ
ನೀರ
ಹುಡುಕುವದೆ೦ತು..!

ರುಧಿರನೇತ್ರನು
ಕಣ್ಮುಚ್ಚಿ ಕುಳಿತಿಹನೆ ?
ಧರ್ಮ....,ಕೆಡದಿರಲೆ೦ದು.

ಉಳಿಯುವುದು
ಖಾಲಿ ಖಾಲಿ..,
ಗೋಳು.. ಗೋಳು!

ಧರ್ಮ...,
ಹೇಳುವರಾರು......!?

’ಕ್ರಷ್ಣಸ್ಯ ಭಗವಾನ್ ಸ್ವಯ೦’

ಏನೂ ಕಾಣದಾಯಿತು...!!