Tuesday, June 9, 2026

ಯಕ್ಷಗಾನ ಕಲಾವಿದರಿಗೆ ಸಾಮಾಜಿಕ ಭದ್ರತೆ: ಒಂದು ಅವಶ್ಯಕತೆ

ಯಕ್ಷಗಾನವು ಪ್ರಪಂಚದ ಶ್ರೇಷ್ಠ ಸಾಂಸ್ಕೃತಿಕ ಆಭರಣವಾಗಿದೆ. ತನ್ನ ವಿಶಿಷ್ಟ ಶೈಲಿಯಲ್ಲಿ ಕಥೆಯನ್ನು ನೃತ್ಯ, ಹಾಡು ಮತ್ತು ಅಶು ಸಂಭಾಷಣೆಯ ಮೂಲಕ ಪ್ರೇಕ್ಷಕರ ಮುಂದೆ ಇಡುವ ಯಕ್ಷಗಾನವು ವಿಶೇಷ ಕಲೆಯಾಗಿ ಪ್ರಸಿದ್ಧವಾಗಿದೆ. ಇದನ್ನು ಬಹುಶಃ ತಲಾಂತರಗಳಿಂದ ಅನೇಕರು ಜೀವನೋಪಾಯವಾಗಿ ಬೆಳೆಸಿಕೊಂಡು ಬಂದಿದ್ದರೂ, ಈ ಕಲಾವಿದರು ಸಾಮಾಜಿಕ ಭದ್ರತೆಗಾಗಿ ಸಾಕಷ್ಟು ಹೋರಾಟವನ್ನು ಎದುರಿಸುತ್ತಿದ್ದಾರೆ. ಯಕ್ಷಗಾನ ಕಲಾವಿದರ ಜೀವನಪದ್ಧತಿ: ಯಕ್ಷಗಾನ ಕಲಾವಿದರ ಜೀವನ ಶ್ರಮ ಮತ್ತು ತ್ಯಾಗದಿಂದ ಕೂಡಿದೆ. ಅವರು ಪ್ರಸಂಗ, ತಾಳಮದ್ದಳೆ, ಬಯಲಾಟ , ಅಭ್ಯಾಸ, ಕಲಿಕೆಯಲ್ಲಿ ನಿರತರಾಗಿರುತ್ತಾರೆ. ಆದಾಗ್ಯೂ, ಅಂತರಂಗದಲ್ಲಿ ತಳಮಳವಾಗುವ ವಿಷಯವೇನೆಂದರೆ, ಇವರಲ್ಲಿ ಹೆಚ್ಚಿನವರು ತಮ್ಮ ಭವಿಷ್ಯ, ಆರೋಗ್ಯ ಮತ್ತು ಆರ್ಥಿಕ ಭದ್ರತೆ ಬಗ್ಗೆ ಭದ್ರತೆಯನ್ನು ಹೊಂದಿಲ್ಲ. ಹಲವಾರು ಕಲಾವಿದರು ತಮ್ಮ ವೃತ್ತಿಯಲ್ಲಿ ಅನನ್ಯವಾಗಿದ್ದರೂ ಅವರಿಗೆ ನೀಡಲ್ಪಡುವ ಸಂಭಾವನೆ, ಆರೋಗ್ಯ ಸೇವೆಗಳು, ಮತ್ತು ನಿವೃತ್ತಿ ನಂತರದ ಸೌಲಭ್ಯಗಳು ಕಡಿಮೆ. ಯಕ್ಷಗಾನದಿಂದ ಆರ್ಥಿಕ ವಹಿವಾಟು : ದಕ್ಷಿಣೋತ್ತರ ಕರಾವಳಿಯಲ್ಲಿ ಯಕ್ಷಗಾನದ ಒಟ್ಟು 40 ರಿಂದ 50 ಮೇಳಗಳಿರಬಹುದು .ಎಂಡೋಮೆಂಟ್ ದೇವಸ್ಥಾನಗಳ ವ್ಯವಸ್ಥೆಯಲ್ಲಿ 15 ಕ್ಕಿಂತ ಹೆಚ್ಚು ಇವೆ . ಮತ್ತು ಸಕ್ರಿಯ ಮೇಳಗಳ ಸಂಖ್ಯೆ 40 ಇರಬಹುದೆಂದು ಅಂದಾಜಿಸಬಹುದು . ಪ್ರತಿ ಮೇಳದಲ್ಲಿ ಸುಮಾರು 40 ಕಲಾವಿದರಂತೆ 50 ಮೇಳಗಳಲ್ಲಿ 2000 ಜನ ಕಲಾವಿದರು ಸತತ 6 ತಿಂಗಳುಗಳ ಕಾಲ 180 ದಿನ ವೃತ್ತಿಯನ್ನು ಮಾಡುತ್ತಾರೆ .ಸಕ್ರಿಯ ಮೇಳಗಳೆಂದು 40 ಮೇಳಗಳನ್ನು ಪರಿಗಣಿಸಿದರೆ ಮೇಳಗಳಿಗೆ ಸರಿ ಸುಮಾರು ಸರಾಸರಿ ಪ್ರತಿ ಆಟಕ್ಕೆ ರೂಪಾಯಿ 60000 ದಂತೆ ವೀಳ್ಯವೆಂದು ಅಂದಾಜಿಸಬಹುದು. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳ ಯಕ್ಷಗಾನದಿಂದಾಗುವ ಪ್ರದರ್ಶನಾವಧಿಯ ಆರ್ಥಿಕ ವ್ಯವಹಾರ ಸರಿ ಸುಮಾರು 43 .20 ಕೋಟಿಯಷ್ಟು . ಇದರ ಜೊತೆಗೆ ಈ ಕಾರ್ಯಕ್ರಮದಿಂದಾಗಿ ನಡೆಯುವ ಇತರ ವ್ಯಾಪಾರ, ಅನ್ನಸಂತರ್ಪಣೆಯಂತಹ ಕಾರ್ಯಕ್ರಮ ಮತ್ತು ಸುಡುಮದ್ದು, ಇತರ ವಾದ್ಯ ವೈಭವಗಳು ಇತ್ಯಾದಿ ಸೇರಿದರೆ ಸರಿ ಸುಮಾರು 50 .00 ಕೋಟಿಯಷ್ಟು ಆರ್ಥಿಕ ವ್ಯವಹಾರ ನಡೆಯುತ್ತದೆಯೆಂದು ಅಂದಾಜಿಸಬಹುದು. ಇ0ದು ಜಿಲ್ಲೆಯ ಸಾಧಾರಣ ಉದ್ಯಮಗಳಿಂದಲೂ ಹೆಚ್ಚಿನ ಆರ್ಥಿಕ ವ್ಯವಹಾರ ಯಕ್ಷಗಾನದಿಂದ ಆಗುತ್ತಿದೆ. ಇದು ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಯಕ್ಷಗಾನದ ಬಹುದೊಡ್ಡ ಕೊಡುಗೆ . ಇಂತಹ ದೊಡ್ಡ ಆರ್ಥಿಕ ವಹಿವಾಟಿಗೆ ಕಾರಣರಾಗುವ ಕಲಾವಿದರ ಬದುಕು ಅತಂತ್ರವೇ ಎನ್ನುವ ಪ್ರಶ್ನೆ ಕಾಡದಿರದು . ಸಾಮಾಜಿಕ ಭದ್ರತೆಯ ಅಗತ್ಯತೆ 1. ಆರ್ಥಿಕ ಸ್ಥಿರತೆ: ಕಲಾವಿದರಿಗೆ ಖಾತರಿಯ ಆರ್ಥಿಕ ಸಬಲತೆಯ ಅಗತ್ಯವಿದೆ. ಪ್ರತಿಯೊಬ್ಬರಿಗೂ ತಕ್ಕಮಟ್ಟಿನ ಸಂಭಾವನೆ ಸಿಗುತ್ತಿದ್ದರೂ ಹಲವು ಕಲಾವಿದರಿಗೆ ಕಷ್ಟಕರ ಜೀವನವಿದೆ. ಯಕ್ಷಗಾನ ಆಕಾಡೆಮಿ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ವೇತನ, ಫಲಾನುಭವಿಗಳ ಯೋಜನೆಗಳು ಮತ್ತು ಆರ್ಥಿಕ ನೆರವು ಯೋಜನೆಗಳನ್ನು ಒದಗಿಸಬೇಕು. 