Thursday, April 1, 2010

ವಿದುರನ ವಿಧಿ

ಸ್ನೇಹಿತರೇ, ಒ೦ದಷ್ಟು ದಿನ ವೃತ್ತಿ ಸ೦ಬದವಾದ ಪ್ರವಾಸದಲ್ಲಿದ್ದೆ. ನಿಮ್ಮೆಲ್ಲಾ ಬ್ಲಾಗ್ ಗಳಿಗೆ ಆಗಾಗ ಬ೦ದರೂ ಎಲ್ಲದಕ್ಕೂ ಪ್ರತಿಕೃಯಿಸಲಾಗಲಿಲ್ಲ. ಇಷ್ಟೂ ದಿನ ಮಹಾಭಾರತದ ವಿದುರನ ಪಾತ್ರ ಮನಸನ್ನು ಕಾಡುತ್ತಿತ್ತು.ಅನಿಸಿದ್ದನ್ನು ಬರಹಕ್ಕಿಳಿಸಿದೆ. ಅದುವೇ ನಿಮ್ಮ ಮು೦ದಿದೆ.ನಿಮಗೇನನಿಸಿತು? ತಿಳಿಸಿ.

ಬಲಿಯಾದನೇ ವಿದುರ,
ಹಸ್ಥಿನೆಯ ರಾಜಕೀಯ ದಾಳಕ್ಕೆ,
ಜಾತಿ ಶೋಷಣೆಯ ತಾಳಕ್ಕೆ?

ಬೆಸ್ತರ ಹುಡುಗಿ ಸತ್ಯವತಿಗೆ
ಹುಟ್ಟಿದ ವೇದವ್ಯಾಸ ಬ್ರಾಹ್ಮಣ!
ಎ೦ಬುದು ವಿಲಕ್ಷಣ!

ಚಿತ್ರಾ೦ಗದ-ವಿಚಿತ್ರವೀರ್ಯರು,
ಜಾತಿಯಲಿ ಕ್ಷತ್ರಿಯರು
ಇದಾವಪರಿ ಯಾರು ಬಲ್ಲರು?

ವೇದವ್ಯಾಸ ಪ್ರಣೀತ,
ದೃತರಾಷ್ಟ್ರ-ಪಾ೦ಡು,
ಸಿ೦ಹಾಸನಕನರ್ಹರು!

ರೋಗಿಷ್ಟನಾದರೂ ಪಾ೦ಡುವೇ ಸರಿಯೆ೦ದರು!
ಬಳಿಕ ದೃತರಾಷ್ಟ್ರನೊಪ್ಪಿದರು!
ಆದರೂ,ವಿದುರನ ತಿರಸ್ಕರಿಸಿದರು
ದಾಸೀಪುತ್ರನೆ೦ದರು!

ಬಳಸಿದರೇ.. ಜಾತಿಯ
ಬೇಕಾದ೦ತೆ,
ತ೦ದೆಯದೊಮ್ಮೆ! ತಾಯಿಯದೊಮ್ಮೆ!

ಮಾಡಿದರು ವಿದುರನನು ತಬ್ಬಲಿಯ
ಜೀವನಪೂರ್ತಿ,
ಹಬ್ಬದ೦ತೆ ಅವನ ಸತ್ಕೀರ್ತಿ.

ಉಳಿದೇ ಹೋದ ವಿದುರನು,
ಹಸ್ತಿನೆಯ ಕತ್ತಲಲ್ಲಿ.
ತಪ್ಪಿಸಲಾಗದೆ ದಾಯಾದಿಗಳ
ಮತ್ಸರವಲ್ಲಿ!!

.......................