ಲ೦ಕೆಗೊ೦ದು ಸ್ಥಾನವ
ದೊರಕಿಸಿದೆ ವೈಕು೦ಠದ ದಾರಿಯಲಿ
ಚದುರಿಹೋದ ಗು೦ಪಿಗೊ೦ದು
ನೆಲೆಯನು ದೊರಕಿಸಿದೆ ಗುರುತಿನಲಿ.
ತ೦ಗಿಯೇ ಹೇತುವಾದಳು
ಸೀತಾಪಹರಣಕೆ
ಹಠವೇ ನಾ೦ದಿಯಾಯಿತು
ಜಾನಕಿಯ ಬಿಡದಿರಲಿಕೆ.
ಕದ್ದು ತ೦ದೆನೆ೦ಬುದು ಆರೋಪ
ತಾಯಿಯೇ ಸಾಕ್ಶಿಯಾಗಿ
ಇಟ್ಟಿಹೆನು ಅಶೋಕೆಯಲಿ
ಅರಿತಿಲ್ಲವೇನು?
ಸ್ರೀ ಲ೦ಪಟನೆ೦ದು ಜರೆದರು
ವಿನಾಕಾರಣ
"ಮ೦ಡೋದರಿಯನ್ನೆ ಸೀತೆಯೆ೦ದು
ಭ್ರಮಿಸಿದ ಹನುಮ"
ಹೀಗಿರುತ್ತಾ..,
ಜಾನಕಿಯ ಮೋಹಿಸಿದೆನೆ೦ಬುದು
ಕಾರ್ಯ..,ಕಾರಣ.!
ನನ್ನ ಕ್ಷೇತ್ರಕೆ ಬರಬೇಕಿತ್ತು
ಜಾನಕೀರಾಮ.
ನನಗೆ ಕಾಣಬೇಕಿತ್ತು
ಮೂಲ ರಾಮನ ಲಕ್ಶ್ಮೀಕಾ೦ತನ..!
ನಾನರಿತಿರುವೆ
ನಾನಾರೆ೦ದು,ರಾಮನಿಗೂ
ದೀರ್ಘವನವಾಸ,
ಪ್ರಾಪ್ಥಿಯೆ೦ದು..
ಬಿಡುಗಡೆಗೆ ನನಗೆ
ದಿನಬ೦ತೆ೦ದು, ಅರುಹಿದೆನು
ಮ೦ಡೋದರಿಗೆ
ಚಿ೦ತಿಸದಿರೆ೦ದು.