2. ಆರೋಗ್ಯ ವಿಮೆ : ಯಕ್ಷಗಾನ ಕಲಾವಿದರಿಗೆ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ನೃತ್ಯ ಮತ್ತು ರಂಗಭೂಮಿಯ ತೀವ್ರತೆಯಿಂದಾಗಿ ಅವರಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ತೊಂದರೆಗಳು ಉಂಟಾಗಬಹುದು. ಆರೋಗ್ಯ ವಿಮಾ ಯೋಜನೆಗಳು, ಮತ್ತು ತುರ್ತು ಆಸ್ಪತ್ರೆಯ ವ್ಯವಸ್ಥೆ ಇವರಿಗೆ ಅತ್ಯಂತ ಮುಖ್ಯ. 3. ನಿವೃತ್ತಿ ಯೋಜನೆಗಳು ಯಕ್ಷಗಾನ ವೃತ್ತಿಯು ಶಾರೀರಿಕ ಶ್ರಮದ ಮೇಲಾಧಾರಿತವಿರುತ್ತದೆ. ವಯಸ್ಸಾದ ನಂತರ ಇವರಿಗೆ ಕೆಲಸ ನಿರ್ವಹಿಸಲು ಕಷ್ಟವಾಗಬಹುದು. ಹೀಗಾಗಿ, ನಿವೃತ್ತಿ ಧನ ಮತ್ತು ಪಿಂಚಣಿ ಯೋಜನೆಗಳ ತಂತ್ರವನ್ನು ಸರ್ಕಾರವು ಖಡ್ಡಾಯವಾಗಿ ರೂಪಿಸಬೇಕಾಗಿದೆ. 4. ಕಲೆಗೆ ಪ್ರೋತ್ಸಾಹ: ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಈ ಕಲೆಯನ್ನು ಇನ್ನಷ್ಟು ತಲುಪಿಸಬೇಕಾಗಿದ್ದು, ವಿಶೇಷವಾಗಿ ಯುವಪೀಳಿಗೆಗೆ ತಲುಪಿಸಲು ಪ್ರಾಮುಖ್ಯ ನೀಡಬೇಕು. ಯಕ್ಷಗಾನದ ಸಂಸ್ಕೃತಿ ಮತ್ತು ಪರಂಪರೆಯು ಮುಂದುವರಿಯಬೇಕಾದರೆ ನೂತನ ಕಲಾವಿದರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವುದು ಅಗತ್ಯ.ಇದಕ್ಕಾಗಿ ಮಾನ್ಯತೆ ಪಡೆದ ಕೋರ್ಸ್ಗಳನ್ನು ಮಾಡಿ ಅವಕಾಶಕ್ಕೊಂದು ಅರ್ಹತೆಯನ್ನು ಪರಿಗಣಿಸಬೇಕು . 5 .ಕಲಾವಿದರ ಸಂಘಟನೆ: ಯಕ್ಷಗಾನ ಕಲಾವಿದರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಮತ್ತು ಅಭಿವೃದ್ದಿಗಾಗಿ ಒಟ್ಟಾಗಿ ನಿಲ್ಲಬೇಕು. ಸರ್ಕಾರ ಮತ್ತು ಬಾಗಿದಾರರೊಂದಿಗೆ ಮಾತುಕತೆ ನಡೆಸಲು ಒಬ್ಬರು ,ಯಕ್ಷಗಾನ ಅಕಾಡೆಮಿಯು ಪ್ರತಿನಿಧಿಯ೦ತೆ ವ್ಯವಹರಿಸಬೇಕು 6.ಸಮುದಾಯದ ಒಲವು ಮತ್ತು ಬೆಂಬಲ: ಕಲಾವಿದರ ಜೀವನ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಸಮುದಾಯದ ಬೆಂಬಲ ಅಗತ್ಯವಿದೆ. ಯಕ್ಷಗಾನದ ಪ್ರೇಮಿಗಳು, ಕಲಾ ಹಿತೈಷಿಗಳು ಮತ್ತು ಪೋಷಕರು ಇಂತಹ ಪ್ರಯತ್ನಗಳಲ್ಲಿ ಪಾಲ್ಗೊಂಡು ಸಹಕಾರ ನೀಡಬಹುದು.ಒಂದು ಸಮಷ್ಟಿ ನಿಧಿಯನ್ನು ಸ್ಥಾಪಿಸಬಹುದು. 7 .ಅಭಿವೃದ್ಧಿಗೆ ಉಪಾಯಗಳು: ಸರ್ಕಾರವು ಈ ನಿಟ್ಟಿನಲ್ಲಿ ಗಮನ ಹರಿಸಿ ಸರ್ಕಾರದಿಂದ ನಿಯಮಿತವಾಗುವ ಆರ್ಥಿಕ ನೆರವು ಯೋಜನೆಗಳು, ವಿಮಾ ಯೋಜನೆಗಳು, ಮತ್ತು ಪಿಂಚಣಿ ಕಲಾವಿದರಿಗೆ ಸಹಾಯಕವಾಗಬಹುದು. ಈ ಪ್ರಯತ್ನವು ಕಲಾವಿದರ ಭದ್ರತೆಯೊಂದಿಗೆ ಯಕ್ಷಗಾನವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತದೆ. 7 .ಕಲಾವಿದರಿಗಿರಬೇಕಾದ ಸಾಮಾಜಿಕ ಪ್ರಜ್ಞೆ ಯಕ್ಷಗಾನ ಕಲಾವಿದರು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬಗಳು. ಇವರಿಗೆ ಸಕಾಲದಲ್ಲಿ ನೀಡುವ ಸಾಮಾಜಿಕ ಭದ್ರತೆ ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ, ಯಕ್ಷಗಾನದ ಪರಂಪರೆಯನ್ನೂ ಕಾಯುವಲ್ಲಿ ಸಹಕಾರಿಯಾಗಲಿದೆ.ಇದಕ್ಕೆ ಸ್ವತಹ ಕಲಾವಿದರು ಮುತುವರ್ಜಿ ವಹಿಸಿ ಸಂಘಟಿತರಾಗಿ ಮುನ್ನೆಲೆಗೆ ಬರಬೇಕು ,ಬೇರೆ ಯಾರಾದರೂ ಇದರ ನೇತೃತ್ವ ವಹಿಸುತ್ತಾರೆ ಎಂದು ನಿರೀಕ್ಷಿಸಬಾರದು .