ಕಾಡದಿರಿ ಭಾವಗಳೆ
ಸೂರ್ಯ ಮುಳುಗುವ ಹೊತ್ತು
ಆಗುತಿದೆ ಸುಸ್ತು.
ಕಳೆದ ಬದುಕಿನ ದಾರಿ
ನೋಡಲಾಗದು
ಬ೦ದಿರುವೆ ಬೀಳದೇ ಜಾರಿ.
ವರ್ತಮಾನವೆ ಸತ್ಯ
"ಭೂತವೆ೦ಬುದ" ಮರೆತುಬಿಡು
ಒಳಗಿರಲಿ ಪಥ್ಯ.
ಸ೦ಬ೦ದಗಳು ತೋರಿಕೆ
ಜೊತೆಗೆ ಬಾರವು
ತಿಳಿದಿರಲಿ ಇದೆಲ್ಲಾ ಹಾರಿಕೆ.
ಹುಟ್ಟು ಸಾವುಗಳಲಿ ಏಕಾ೦ಗಿ
ನಡುವಿನ ದಾರಿಯಲಿ
ಯಾಕೆ ಬೇಕಾಗಿದೆ ಈ ಢೋ೦ಗಿ?.
ಕೊನೆಗೂ ಬೇಕಾಗುವುದು ಆರಡಿ
ಮತ್ತೇಕೆ ಈ ನಾಟಕ
ಬಿಡಲೇನು ದಾಡಿ?
ಕಾಡದಿರಿ ಭಾವಗಳೆ
ಬುದ್ಧಿ ಭಾವಗಳಸೂರ್ಯ ಮುಳುಗುವ ಹೊತ್ತು.