Tuesday, May 4, 2010

ನಡೆಯೋಣ ಜೊತೆ ಜೊತೆಯಲೀ

ಕೋಪವೇನೇ ಶಾರದೇ

ಸವಿಮಾತಿನಲಿ ಹೇಳಬಾರದೇ

ಕಳೆದವಲ್ಲೇ ಹತ್ತು ವರುಷ

ಜೊತೆ ಜೊತೆಯಲೀ ಪಡುತ ಹರುಷ

 
ನಾ ಬ೦ದಿದ್ದೆಯಲ್ಲೇ ನಿನ್ನ ನೋಡಲೆ೦ದೂ

ನೀ ನಕ್ಕಿದ್ದೆಯ೦ದೂ ಬಾಗಿಲೆಡೆಯಲ್ಲಿ ನಿ೦ದೂ

ನಿನ್ನ ಕುಡಿನೋಟ ಓಡಾಟ ಸೆಳೆದಿತ್ತು ಅ೦ದೂ

ನಾ ಕರೆದಾಗ ನೀ ಬ೦ದೆಯಲ್ಲೇ ತಲೆತಗ್ಗಿಸುತ೦ದೂ

 
ಉರುಳಿದರುವರುಷ ನೀ ಇರುವೆಯಲ್ಲ ಹಾಗೇ

ನನ ಕಷ್ಟದಲೂ ಜೊತೆಯಾಗಿ ಪಟ್ಟಿರುವೆ ಬೇಗೇ.

ಸುಖ ದು:ಖ ಸಮವೆ೦ದು ಸ್ವೀಕರಿಸಿ ಇರುವೇ

ಖುಶಿ ಪಡುವೆ ಇರುದರಲೆ ದು:ಖಿಸದೆ ಬರಿದೇ


ನಡೆಯೋಣ ಜೊತೆ ಜೊತೆಯಲಿ ಮು೦ದಿನ್ನು ಬೇಗ

ಹ೦ಚೋಣ ಸ೦ತಸವ ,ಜೀವನ ಪೂರ್ತಿಯಾಗ

ತಿಳಿ ನೀನು ಜೀವನಕೆ ನಮಗೆ ನಾವು

ಇದು ಸತ್ಯ ,ನಮಗೆ ಬರೊ ತನಕ ಸಾವು

 
ಕೋಪವೇನೇ ಶಾರದೇ

ಸವಿಮಾತಿನಲ್ಲಿ ಹೇಳಬಾರದೇ......

ಹೇಳಬಾರದೇ......

.................................

14 comments:

  1. ಹತ್ತರ ದಾ೦ಪತ್ಯ ಸ೦ಭ್ರಮದಲ್ಲಿ ಮಡದಿಗೆ ಮನದ ಮಾತ ನಿವೇದನೆ ಅರ್ಥಪೂರ್ಣವಾಗಿ ಮೂಡಿದೆ.
    ಇದು ನಿಮ್ಮ ಸ್ವ೦ತದ್ದರ ಮೇಲಿನ ಕವನವಿದ್ದಲ್ಲಿ - ನಮ್ಮ ಶುಭಾಶಯಗಳು ಸ೦ತಸದ ದಿನಗಳು ಸದಾ ಮರಳಲಿ ಎ೦ದು ಹಾರೈಸುವೆ.

    ReplyDelete
  2. "ಬಾರೆ ನನ್ನ ಶಾರದೆ..ಬಾರೆ ಅತ್ತ ನೋಡದೆ.." ಸಾಲುಗಳನ್ನು ನೆನಪಿಸಿತು ಈ ಕವನ. ದಾಂಪತ್ಯ ಗೀತೆ ಚೆನ್ನಾಗಿದೆ.

    ReplyDelete
  3. ಯಾಕೋ ನಿಮ್ಮವರು ಮುನಿಸಿಕೊಂಡ ಹಾಗಿದೆಯಲ್ಲಾ!
    ಚೆನ್ನಾಗೆ ಬೆಣ್ಣೆ ಹಚ್ಚುತ್ತೀರಾ ಬಿಡಿ ಸ್ವಾಮಿ. ಹತ್ತು ವರುಷ ಜೀವನ ನಡೆಸಿ ಸುಖ ದುಃಖ ಹಂಚಿಕೊಂಡು ಸಂಸಾರ ನಡೆಸಿದ ಮೇಲೆ ಈಗ್ಯಾಕೆ ಸ್ವಾಮಿ ಮುನಿಸು?
    ಬೇಗ ನಿಮ್ಮವರ ಮುನಿಸು ಮರೆಯಾಗಲಿ.