ಮತ್ತು ಇಂತಹ ವ್ಯವಸ್ಥೆಗೆ ತೊಡಗುವವರಲ್ಲಿ ಸಹಕರಿಸಬೇಕು ,ಉಪೇಕ್ಷಿಸಬಾರದು. ಇಂತಹ ಧನಾತ್ಮಕ ಧೋರಣೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯ ಕೇಳುವ ದೈನ್ಯತೆ ತಪ್ಪುತ್ತದೆ ಮತ್ತು ಸ್ವಾಭಿಮಾನದ ಬದುಕು ಕಲಾವಿದರದ್ದಾಗುತ್ತದೆ. ಹೀಗೆ ಕರಾವಳಿಯ ಆರ್ಥಿಕತೆಯ ಹರಿವಿನಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನ ಕ್ಷೇತ್ರದ ಕಲಾವಿದರಿಗೆ ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ, ಸರಕಾರ ಧನಾತ್ಮಕ ಚಿಂತನೆಯೊಂದಿಗೆ ಯೋಜನೆಯೊಂದನ್ನು ಅಗತ್ಯ ರೂಪಿಸಬೇಕಿದೆ ಮತ್ತು ಈ ಕ್ಷೇತ್ರವನ್ನು ಇನ್ನಷ್ಟು ಸುಧೃಢ ಗೊಳಿಸಬೇಕಿದೆ ಯಕ್ಷಗಾನಮ್ ಗೆಲ್ಗೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ

ಯಕ್ಷಗಾನ ವೇದಿಕೆಯಲ್ಲಿ ನುಸುಳುತ್ತಿರುವ ಅಪಸವ್ಯಗಳು – ಶುದ್ಧತೆಯ ಸಂಕಷ್ಟ ಮತ್ತು ಸಾಂಸ್ಕೃತಿಕ ನೀತಿಸಂಹಿತೆಯ ಅಗತ್ಯ

ಯಕ್ಷಗಾನ ನಮ್ಮ ದೇಶವೇ ಹೆಮ್ಮೆಪಡುವ ಕಲಾಪ್ರಕಾರ . ಇದು ಕೇವಲ ಕಲೆಯ ಪ್ರಕಾರವಲ್ಲ; ಅದು ಭಾರತೀಯ ತತ್ವಜ್ಞಾನ , ಪೌರಾಣಿಕತೆ, ನೈತಿಕತೆ, ಭಕ್ತಿ ಮತ್ತು ಶಿಸ್ತಿನ ಸಂಸ್ಕೃತಿಕ ಶಿಲ್ಪವಾಗಿದೆ. ಯುಗಯುಗಾಂತರಗಳಿಂದ ಕಥೆಗಳ ಶಕ್ತಿಯ ಮೂಲಕ ಸಮಾಜಕ್ಕೆ ಸಂವೇದನೆ, ಜ್ಞಾನದ ಬೆಳಕು ಮತ್ತು ನೈತಿಕತೆ ಬೋಧಿಸುತ್ತಾ ಬಂದ ಈ ವೇದಿಕೆ, ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಅಶ್ರದ್ಧಾಪೂರ್ಣ ಪ್ರಭಾವಕ್ಕೆ ಒಳಗಾಗುತ್ತಿರುವಂತಿದೆ. "ಆಧುನಿಕತೆ", "ನವೀನತೆ", "ಹಾಸ್ಯಪ್ರಜ್ಞೆ", "ಜನಪ್ರಿಯತೆ" ಎಂಬ ಹೆಸರಿನಲ್ಲಿ ಕೆಲ ಕಲಾವಿದರು ಮತ್ತು ತಂಡಗಳು ಯಕ್ಷಗಾನ ವೇದಿಕೆಯನ್ನು ತಾತ್ಕಾಲಿಕ ಪ್ರಹಸನ ವೇದಿಕೆಯಾಗಿಸಲು ಮುಂದಾಗಿರುವ ದೃಶ್ಯಗಳು ಕಂಡುಬರುತ್ತಿವೆ. ಇದರ ಪರಿಣಾಮವಾಗಿ ಕಲೆಯ ತಾತ್ವಿಕತೆ, ಪಾತ್ರಗಳ ಗಂಭೀರತೆ, ಮತ್ತು ಕಥೆಯ ಶ್ರೇಷ್ಠತೆ ಕುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚಿನ ಕೆಲವು ಪ್ರದರ್ಶನಗಳಲ್ಲಿ ರಾಜಕೀಯ ಟಿಪ್ಪಣಿಗಳು, ಪ್ರಸಕ್ತ ಘಟನೆಗಳ ವ್ಯಂಗ್ಯ ಉಲ್ಲೇಖಗಳು, ಜಾತೀಯ ವಿವರಣೆಗಳ ವ್ಯಂಗ್ಯೋಕ್ತಿ, ಜನಪ್ರಿಯ ಚಲನಚಿತ್ರ ಸಂಭಾಷಣೆಗಳು ಪ್ರಸ್ತುತಿಯ ನಡುವೆಯೇ ಸೇರಿಸಲಾಗುತ್ತಿದೆ. ಕೆಲವರು ಇದನ್ನು 'ಪ್ರಜ್ಞಾಪೂರಿತ ಹಾಸ್ಯ' ಎಂದೂ ಹೇಳುತ್ತಾರೆ. ಆದರೆ ಈ ಹಾಸ್ಯವು ಪಾತ್ರದ ತಾತ್ವಿಕತೆಯ, ಕಥೆಯ ಗಂಭೀರತೆಯ, ವೇದಿಕೆಯ ಶ್ರದ್ಧೆಯ ವಿರುದ್ಧವೇ ಹೋದರೆ, ಅದು ಕಲೆಯ ಮೇಲೆಯೇ ಅಪಮಾನವಾಗುತ್ತದೆ. ಉದಾಹರಣೆಗೆ:'ಧರ್ಮರಾಜ' ಪಾತ್ರಧಾರಿ ಭಾಗವತನೊಂದಿಗೆ ಅಥವಾ ಸಹಪಾತ್ರದೊಂದಿಗೆ ರಾಜಕೀಯ ಪ್ರಸಂಗವನ್ನು ಬೆರೆಸಿದಾಗ ಕಥೆ ಆಧ್ಯಾತ್ಮಿಕತೆಯಿಂದ ರಾಜಕೀಯ "ಟಿವಿ ಟಾಕ್‌ಶೋ"ವಾಗಿ ಪರಿಣಮಿಸುತ್ತದೆ. 'ಕೃಷ್ಣ'ನ ವೇಷದಲ್ಲಿರುವವರು ಪ್ರಸಕ್ತ ನ್ಯಾಯ ವ್ಯವಸ್ಥೆಯ ಕುರಿತು ವ್ಯಂಗ್ಯ ಮಾಡುವುದು ಪಾತ್ರವನ್ನು ಮತ್ತು ಕೃಷ್ಣನ ವ್ಯಕ್ತಿತ್ವವನ್ನು ಕುಗ್ಗಿಸುವಂತೆ ಮಾಡುತ್ತದೆ.