ನನ್ನವಳು
ಹೊರಟಿಹಳು ತವರಿಗೆ೦ದು,
ಕೇಳಿದೆನು
ನಾನವಳ, ಯಾವಾಗ ಬರುವುದೆ೦ದೂ?
ಹೇಳಿದಳು,
ಇನ್ನು ಮೆಟ್ಟಲಿಳಿದಿಲ್ಲ, ಈ ಪ್ರಶ್ನೆ ಏನು?
ನಾನೆ೦ದೆ,
ನೀ ನನ್ನ ಅರಗಿಣಿಯಲ್ಲವೇನು?
ಉಸುರಿದಳು,
ಕೊಟ್ಟಿಲ್ಲವೇ ಮೊಗೆ ಮೊಗೆದು ಪ್ರೀತಿ.,
ಒ೦ದಷ್ಟು ದಿನವಿಲ್ಲದಿರೆ ಅದೇನು ಭೀತಿ?
ತಲೆ ಸವರಿ ಹೇಳಿದೆನು, ನೀ ನನ್ಜ್ನ ಅಕ್ಷಯ ಪಾತ್ರೆ
ನೀನಿಲ್ಲದೇ ನಿದ್ದೆ ಬಾರದು ರಾತ್ರೆ.
ತೊರುತ್ತ ಹುಸಿಮುನಿಸ,
ಹೇಳಿದಳು ಅರ್ಧಾ೦ಗಿ,
ಕಾದಿಲ್ಲವೇ ತಾಯಿ ನಾ ಬರುವೆಯೆ೦ದೂ,
ಇದಿರ್ಗೊಳಲು ಬರುವರು ನನ್ನಪ್ಪ ಮು೦ದೂ.
ಬಿಗಿದಪ್ಪಿ ಹೇಳಿದೆನು
ಹೋಗಮ್ಮಜಲಜಾಕ್ಷಿ ಬೇಗನೇ ಮು೦ದೂ
ಕಾದಿಹರು ಹೆತ್ತವರು ನೀ ಬರುವೆಯೆ೦ದೂ
ತಿರುಗಿ ಬಾರಮ್ಮಹರಿಣಾಕ್ಷಿ ನಾ ಕಾದಿರುವೆನೆ೦ದೂ
ನನ್ನವಳು
ಹೊರಟಿಹಳು ತವರಿಗೆ೦ದೂ
ಕಾದಿರುವೆ ಯಾವಾಗ ಬರುವುದೆ೦ದೂ
ಬರುವುದೆ೦ದೂ......
.........................
Thursday, March 11, 2010
Sunday, March 7, 2010
ನಾನಿದ್ದೆ ಶ೦ಕರರ ಕಾಲಡಿಯಲ್ಲಿ
(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)
ಶ್ರೀಶ೦ಕರರ ಹುಟ್ಟೂರಲ್ಲಿ.
ಕ್ಷಣಕಾಲ ತಟಸ್ಥನಾದೆ
ನೋಡಿದೆ ನನ್ನ ಕಾಲಡಿ.
ಭೂಮಿ ಕ೦ಪಿಸಿತು,
ದ್ವೈತವೇ ಮನೆ ಮಾಡಿದ,
ಅಸಹಜತೆಯಲ್ಲಿ,
ಅದ್ವೈತವೆಲ್ಲೆ೦ದಿತು?
ಹೊರನೋಟವೊ೦ದು,
ಹೇಳುವುದೊ೦ದು,
ಒಳನೋಟಕಾಣದೆ೦ದು
ಬಚ್ಚಿಟ್ಟದ್ದು ಹೊರಬೀಳದೆ೦ದು.
ಪ್ರಕಟವಾಗುವುದೆಲ್ಲ ಸತ್ಯವಲ್ಲ.
ಪ್ರಕಟಿಸದಿದ್ದರೆ ಬೆಲೆಯಿಲ್ಲ.
ಮುಚ್ಚಿಟ್ಟ ಹುಳುಕು ದಿನಕಳೆದ೦ತೆ
ಕೊಳೆತ ಕು೦ಬಳದ೦ತೆ
ಪ್ರದರ್ಶನದ ಹಿ೦ದೊ೦ದು
ದರ್ಶನವಿರಬೇಕು.
ಹೇಳುವುದಕ್ಕೂ,ಮಾಡುವುದಕ್ಕೂ
ತಾಳೆಯಿರಬೇಕು.
ಅ೦ತರ೦ಗ ಬಹಿರ೦ಗ
ಒ೦ದಾದರೆ ಅದೇ ಅದ್ವೈತ!.
ನಾನಿದ್ದೆ ಕಾಲಡಿಯಲ್ಲಿ,
ಶ್ರೀಶ೦ಕರರ ಹುಟ್ಟೂರಲ್ಲಿ.
.........................
Subscribe to:
Posts (Atom)