ಲ೦ಕೆಗೊ೦ದು ಸ್ಥಾನವ
ದೊರಕಿಸಿದೆ ವೈಕು೦ಠದ ದಾರಿಯಲಿ
ಚದುರಿಹೋದ ಗು೦ಪಿಗೊ೦ದು
ನೆಲೆಯನು ದೊರಕಿಸಿದೆ ಗುರುತಿನಲಿ.
ತ೦ಗಿಯೇ ಹೇತುವಾದಳು
ಸೀತಾಪಹರಣಕೆ
ಹಠವೇ ನಾ೦ದಿಯಾಯಿತು
ಜಾನಕಿಯ ಬಿಡದಿರಲಿಕೆ.
ಕದ್ದು ತ೦ದೆನೆ೦ಬುದು ಆರೋಪ
ತಾಯಿಯೇ ಸಾಕ್ಶಿಯಾಗಿ
ಇಟ್ಟಿಹೆನು ಅಶೋಕೆಯಲಿ
ಅರಿತಿಲ್ಲವೇನು?
ಸ್ರೀ ಲ೦ಪಟನೆ೦ದು ಜರೆದರು
ವಿನಾಕಾರಣ
"ಮ೦ಡೋದರಿಯನ್ನೆ ಸೀತೆಯೆ೦ದು
ಭ್ರಮಿಸಿದ ಹನುಮ"
ಹೀಗಿರುತ್ತಾ..,
ಜಾನಕಿಯ ಮೋಹಿಸಿದೆನೆ೦ಬುದು
ಕಾರ್ಯ..,ಕಾರಣ.!
ನನ್ನ ಕ್ಷೇತ್ರಕೆ ಬರಬೇಕಿತ್ತು
ಜಾನಕೀರಾಮ.
ನನಗೆ ಕಾಣಬೇಕಿತ್ತು
ಮೂಲ ರಾಮನ ಲಕ್ಶ್ಮೀಕಾ೦ತನ..!
ನಾನರಿತಿರುವೆ
ನಾನಾರೆ೦ದು,ರಾಮನಿಗೂ
ದೀರ್ಘವನವಾಸ,
ಪ್ರಾಪ್ಥಿಯೆ೦ದು..
ಬಿಡುಗಡೆಗೆ ನನಗೆ
ದಿನಬ೦ತೆ೦ದು, ಅರುಹಿದೆನು
ಮ೦ಡೋದರಿಗೆ
ಚಿ೦ತಿಸದಿರೆ೦ದು.
Saturday, September 4, 2010
Sunday, August 1, 2010
ಸೂರ್ಯ ಮುಳುಗುವ ಹೊತ್ತು
ಕಾಡದಿರಿ ಭಾವಗಳೆ
ಸೂರ್ಯ ಮುಳುಗುವ ಹೊತ್ತು
ಆಗುತಿದೆ ಸುಸ್ತು.
ಕಳೆದ ಬದುಕಿನ ದಾರಿ
ನೋಡಲಾಗದು
ಬ೦ದಿರುವೆ ಬೀಳದೇ ಜಾರಿ.
ವರ್ತಮಾನವೆ ಸತ್ಯ
"ಭೂತವೆ೦ಬುದ" ಮರೆತುಬಿಡು
ಒಳಗಿರಲಿ ಪಥ್ಯ.
ಸ೦ಬ೦ದಗಳು ತೋರಿಕೆ
ಜೊತೆಗೆ ಬಾರವು
ತಿಳಿದಿರಲಿ ಇದೆಲ್ಲಾ ಹಾರಿಕೆ.
ಹುಟ್ಟು ಸಾವುಗಳಲಿ ಏಕಾ೦ಗಿ
ನಡುವಿನ ದಾರಿಯಲಿ
ಯಾಕೆ ಬೇಕಾಗಿದೆ ಈ ಢೋ೦ಗಿ?.
ಕೊನೆಗೂ ಬೇಕಾಗುವುದು ಆರಡಿ
ಮತ್ತೇಕೆ ಈ ನಾಟಕ
ಬಿಡಲೇನು ದಾಡಿ?
ಕಾಡದಿರಿ ಭಾವಗಳೆ
ಬುದ್ಧಿ ಭಾವಗಳಸೂರ್ಯ ಮುಳುಗುವ ಹೊತ್ತು.
Tuesday, July 20, 2010
ವಿಪರ್ಯಾಸ
ವಿಪರ್ಯಾಸ -೧
ಸೃಸ್ಟಿಸುತ್ತಾನೆ
ಮನುಷ್ಯ
ನಕಲಿನೋಟುಗಳನ್ನು
ಆದರೆ
ಸೃಷ್ಟಿಸುತ್ತದೆ
ನೋಟುಗಳು
ನಕಲಿ ಮನುಷ್ಯರನ್ನು.!!!
ವಿಪರ್ಯಾಸ -೨
ವಧು
ವರ
ಒಬ್ಬರಿಗೊಬ್ಬರು
ಒಪ್ಪಿ ಮದುವೆಯಾದರೆ
ಅದು
ಸುಮಧುರ.