ಕಾಲ ಪ್ರಜ್ಞೆಯ ಅರಿವು ಕಲಾವಿದನಿಗಿರಬೇಕಾದ್ದು ಅತ್ಯಂತ ಮುಖ್ಯ. ಭಾಗವತರು ಪಾತ್ರ ಮಧ್ಯದಲ್ಲಿ ಜನಪ್ರಿಯ ನಾಯಕರ ಹೆಸರುಗಳನ್ನು ಬಳಸುವುದು, ಹಾಸ್ಯದ ಹೆಸರಿನಲ್ಲಿ ವರ್ತಮಾನದ ಹಸಿ ಹಸಿ ವಿಷಯಗಳನ್ನು ಮಾತನಾಡುವುದು ಪ್ರೇಕ್ಷಕರ ಗಮನವನ್ನು ಕಲೆಯಮೂಲ ತತ್ವದಿಂದ ತಿರುಗಿಸುತ್ತದೆ. ಕಲೆ ಒಂದು ಹೊಣೆಗಾರಿಕೆಯ ತಡೆರೇಖೆ ಕಲೆಯ ಸ್ವಾತಂತ್ರ್ಯ ಅನಿಯಂತ್ರಿತವಲ್ಲ. ಅದು ಶ್ರದ್ಧೆಯ ಮೂಲಕ ನಡಿಗೆಯಿಡಬೇಕು. ಯಕ್ಷಗಾನದಲ್ಲಿ ಪಾತ್ರದ ಚರಿತ್ರೆ, ಆತನ ಧರ್ಮಸ್ಥಿತಿ, ಕಾಲ ಪ್ರಜ್ಞೆ , ಆಧ್ಯಾತ್ಮಿಕ ಸ್ಥಾನಮಾನವು ಅತ್ಯಂತ ಪ್ರಾಮುಖ್ಯ. ಒಂದು ಪವಿತ್ರ ಪಾತ್ರದ ಮೂಲಕ ಅಶಿಷ್ಟ ಉಲ್ಲೇಖ ನೀಡುವುದು ಪ್ರೇಕ್ಷಕರಿಗೆ ನಗೆಯ ನಾಣ್ಯದಂತೆ ಕಾಣಬಹುದು, ಆದರೆ ಅದು ಕಲೆಯ ಶ್ರೇಷ್ಠತೆಯಲ್ಲಿ ವಿಚಲನೆಯ ಭಿನ್ನತೆಯ ಬೀಜವೆಸುತ್ತದೆ. ಇದರ ಬಗ್ಗೆ ಒಂದು ಜವಾಬ್ದಾರಿ ಭಾವ ನಾವೆಲ್ಲರೂ ಧರಿಸಬೇಕಾಗಿದೆ – ಕಲಾವಿದರು, ಭಾಗವತರು, ಸಂಘಟಕರು ಮಾತ್ರವಲ್ಲ; ಪ್ರೇಕ್ಷಕರೂ ಸಹ ತಮ್ಮ ಪ್ರತಿಕ್ರಿಯೆ ಮೂಲಕ ಈ ಅಪಸವ್ಯಗಳ ವಿರುದ್ಧ ಧ್ವನಿ ಎತ್ತಬೇಕು. ನೀತಿಸಂಹಿತೆಯ ಅಗತ್ಯತೆ ಪ್ರತಿಯೊಂದು ಮೇಳಕ್ಕೂ ಒಳಗೊಳ್ಳುವಂತಹ, ಮನದಟ್ಟಾದ ಒಂದು ನೀತಿಸಂಹಿತೆ ಅಗತ್ಯವಾಗಿದೆ: ಭಾಗವತರಿಗೆ ಹಾಗೂ ವೇಷಧಾರಿಗಳಿಗೆ ಮೂಲಕಥೆ, ಪಾತ್ರ ಶ್ರದ್ಧೆ, ಪಾತ್ರ ವ್ಯಾಪ್ತಿ ,ಸಾಂಘಿಕ ಪ್ರದರ್ಶನದ ಜವಾಬ್ಧಾರಿ ಹಾಗೂ ರಾಜಕೀಯ, ಜಾತಿ, ವ್ಯಕ್ತಿಗತ ವ್ಯಂಗ್ಯ ಇತ್ಯಾದಿಗಳಿಂದ ದೂರವಿರುವ ಬಗ್ಗೆ ತಿಳಿಸುವ ಮಾರ್ಗದರ್ಶನ ಕೊಡಬೇಕಿದೆ. ಸಾಂಘಿಕವಾಗಿ ಕಲೆಯ ಗೌರವವನ್ನು ಕಾಪಾಡುವ ನಿರ್ಧಾರ. ಇದು ಕಲೆಯ ವಿರೋಧವಲ್ಲ; ಇದು ಕಲೆಯ ಪವಿತ್ರತೆಯ ರಕ್ಷಣೆ.ಒಂದು ವೇಳೆ ಹಾಗೆ ಮಾತನಾಡುವ ಚಟವಿರುವವರನ್ನು ಕಾರ್ಯಕ್ರಮದ ಮೊದಲೇ ಸ್ನೇಹಪೂರ್ವಕವಾಗಿ ಎಚ್ಚರಿಸುವುದರಿಂದ ಬಹುತೇಕ ಸಮಸ್ಯೆ ತಡೆಯಬಹುದಾಗಿದೆ. ಕಲಾವಿದರಲ್ಲಿ ಕೇಳುವ ಸಂಸ್ಕೃತಿ, ಗೌರವ ಮತ್ತು ಪ್ರೌಢತೆ ಇದೆ . ನವೀನತೆ ಅಗತ್ಯವಿದೆ ಆದರೆ ಅದು ಕಲೆಯ ತಾತ್ವಿಕ ಶ್ರದ್ಧೆಯಿಂದ ಹುಟ್ಟಿರಬೇಕು. ಹೊಸ ಪ್ರಯೋಗಗಳು, ವೇಷ ಪ್ರಸ್ಥಾಪನೆಗಳು, ಸಂಗೀತ all these innovations must enhance the sacredness and seriousness of the tradition. ಯಕ್ಷಗಾನ ಯಾವುದೇ ತಾತ್ಕಾಲಿಕ ಜನಪ್ರಿಯತೆಗೆ ತಲೆಬಾಗಬೇಕಾದ ವೇದಿಕೆಯಲ್ಲ. ಅದು ಪಠ್ಯ ಶಕ್ತಿ, ಭಕ್ತಿ ಮತ್ತು ಧರ್ಮದ ಸಂವಹನ. ಇಂದಿನ ಯುಗದಲ್ಲಿ ಯಕ್ಷಗಾನವನ್ನು ಕೇವಲ “ಮನರಂಜನೆ”ಯ ಪ್ರಕಾರವನ್ನಾಗಿ ನೋಡುವ ಅಪಾಯವಿದೆ. ಆದರೆ ನಾವೆಲ್ಲರೂ ಸೇರಿ ಕಲಾವಿದರು, ಯಜಮಾನರು, ಸಂಘಟಕರು, ಅಭಿಮಾನಿಗಳು – ಕಲೆಯ ಮೂಲ ಮೌಲ್ಯವನ್ನು ಕಾಪಾಡಬೇಕಾದ ದಿಕ್ಕಿನಲ್ಲಿ ಗಮನ ಹರಿಸಬೇಕಾಗಿದೆ . ಯಕ್ಷಗಾನವೆಂದರೆ ಅದು ಪಾತ್ರಶ್ರದ್ಧೆ, ಮೌಲ್ಯಯುತ ಕಥಾಪ್ರಸ್ತುತಿ , ಶ್ರವ್ಯಶಕ್ತಿ, ಶ್ರದ್ಧಾ ಬದ್ಧತೆ, ಮತ್ತು ಸಂಸ್ಕೃತಿಯ ಪ್ರತಿಬಿಂಬ.ಈ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಧೈರ್ಯದಿಂದ, ಪ್ರಾಮಾಣಿಕತೆಯಿಂದ ನಿಲ್ಲೋಣ. ಯಾಕೆಂದರೆ ಕಲಾ ವೇದಿಕೆ ಶುದ್ಧವಾದಾಗ ಮಾತ್ರ, ಸಮಾಜ ಶುದ್ಧ ಚಿಂತನೆಯನ್ನು ಪಡೆಯಲು ಸಾಧ್ಯ. ಕುಮಾರ ಸುಬ್ರಹ್ಮಣ್ಯ ಮುಳಿಯಾಲ.