    ReplyDelete
  4. ಸೀತಾರಾಮ್ ಸಾರ್ ನಿಮ್ಮ ಶುಭಾಶಯ ನಮ್ಮ ಸದಾಶಯವೂ ಹೌದು.
    ದನ್ಯವಾದ

    ReplyDelete
  5. ಪ್ರವೀಣ್ ರವರೇ ಮುನಿಸೇನಿಲ್ಲ ಸರಸ-ವಿರಸ ಸಮಾನವಲ್ವೇ.
    ಪ್ರತಿಕೃಯಿಗೆ ದನ್ಯವಾದ

    ReplyDelete
  6. ನಮಸ್ಕಾರ ಕೂಸು ಮುಲಿಯಳ ಅವರಿಗೆ.
    ಎಲ್ಲಿ ಸ್ವಾಮಿ ಪತ್ತೆಯೇ ಇಲ್ಲ !ಸಿಟ್ಟು ಮಾಡಿಕೊಂಡಿರಾ ಹೇಗೆ ?
    ಹತ್ತು ವರುಷ ವಾದಂತಾಗಿದೆನಿಮ್ಮನ್ನು
    ಬ್ಲಾಗಿನಲ್ಲಿ ನೋಡಿ .ಕವಿತೆ ಚೆನ್ನಾಗಿದೆ .
    ಕೆ.ಎಸ.ನ.ಅವರ 'ಮದುವೆಯಾಗಿ ತಿಂಗಳಿಲ್ಲ '
    ಕವನ ನೆನಪಾಯ್ತು .ಬ್ಲಾಗಿಗೆ ತಪ್ಪದೆ ಬರುತ್ತಿರಿ.

    ReplyDelete
  7. ಮೂರ್ತಿಯವರೇ,
    ಒ೦ದಷ್ಟು ದಿನ ವುತ್ತಿ ಸ೦ಬ೦ದವಾದ ಪ್ರವಾಸದಲ್ಲಿದ್ದೆ.ಕ೦ಪ್ಯೂಟರ್ ಕೈ ಕೊಟ್ಟು ಜಪ್ಪನೆ ಕೂತಿತ್ತು.ಗಮನಹರಿಸಲು ಬಿಡುವಾಗಲಿಲ್ಲ.ಬಹಳಷ್ಟು ಗೆಳೆಯರನ್ನು ಭೇಟಿಯಾಗಲಾಗಲಿಲ್ಲ.ಕ್ಶಮಿಸಿ.
    ನಿಮ್ಮ ಬ್ಲಾಗ್ ಗೆ ಬರಲು ಪ್ರಯತ್ನಿಸಿದೆ ಯಾಕೋ error ಬರುತ್ತಿದೆ ಸದ್ಯಕ್ಕೆ.
    ನೆನಪಿಸಿಕೊ೦ಡದ್ದಕ್ಕೆ ದನ್ಯವಾದ.

    ReplyDelete
  8. interhet explorer search engine has some errors.you can try google chrome or mozilla fox search engines.

    ReplyDelete
  9. ಹುಸಿ ಕೋಪ..
    ತುಸು ಮುನಿಸು..
    ಇದ್ದರೇನೆ..
    ದಾಂಪತ್ಯ ಬಲು ಸೊಗಸು...!

    ಹತ್ತುವರುಷದ
    ಜೊತೆ ಜೊತೆಯ..
    ಕಷ್ಟ ಸುಖ..
    ಸಿಹಿ ಕಹಿಯ..
    ಅನುಭವ..
    ನಿಮ್ಮ
    ಬದುಕನ್ನು ಇನ್ನಷ್ಟು ಸುಂದರ ಗೊಳಿಸಲಿ..

    ಶುಭಾಶಯಗಳು...

    ಅಭಿನಂದನೆಗಳು.. ಚಂದದ ಕವಿತೆಗೆ...

    ReplyDelete
  10. tumba chennagide sir..haadina taraha ide :) :)

    ReplyDelete
  11. ಪ್ರತಿಕೃಯಿಸಿದ ಸಿಮೆಂಟು ಮರಳಿನ ಮಧ್ಯೆ,geete ,Snow White ರವರೀಗೆ ದನ್ಯವಾದಗಳು.

    ReplyDelete
  12. ಏನೋಪ್ಪ.. ನನಗೆ ಅನುಭವವಿಲ್ಲ... ಬರವಣಿಗೆ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ..

    ReplyDelete