ಅದಿಲ್ಲದೇ
ಹೋದರೆ
ಧುರ.!!!!
ಸೃಸ್ಟಿಸುತ್ತಾನೆ
ಮನುಷ್ಯ
ನಕಲಿನೋಟುಗಳನ್ನು
ಆದರೆ
ಸೃಷ್ಟಿಸುತ್ತದೆ
ನೋಟುಗಳು
ನಕಲಿ ಮನುಷ್ಯರನ್ನು.!!!
ವಿಪರ್ಯಾಸ -೨
ವಧು
ವರ
ಒಬ್ಬರಿಗೊಬ್ಬರು
ಒಪ್ಪಿ ಮದುವೆಯಾದರೆ
ಅದು
ಸುಮಧುರ.
ಅದಿಲ್ಲದೇ
ಹೋದರೆ
ಧುರ.!!!!
Tuesday, June 1, 2010
ಅ೦ಬೆಯ ಅ೦ತರ೦ಗ
(ಮಹಾಭಾರತದಲ್ಲಿ ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬೆ ,ಅ೦ಬಿಕೆ,ಅ೦ಬಾಲಿಕೆಯರನ್ನು ಮದುವೆ ಮಾಡಿಸಿದ ಪ್ರಕಣವೊ೦ದಿದೆ.ಕಾಶಿರಾಜ ಹಸ್ತಿನಾವತಿಗೆ ಆಮ೦ತ್ರಣವೀಯದೆ ಸ್ವಯ೦ವರವೊದನ್ನು ಏರ್ಪಡಿಸುತ್ತಾನೆ. ಸೇರಿದ ರಾಜಕುಮಾರರಲ್ಲಿ ಯಾರು ಎಲ್ಲರನ್ನೂ ಗೆಲ್ಲಬಲ್ಲ ವೀರನೋ ಅವನಿಗೆ ತನ್ನ ಕುವರಿಯರನ್ನು ಮದುವೆ ಮಾಡಿ ಕೊಡುತ್ತೇನೆ ಎ೦ಬುದಾಗಿ ಪ್ರಕಟಿಸುತ್ತಾನೆ .ಈ ಸ್ವಯ೦ವರ ಮ೦ಟಪವನ್ನು ಬ್ರಹ್ಮಚಾರಿಯಾದ ಭೀಷ್ಮಪ್ರವೇಶಿಸಿ ರಾಜಕುಮಾರಿಯರನ್ನು ಹಸ್ತಿನಾವತಿಗೆ ಕರೆದೋಯ್ದು ರಾಜರಾದ ತನ್ನ ತಮ್ಮ೦ದಿರನ್ನು ಮದುವೆಯಾಗಿ ಎ೦ಬುದಾಗಿ ಹೇಳುತ್ತಾನೆ.ಅ೦ಬಿಕೆ ,ಅ೦ಬಾಲಿಕೆಯರು ಒಪ್ಪುತ್ತಾರೆ.ಅ೦ಬೆ ಮಾತ್ರ ಪ್ರತಿಭಟಿಸುತ್ತಾಳೆ.--ಈ ಹಿನ್ನೆಲೆಯಲ್ಲಿ ಕವನವಿದೆ.)
ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.
ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.
ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ
ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.
ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.
ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.
ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................
ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.
ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.
ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ
ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.
ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.
ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.
ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................
Monday, May 17, 2010
ರಾಜಕೀಯ
ಸಾಕಾಗಿದೆ ನೋಡಿ ರಾಜಕೀಯ
ರಾವಣ
ಜರಾಸ೦ದ
ಕೀಚಕ
ಯಮ
ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ
ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು
.
ಹೇಳುವುದೊ೦ದು,
ಮಾಡುವುದೊ೦ದು.
ಎಲ್ಲರೂ ನೋಡುವರು
ಯಾರಲ್ಲಿ ಕೇಳುವುದೆ೦ದು..!
ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೃಪಾಲರು
ಎಲ್ಲರೂ.....ದೃತರಾಷ್ಟ್ರರು
ಅನಿಸುತಿದೆ,
”ಧರ್ಮ ಸ೦ಸ್ಥಾಪನಾರ್ಥಾಯಾ".... .......................................
Tuesday, May 4, 2010
ನಡೆಯೋಣ ಜೊತೆ ಜೊತೆಯಲೀ
ಕೋಪವೇನೇ ಶಾರದೇ
ಸವಿಮಾತಿನಲಿ ಹೇಳಬಾರದೇ
ಕಳೆದವಲ್ಲೇ ಹತ್ತು ವರುಷ
ಜೊತೆ ಜೊತೆಯಲೀ ಪಡುತ ಹರುಷ
ನಾ ಬ೦ದಿದ್ದೆಯಲ್ಲೇ ನಿನ್ನ ನೋಡಲೆ೦ದೂ
ನೀ ನಕ್ಕಿದ್ದೆಯ೦ದೂ ಬಾಗಿಲೆಡೆಯಲ್ಲಿ ನಿ೦ದೂ
ನಿನ್ನ ಕುಡಿನೋಟ ಓಡಾಟ ಸೆಳೆದಿತ್ತು ಅ೦ದೂ
ನಾ ಕರೆದಾಗ ನೀ ಬ೦ದೆಯಲ್ಲೇ ತಲೆತಗ್ಗಿಸುತ೦ದೂ
ಉರುಳಿದರುವರುಷ ನೀ ಇರುವೆಯಲ್ಲ ಹಾಗೇ
ನನ ಕಷ್ಟದಲೂ ಜೊತೆಯಾಗಿ ಪಟ್ಟಿರುವೆ ಬೇಗೇ.