Wednesday, June 3, 2026

ಯಕ್ಷಗಾನ ಅಥವಾ ಯಾವುದೇ ಸಾಂಸ್ಕೃತಿಕ ಕಲೆಯ ನೇರ ಪ್ರಸಾರಕ್ಕೆ ಮೂಲಭೂತ ಮಾನದಂಡಗಳು

ಯಕ್ಷಗಾನ ಅಥವಾ ಯಾವುದೇ ಸಾಂಸ್ಕೃತಿಕ ಕಲೆಯ ನೇರ ಪ್ರಸಾರಕ್ಕೆ ಕೆಳಗಿನ ಮೂಲಭೂತ ಮಾನದಂಡಗಳು ಇರಬೇಕು: A. ಅನುಮತಿ ಮತ್ತು ಹಕ್ಕುಸ್ವಾಮ್ಯ 1. ಆಯೋಜಕರ ,ಕಲಾವಿದರ ಅನುಮತಿ ಅಗತ್ಯ: ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಮಠ, ಸಂಘ, ಸಂಘಟನೆ ಅಥವಾ ಯಜಮಾನರ ಲಿಖಿತ ಅನುಮತಿ ಇಲ್ಲದೆ ಪ್ರಸಾರ ಮಾಡಬಾರದು. 2. ಕಲಾವಿದರ ಒಪ್ಪಿಗೆ: ಆಯೋಜಕರು ಅಥವಾ ಮೇಳದ ಯಜಮಾನರು ಅಥವಾ ಯಾವುದೇ ಸಂಸ್ಥೆ ಕಲಾವಿದರೊಂದಿಗೆ ಮೊದಲೇ ಚರ್ಚಿಸಿ ನೇರ ಪ್ರಸಾರದ ಪೂರಾವಾನುಮತಿ ಕಲಾವಿದರಿಂದ ಪಡೆದಿರಬೇಕು .ಯಾಕೆಂದರೆ ಕಲಾವಿದರ ಧ್ವನಿ, ಚಿತ್ರ, ಅಭಿನಯ ಇತ್ಯಾದಿ ಎಲ್ಲವೂ ಅವರ ವೈಯಕ್ತಿಕ ಬೌದ್ಧಿಕ ಆಸ್ತಿ (intellectual property). ಆದ್ದರಿಂದ ಪ್ರಸಾರದ ಮೊದಲು ಅವರ ಸಹಮತಿ ಅಗತ್ಯ. 3. ಪ್ರಸಾರ ಸಂಸ್ಥೆಯ ಗುರುತು: ಪ್ರಸಾರ ಮಾಡುವ ಯೂಟ್ಯೂಬ್ ಚಾನಲ್ ಅಥವಾ ಮಾಧ್ಯಮವು ತನ್ನ ಅಧಿಕೃತ ಹೆಸರು ಮತ್ತು ಕಾನೂನಾತ್ಮಕ ವಿಳಾಸ ಪ್ರದರ್ಶಿಸಬೇಕು. B. ತಾಂತ್ರಿಕ ಗುಣಮಟ್ಟ ದೃಶ್ಯ/ಧ್ವನಿ ಗುಣಮಟ್ಟವು ಕನಿಷ್ಠ ಮಟ್ಟದ ತಾಂತ್ರಿಕ ಮಾನದಂಡಗಳನ್ನು ಪೂರೈಸಬೇಕು.ಯಾವುದೇ ವಿಕೃತ ಅಥವಾ ಸಂಪಾದಿತ ಚಿತ್ರಣದಿಂದ ಕಲೆಯ ಅಸಲಿ ರೂಪ ಬದಲಾಗಬಾರದು. C. ನೈತಿಕ ನಿಯಮಗಳು 1 .ಪ್ರಸಾರದಲ್ಲಿ ಅಸಭ್ಯ ಜಾಹೀರಾತುಗಳು, ರಾಜಕೀಯ ಟಿಪ್ಪಣಿಗಳು ಅಥವಾ ವೈಯಕ್ತಿಕ ಕಾಮೆಂಟ್‌ಗಳು ಇರಬಾರದು. 2 .ಲೈವ್ ಕಾಮೆಂಟ್‌ಗಳಿಗೆ ನೈತಿಕ ನಿಯಂತ್ರಣ (moderation) ಇರಬೇಕು. D. ದಾಖಲೆ ಸಂಗ್ರಹ ಪ್ರತಿಯೊಂದು ನೇರ ಪ್ರಸಾರದ ಪೂರ್ಣ ದಾಖಲೆ (raw footage) ಆಯೋಜಕರ ಬಳಿ ಉಳಿಯಬೇಕು. ಇದು ಭವಿಷ್ಯದಲ್ಲಿ ವಿವಾದ ಬಂದಾಗ ಸಾಕ್ಷಿಯಾಗಿ ಕೆಲಸ ಮಾಡುತ್ತದೆ. 2 . ಹಕ್ಕುಸ್ವಾಮ್ಯ ಮತ್ತು ಕಾನೂನಾತ್ಮಕ ಹಕ್ಕುಗಳು (A) ಯಾರದ್ದು ಹಕ್ಕು? 1 .ಪ್ರಸಾರ ಹಕ್ಕು (Broadcast Right) ನೇರ ಪ್ರಸಾರ ಮಾಧ್ಯಮ / ಚಾನಲ್ ಆಯೋಜಕರ ಅನುಮತಿಯೊಂದಿಗೆ ಪ್ರಸಾರ ಮಾಡಿದರೆ, ಆ ಡಿಜಿಟಲ್ ಆವೃತ್ತಿಯ ಹಕ್ಕು ಇವರಿಗೆ ಸೀಮಿತ ಮತ್ತು ಆಯೋಜಕರ ಜೊತೆಗಿನ ಒಪ್ಪಂದದಂತೆ ಕಾರ್ಯ ನಿರ್ವಹಿಸಬೇಕು. 2 .ಆದ್ದರಿಂದ ಹಕ್ಕುಸ್ವಾಮ್ಯ “ಸಹ-ಸ್ವಾಮ್ಯ” (Joint Ownership) ಆಗಿರಬೇಕು ಆಯೋಜಕರು, ಪ್ರಸಾರಮಾಧ್ಯಮ ಇಬ್ಬರಿಗೂ ಜೊತೆಯಾಗಿರಬೇಕು ಅಥವಾ ಒಪ್ಪಂದದಂತೆ ಇರಬೇಕು. (B) Cut–Paste, Copy–Reupload ತಡೆಯುವ ಕ್ರಮಗಳು 1. YouTube / Facebook Copyright Protection Tools: ಯೂಟ್ಯೂಬ್‌ನಲ್ಲಿ Content ID ಸೌಲಭ್ಯ ಇದೆ. ನೀವು ನಿಮ್ಮ ಪ್ರಸಾರವನ್ನು ಅದರಲ್ಲಿ ನೋಂದಾಯಿಸಿದರೆ ಬೇರೆವರು ಅದೇ ದೃಶ್ಯವನ್ನು ಅಪ್‌ಲೋಡ್ ಮಾಡಿದಾಗ ಸ್ವಯಂಚಾಲಿತವಾಗಿ ನೋಟೀಸ್ ಹೋಗುತ್ತದೆ. Facebook ಮತ್ತು Instagramಕ್ಕೂ ಹೋಲುವ “Rights Manager” ವ್ಯವಸ್ಥೆ ಇದೆ. 2. Watermark / Digital Signature: ಪ್ರತಿಯೊಂದು ಪ್ರಸಾರದಲ್ಲಿ ಸಂಸ್ಥೆಯ ಸ್ಥಿರ ಲೋಗೋ ಅಥವಾ watermark ಇರಬೇಕು. “© (Year) – Organizer/Institution Name. All Rights Reserved” ಎಂಬ ಸೂಚನೆ ಸ್ಪಷ್ಟವಾಗಿ ಪ್ರದರ್ಶಿಸಬೇಕು. 3. Legal Disclaimer: ವಿಡಿಯೋ ವಿವರಣೆಯಲ್ಲಿ (description) ಈ ನೋಟು ಇರಬೇಕು: “ಈ ಪ್ರಸಾರ ಹಾಗೂ ಅದರ ದೃಶ್ಯ/ಧ್ವನಿ ಹಕ್ಕುಗಳು [ಸಂಸ್ಥೆ/ಮೇಳದ ಹೆಸರು] ಮತ್ತು [ಚಾನಲ್ ಹೆಸರು] ಅವರ ಸಹಮಾಲಿಕತ್ವದಲ್ಲಿವೆ. ಯಾವುದೇ ಅನಧಿಕೃತ ನಕಲು ಅಥವಾ ಪುನರ್‌ಪ್ರಸಾರ ಕಾನೂನುಬದ್ಧವಾಗಿ ಶಿಕ್ಷಾರ್ಹ.” 4. ಕಾನೂನು ನೋಂದಣಿ (Voluntary Registration): ಪ್ರಮುಖ ಕಲಾಪ್ರಸಾರಗಳು ಅಥವಾ ಡಾಕ್ಯುಮೆಂಟೇಶನ್‌ಗಳನ್ನು Indian Copyright Office (Delhi) ನಲ್ಲಿ Form XIV ಮೂಲಕ “Video Work” ರೂಪದಲ್ಲಿ ನೋಂದಾಯಿಸಬಹುದು. 3 .. ಕಲಾಪ್ರಸಾರ ಶಿಸ್ತು ನಿಯಮಾವಳಿ (Draft Framework) ನಿಮ್ಮ ಸಂಸ್ಥೆ ಅಥವಾ ಕಲಾಪೋಷಕ ಸಂಘವು ಇಂತಹ ಪ್ರಸಾರಗಳನ್ನು ನಿಯಂತ್ರಿಸಲು ಕೆಳಗಿನ ರೀತಿಯ “ಯಕ್ಷಗಾನ ಕಲಾಪ್ರಸಾರ ನೀತಿ ಸಂಹಿತೆ” ರೂಪಿಸಬಹುದು: ಯಕ್ಷಗಾನ ಕಲಾಪ್ರಸಾರ ನೀತಿ ಸಂಹಿತೆ – ಪ್ರಮುಖ ಅಂಶಗಳು 1. ಉದ್ದೇಶ: ಯಕ್ಷಗಾನದ ಶ್ರೇಷ್ಠತೆಯನ್ನು ಕಾಪಾಡುವ ಹಾಗೂ ಡಿಜಿಟಲ್ ಪ್ರಸಾರದಲ್ಲಿ ನೈತಿಕ ಮತ್ತು ಕಾನೂನಾತ್ಮಕ ಶಿಸ್ತನ್ನು ರೂಪಿಸುವುದು. 2. ಅನುಮತಿ ಕ್ರಮ: ಪ್ರಸಾರದ ಮೊದಲು ಕಲಾವಿದರು, ಆಯೋಜಕರು, ಮತ್ತು ಪ್ರಸಾರ ಸಂಸ್ಥೆ ನಡುವೆ ಲಿಖಿತ ಒಪ್ಪಂದ ಅಗತ್ಯ. 3. ಪ್ರಸಾರ ಗುಣಮಟ್ಟ: ಕನಿಷ್ಠ ತಾಂತ್ರಿಕ ಮಾನದಂಡಗಳು (1080p HD, ಸಮನ್ವಿತ ಧ್ವನಿ, ಸ್ಥಿರ ಕ್ಯಾಮೆರಾ ಕೋನಗಳು) ಕಡ್ಡಾಯ. 4. ಪ್ರಸಾರ ಸಮಯ ಮತ್ತು ಆಯ್ಕೆ: ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಪೀಠಾಧಿಪತಿಗಳ ಅಥವಾ ಯಜಮಾನರ ಅನುಮತಿ ಅವಶ್ಯ. 5. ಕಾಮೆಂಟ್ ನಿಯಂತ್ರಣ: ಅಸಭ್ಯ ಅಥವಾ ಅನಗತ್ಯ ಕಾಮೆಂಟ್‌ಗಳನ್ನು ತಡೆಯಲು moderated live chat ಬಳಕೆ. ನಿಯಮ ಉಲ್ಲಂಘನೆ ಮಾಡಿದ ಬಳಕೆದಾರರನ್ನು ತಕ್ಷಣ ನಿರ್ಬಂಧಿಸಬೇಕು. 6. ಕಾಪಿರೈಟ್ ಸೂಚನೆ: ಪ್ರತಿಯೊಂದು ಪ್ರಸಾರದಲ್ಲಿ ಸ್ಪಷ್ಟ ಹಕ್ಕುಸ್ವಾಮ್ಯ ಸೂಚನೆ ಇರಬೇಕು. 7. ದಾಖಲೆ ಸಂಗ್ರಹ: ಪ್ರಸಾರವಾದ ಪ್ರತಿಯೊಂದು ದೃಶ್ಯವನ್ನು ಕನಿಷ್ಠ 3 ವರ್ಷಗಳವರೆಗೆ ಸಂಸ್ಥೆಯ ಡಿಜಿಟಲ್ ಆರ್ಕೈವ್‌ನಲ್ಲಿ ಉಳಿಸಬೇಕು. ****** ನೇರ ಪ್ರಸಾರವು ಕಲೆಯ ಪ್ರಸರಣದ ಶಕ್ತಿ; ಆದರೆ ನಿಯಮವಿಲ್ಲದ ಪ್ರಸಾರ ಕಲೆಯ ಗೌರವಕ್ಕೆ ಧಕ್ಕೆಯುಂಟುಮಾಡಬಹುದು.ಆದ್ದರಿಂದ – “ಯಕ್ಷಗಾನದ ಪ್ರಸಾರವು ಕಲೆಗಿಂತಲೂ ಹೆಚ್ಚಾಗಿ ಸಂಸ್ಕೃತಿಯ ಪ್ರತಿನಿಧಿ. ಅದಕ್ಕೆ ಸಂಸ್ಕಾರವಾದ ನಿಯಮಾವಳಿ ಅಗತ್ಯ.” ಕುಮಾರ ಸುಬ್ರಹ್ಮಣ್ಯ.ಮುಳಿಯಾಲ.

Sunday, May 31, 2026

ಯಕ್ಷಗಾನ ಪ್ರಸರಣದ ನೇರ ಪ್ರಸಾರ ತೊಂದರೆಗಳನ್ನುಂಟು ಮಾಡುತ್ತಿದೆಯೇ ?