ಸುಖ ದು:ಖ ಸಮವೆ೦ದು ಸ್ವೀಕರಿಸಿ ಇರುವೇ
ಖುಶಿ ಪಡುವೆ ಇರುದರಲೆ ದು:ಖಿಸದೆ ಬರಿದೇ
ನಡೆಯೋಣ ಜೊತೆ ಜೊತೆಯಲಿ ಮು೦ದಿನ್ನು ಬೇಗ
ಹ೦ಚೋಣ ಸ೦ತಸವ ,ಜೀವನ ಪೂರ್ತಿಯಾಗ
ತಿಳಿ ನೀನು ಜೀವನಕೆ ನಮಗೆ ನಾವು
ಇದು ಸತ್ಯ ,ನಮಗೆ ಬರೊ ತನಕ ಸಾವು
ಕೋಪವೇನೇ ಶಾರದೇ
ಸವಿಮಾತಿನಲ್ಲಿ ಹೇಳಬಾರದೇ......
ಹೇಳಬಾರದೇ......
.................................
Thursday, April 1, 2010
ವಿದುರನ ವಿಧಿ
ಸ್ನೇಹಿತರೇ, ಒ೦ದಷ್ಟು ದಿನ ವೃತ್ತಿ ಸ೦ಬದವಾದ ಪ್ರವಾಸದಲ್ಲಿದ್ದೆ. ನಿಮ್ಮೆಲ್ಲಾ ಬ್ಲಾಗ್ ಗಳಿಗೆ ಆಗಾಗ ಬ೦ದರೂ ಎಲ್ಲದಕ್ಕೂ ಪ್ರತಿಕೃಯಿಸಲಾಗಲಿಲ್ಲ. ಇಷ್ಟೂ ದಿನ ಮಹಾಭಾರತದ ವಿದುರನ ಪಾತ್ರ ಮನಸನ್ನು ಕಾಡುತ್ತಿತ್ತು.ಅನಿಸಿದ್ದನ್ನು ಬರಹಕ್ಕಿಳಿಸಿದೆ. ಅದುವೇ ನಿಮ್ಮ ಮು೦ದಿದೆ.ನಿಮಗೇನನಿಸಿತು? ತಿಳಿಸಿ.
ಬಲಿಯಾದನೇ ವಿದುರ,
ಹಸ್ಥಿನೆಯ ರಾಜಕೀಯ ದಾಳಕ್ಕೆ,
ಜಾತಿ ಶೋಷಣೆಯ ತಾಳಕ್ಕೆ?
ಬೆಸ್ತರ ಹುಡುಗಿ ಸತ್ಯವತಿಗೆ
ಹುಟ್ಟಿದ ವೇದವ್ಯಾಸ ಬ್ರಾಹ್ಮಣ!
ಎ೦ಬುದು ವಿಲಕ್ಷಣ!
ಚಿತ್ರಾ೦ಗದ-ವಿಚಿತ್ರವೀರ್ಯರು,
ಜಾತಿಯಲಿ ಕ್ಷತ್ರಿಯರು
ಇದಾವಪರಿ ಯಾರು ಬಲ್ಲರು?
ವೇದವ್ಯಾಸ ಪ್ರಣೀತ,
ದೃತರಾಷ್ಟ್ರ-ಪಾ೦ಡು,
ಸಿ೦ಹಾಸನಕನರ್ಹರು!
ರೋಗಿಷ್ಟನಾದರೂ ಪಾ೦ಡುವೇ ಸರಿಯೆ೦ದರು!
ಬಳಿಕ ದೃತರಾಷ್ಟ್ರನೊಪ್ಪಿದರು!
ಆದರೂ,ವಿದುರನ ತಿರಸ್ಕರಿಸಿದರು
ದಾಸೀಪುತ್ರನೆ೦ದರು!
ಬಳಸಿದರೇ.. ಜಾತಿಯ
ಬೇಕಾದ೦ತೆ,
ತ೦ದೆಯದೊಮ್ಮೆ! ತಾಯಿಯದೊಮ್ಮೆ!
ಮಾಡಿದರು ವಿದುರನನು ತಬ್ಬಲಿಯ
ಜೀವನಪೂರ್ತಿ,
ಹಬ್ಬದ೦ತೆ ಅವನ ಸತ್ಕೀರ್ತಿ.
ಉಳಿದೇ ಹೋದ ವಿದುರನು,
ಹಸ್ತಿನೆಯ ಕತ್ತಲಲ್ಲಿ.
ತಪ್ಪಿಸಲಾಗದೆ ದಾಯಾದಿಗಳ
ಮತ್ಸರವಲ್ಲಿ!!
.......................
Subscribe to:
Posts (Atom)