ಯಕ್ಷಗಾನ ಪ್ರಸರಣದ ನೇರ ಪ್ರಸಾರ ತೊಂದರೆಗಳನ್ನುಂಟು ಮಾಡುತ್ತಿದೆಯೇ ? ****************************** ಸಾಂಸ್ಕೃತಿಕ ಪ್ರಪಂಚದಲ್ಲಿ ನೇರ ಪ್ರಸಾರದ ಸಂಚಲನ ಯಕ್ಷಗಾನ – ನಮ್ಮ ಕರಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ನಾಟಕೀಯ ಪರಂಪರೆಯ ಜೀವಂತ ಪ್ರತೀಕ. ಈ ಕಲೆ ಈಗ ಅಂತರರಾಷ್ಟ್ರೀಯ ವೇದಿಕೆಗೆ ತಲುಪಿರುವುದಕ್ಕೆ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಅಪಾರ ಕೊಡುಗೆ ಇದೆ. “ಒಮ್ಮೆ ಮೇಳ ಆರಂಭವಾದರೆ, ಊರಿಗೇ ಹರಡುತ್ತಿತ್ತು; ಈಗ ಕ್ಲಿಕ್ಕೊಂದರಲ್ಲಿ ವಿಶ್ವವನ್ನೇ ತಲುಪುತ್ತಿದೆ.” ಆದರೆ ಈ “ನೇರ ಪ್ರಸಾರದ ಯುಗ” ಕಲೆ ಪ್ರಸಾರಕ್ಕೆ ಆಶೀರ್ವಾದವೋ, ಅಥವಾ ಸವಾಲೋ ಎಂಬ ಪ್ರಶ್ನೆ ಈಗ ಸಾಂಸ್ಕೃತಿಕ ಚರ್ಚೆಯ ಕೇಂದ್ರಬಿಂದುವಾಗಿದೆ. ಮುಖ್ಯಾಂಶಗಳು : • ನೇರ ಪ್ರಸಾರದಿಂದ ಯಕ್ಷಗಾನ ವಿಶ್ವಮಟ್ಟದ ಗುರುತಿಗೆ • ತಂತ್ರಜ್ಞಾನ ಕಲೆಯ ಹೊಸ ಸೇತುವೆ • ಪ್ರಸಾರ ಶಿಸ್ತು ಮತ್ತು ಸಂವೇದನೆ ಅಗತ್ಯ • ಕಲಾವಿದರ ಹಕ್ಕು, ಪ್ರೇಕ್ಷಕರ ಜವಾಬ್ದಾರಿ ಮತ್ತು ಮಾಧ್ಯಮದ ಸಂಯಮ ನೇರ ಪ್ರಸಾರದ ಪ್ರಬಲ ಪ್ರಯೋಜನಗಳು 1️⃣ ಯಕ್ಷಗಾನಕ್ಕೆ ಜಾಗತಿಕ ವೇದಿಕೆ ಕರಾವಳಿಯ ಹಳ್ಳಿಯ ವೇದಿಕೆಯಲ್ಲಿ ನಡೆಯುವ ಪ್ರದರ್ಶನಗಳು ಇಂದು ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ತನಕ ತಲುಪುತ್ತಿವೆ. ವಿದೇಶದಲ್ಲಿರುವ ಕನ್ನಡಿಗರಿಗೆ ಇದು ಸಂಸ್ಕೃತಿಯ ಜೀವನಾಡಿ. “ಪ್ರವಾಸದಲ್ಲಿದ್ದರೂ ಮನೆಮಾತು ಯಕ್ಷಗಾನ ನೋಡಬಹುದಾಗಿದೆ” ಎಂಬ ಭಾವನೆ ಕಲೆಯ ನಿಷ್ಠೆಯನ್ನು ಗಾಢಗೊಳಿಸುತ್ತದೆ. 2️⃣ ಡಿಜಿಟಲ್ ಸಂಗ್ರಹ – ಭವಿಷ್ಯದ ಸಂಪತ್ತು ಪ್ರಸಾರವಾಗುವ ಪ್ರತಿಯೊಂದು ಪ್ರದರ್ಶನವೂ ಭವಿಷ್ಯದ ಸಂಶೋಧಕರಿಗೆ ಅಮೂಲ್ಯ ದಾಖಲೆ. ಭಾಷಾಶೈಲಿ, ವೇಷ, ಸಂಗೀತ, ತಾಳಮದ್ದಳೆ, ಸಂಭಾಷಣೆಯ ಉತ್ಕರ್ಷ – ಎಲ್ಲವೂ ಶಾಶ್ವತವಾಗುತ್ತದೆ. 3️⃣ ಯುವಪೀಳಿಗೆಯ ಆಸಕ್ತಿಗೆ ಹೊಸ ಚೈತನ್ಯ ಮೊಬೈಲ್, ಟ್ಯಾಬ್ ಅಥವಾ ಟಿವಿ ಮೂಲಕ ಯಕ್ಷಗಾನ ನೋಡುತ್ತಿರುವ ಯುವಕರು ಕಲೆಗೆ ನವ ಚೈತನ್ಯ ನೀಡುತ್ತಿದ್ದಾರೆ. ಕಲೆಗೆ ಹೊಸ ಪ್ರೇಕ್ಷಕ ವಲಯ ರೂಪುಗೊಳ್ಳುತ್ತಿದೆ. 4️⃣ ಕಲಾವಿದರಿಗೆ ವಿಶ್ವಮಟ್ಟದ ಮಾನ್ಯತೆ ಹಿಂದೆ ಪ್ರದೇಶಕ್ಕೆ ಸೀಮಿತವಾಗಿದ್ದ ಕಲಾವಿದರು ಈಗ ವಿಶ್ವದ ಪ್ರೇಕ್ಷಕರ ಮೆಚ್ಚುಗೆಯುಳ್ಳವರು. ಇದು ಕಲಾವಿದರ ನಿಷ್ಠೆಗೂ ಆತ್ಮಗೌರವಕ್ಕೂ ಪೂರಕವಾಗಿದೆ. ನೇರ ಪ್ರಸಾರದ ಸವಾಲುಗಳು: 1️⃣ ವೇದಿಕೆಯ ಜೀವಂತಿಕೆಗೆ ಧಕ್ಕೆಯ ಸಾಧ್ಯತೆ ಕ್ಯಾಮೆರಾ ಮತ್ತು ಲೈಟಿಂಗ್‌ನ ಒತ್ತಡದಿಂದ ಕಲಾವಿದರು “ಪ್ರಸಾರಕನ ದೃಷ್ಟಿ”ಯಲ್ಲೇ ಬಂಧಿತರಾಗುತ್ತಾರೆ. ನೇರ ಪ್ರೇಕ್ಷಕರ ಸ್ಪಂದನೆ ಕಡಿಮೆಯಾದರೆ ಯಕ್ಷಗಾನದ ನೈಜ ಉಲ್ಲಾಸ ಕಡಿಮೆಯಾಗುವ ಭೀತಿ ಇದೆ. 2️⃣ ಅಸಂಯಮಿತ ಲೈವ್ ಕಾಮೆಂಟ್‌ಗಳ ಸಮಸ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ವೈಯಕ್ತಿಕ, ರಾಜಕೀಯ ಅಥವಾ ಅಸಭ್ಯ ಕಾಮೆಂಟ್‌ಗಳನ್ನು ಮಾಡುವುದು ಕಲೆಯ ಗೌರವಕ್ಕೆ ಧಕ್ಕೆ ತರುತ್ತದೆ. ಇಂತಹ ಕಾಮೆಂಟ್‌ಗಳು ಕಲಾವಿದರ ಮನೋಸ್ಥೈರ್ಯಕ್ಕೂ ಪ್ರಸಾರದ ಶಿಸ್ತುಗೂ ಹಾನಿಕಾರಕ. 3️⃣ ತಾಂತ್ರಿಕ ಗುಣಮಟ್ಟದ ಸಮಸ್ಯೆ ಕಡಿಮೆ ಗುಣಮಟ್ಟದ ಕ್ಯಾಮೆರಾ, ಧ್ವನಿ ಅಸಮನ್ವಯ ಅಥವಾ ಅಸ್ಪಷ್ಟ ಚಿತ್ರಣದಿಂದ ಕಲೆಯ ಸೌಂದರ್ಯ ವಿಕೃತವಾಗುತ್ತದೆ. ಯಕ್ಷಗಾನದ ಸೌಂದರ್ಯ ದೃಶ್ಯದಲ್ಲಷ್ಟೇ ಅಲ್ಲ, ಧ್ವನಿಯ ಸಮತೋಲನದಲ್ಲೂ ಇದೆ. 4️⃣ ಹಕ್ಕುಸ್ವಾಮ್ಯ ಮತ್ತು ಸ್ಥಳೀಯ ಸಂಪ್ರದಾಯದ ಅಸ್ಪಷ್ಟತೆ ಅನುಮತಿಯಿಲ್ಲದ ನೇರ ಪ್ರಸಾರಗಳು ಕಲಾ ಸಂಸ್ಥೆಗಳಿಗೆ ಕಾನೂನು ಮತ್ತು ನೈತಿಕ ತೊಂದರೆ ತರಬಹುದು. ಕೆಲವೆಡೆ ಸ್ಥಳೀಯ ಸಂಪ್ರದಾಯದ ಅಂತರಂಗಕ್ಕೆ ಧಕ್ಕೆಯಾಗುವ ಸಾಧ್ಯತೆಯೂ ಇದೆ. ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು: 1️⃣ ಸಾಂಸ್ಕೃತಿಕ ಪ್ರಸಾರ ನೀತಿ ಸಂಹಿತೆ ಪ್ರಸಾರ ಸಂಸ್ಥೆಗಳು ಒಂದು “ಕಲಾಪ್ರಸಾರ ಶಿಸ್ತು ನಿಯಮಾವಳಿ” ರೂಪಿಸಬೇಕು. ಅಸಭ್ಯ ಅಥವಾ ಅನಗತ್ಯ ಕಾಮೆಂಟ್‌ಗಳನ್ನು ತಡೆಗಟ್ಟಲು moderation tools ಬಳಸಬೇಕು. 2️⃣ ಆಯ್ದ ಪ್ರಸಾರ ನೀತಿ ಪ್ರತಿಯೊಂದು ಪ್ರದರ್ಶನವನ್ನೂ ಪ್ರಸಾರ ಮಾಡುವ ಬದಲು, ಆಯ್ದ ಮತ್ತು ಸಂಯೋಜಿತ ಪ್ರದರ್ಶನಗಳನ್ನು ಉತ್ತಮ ತಾಂತ್ರಿಕ ಗುಣಮಟ್ಟದಲ್ಲಿ ಪ್ರಸಾರ ಮಾಡುವುದು ಒಳಿತು. 3️⃣ ಕಲಾವಿದರ ಮತ್ತು ಸಂಸ್ಥೆಗಳ ಹಕ್ಕು ಸಂರಕ್ಷಣೆ ನೇರ ಪ್ರಸಾರದ ಮೊದಲು ಕಲಾವಿದರು ಮತ್ತು ಆಯೋಜಕರು ಪರಸ್ಪರ ಲಿಖಿತ ಒಪ್ಪಂದ ಮಾಡಿಕೊಂಡರೆ ಹಕ್ಕುಸ್ವಾಮ್ಯ ಸ್ಪಷ್ಟವಾಗುತ್ತದೆ. 4️⃣ ಕಾಮೆಂಟ್ ನಿಯಂತ್ರಣ — ಸಂಪೂರ್ಣ ಸ್ಥಗಿತವಲ್ಲ, ಸಂಯಮಿತ ನಿರ್ವಹಣೆ. ಲೈವ್ ಕಾಮೆಂಟ್ ಸಂಪೂರ್ಣ ಸ್ಥಗಿತ ಮಾಡಿದರೆ ಪ್ರೇಕ್ಷಕರ ಸಂವಹನ ಕಡಿಮೆಯಾಗುತ್ತದೆ. ಆದ್ದರಿಂದ moderated live chat ಮಾದರಿಯನ್ನು ಅನುಸರಿಸಬೇಕು. ಒಟ್ಟಿನಲ್ಲಿ ಯಕ್ಷಗಾನ ಅಥವಾ ಯಾವುದೇ ಸಾಂಸ್ಕೃತಿಕ ಕಲೆಯ ನೇರ ಪ್ರಸಾರಕ್ಕೆ ಕೆಳಗಿನ ಮೂಲಭೂತ ಮಾನದಂಡಗಳು ಇರಬೇಕು: A. ಅನುಮತಿ ಮತ್ತು ಹಕ್ಕುಸ್ವಾಮ್ಯ 1. ಆಯೋಜಕರ ,ಕಲಾವಿದರ ಅನುಮತಿ ಅಗತ್ಯ: ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಮಠ, ಸಂಘ, ಸಂಘಟನೆ ಅಥವಾ ಯಜಮಾನರ ಲಿಖಿತ ಅನುಮತಿ ಇಲ್ಲದೆ ಪ್ರಸಾರ ಮಾಡಬಾರದು. 2. ಕಲಾವಿದರ ಒಪ್ಪಿಗೆ: ಆಯೋಜಕರು ಅಥವಾ ಮೇಳದ ಯಜಮಾನರು ಅಥವಾ ಯಾವುದೇ ಸಂಸ್ಥೆ ಕಲಾವಿದರೊಂದಿಗೆ ಮೊದಲೇ ಚರ್ಚಿಸಿ ನೇರ ಪ್ರಸಾರದ ಪೂರಾವಾನುಮತಿ ಕಲಾವಿದರಿಂದ ಪಡೆದಿರಬೇಕು .ಯಾಕೆಂದರೆ ಕಲಾವಿದರ ಧ್ವನಿ, ಚಿತ್ರ, ಅಭಿನಯ ಇತ್ಯಾದಿ ಎಲ್ಲವೂ ಅವರ ವೈಯಕ್ತಿಕ ಬೌದ್ಧಿಕ ಆಸ್ತಿ (intellectual property). ಆದ್ದರಿಂದ ಪ್ರಸಾರದ ಮೊದಲು ಅವರ ಸಹಮತಿ ಅಗತ್ಯ. 3. ಪ್ರಸಾರ ಸಂಸ್ಥೆಯ ಗುರುತು: ಪ್ರಸಾರ ಮಾಡುವ ಯೂಟ್ಯೂಬ್ ಚಾನಲ್ ಅಥವಾ ಮಾಧ್ಯಮವು ತನ್ನ ಅಧಿಕೃತ ಹೆಸರು ಮತ್ತು ಕಾನೂನಾತ್ಮಕ ವಿಳಾಸ ಪ್ರದರ್ಶಿಸಬೇಕು. B. ತಾಂತ್ರಿಕ ಗುಣಮಟ್ಟ ದೃಶ್ಯ/ಧ್ವನಿ ಗುಣಮಟ್ಟವು ಕನಿಷ್ಠ ಮಟ್ಟದ ತಾಂತ್ರಿಕ ಮಾನದಂಡಗಳನ್ನು ಪೂರೈಸಬೇಕು.ಯಾವುದೇ ವಿಕೃತ ಅಥವಾ ಸಂಪಾದಿತ ಚಿತ್ರಣದಿಂದ ಕಲೆಯ ಅಸಲಿ ರೂಪ ಬದಲಾಗಬಾರದು. C. ನೈತಿಕ ನಿಯಮಗಳು 1 .ಪ್ರಸಾರದಲ್ಲಿ ಅಸಭ್ಯ ಜಾಹೀರಾತುಗಳು, ರಾಜಕೀಯ ಟಿಪ್ಪಣಿಗಳು ಅಥವಾ ವೈಯಕ್ತಿಕ ಕಾಮೆಂಟ್‌ಗಳು ಇರಬಾರದು. 2 .ಲೈವ್ ಕಾಮೆಂಟ್‌ಗಳಿಗೆ ನೈತಿಕ ನಿಯಂತ್ರಣ (moderation) ಇರಬೇಕು. D. ದಾಖಲೆ ಸಂಗ್ರಹ ಪ್ರತಿಯೊಂದು ನೇರ ಪ್ರಸಾರದ ಪೂರ್ಣ ದಾಖಲೆ (raw footage) ಆಯೋಜಕರ ಬಳಿ ಉಳಿಯಬೇಕು. ಇದು ಭವಿಷ್ಯದಲ್ಲಿ ವಿವಾದ ಬಂದಾಗ ಸಾಕ್ಷಿಯಾಗಿ ಕೆಲಸ ಮಾಡುತ್ತದೆ. 2 . ಹಕ್ಕುಸ್ವಾಮ್ಯ ಮತ್ತು ಕಾನೂನಾತ್ಮಕ ಹಕ್ಕುಗಳು (A) ಯಾರದ್ದು ಹಕ್ಕು? 1 .ಪ್ರಸಾರ ಹಕ್ಕು (Broadcast Right) ನೇರ ಪ್ರಸಾರ ಮಾಧ್ಯಮ / ಚಾನಲ್ ಆಯೋಜಕರ ಅನುಮತಿಯೊಂದಿಗೆ ಪ್ರಸಾರ ಮಾಡಿದರೆ, ಆ ಡಿಜಿಟಲ್ ಆವೃತ್ತಿಯ ಹಕ್ಕು ಇವರಿಗೆ ಸೀಮಿತ ಮತ್ತು ಆಯೋಜಕರ ಜೊತೆಗಿನ ಒಪ್ಪಂದದಂತೆ ಕಾರ್ಯ ನಿರ್ವಹಿಸಬೇಕು. 2 .ಆದ್ದರಿಂದ ಹಕ್ಕುಸ್ವಾಮ್ಯ “ಸಹ-ಸ್ವಾಮ್ಯ” (Joint Ownership) ಆಗಿರಬೇಕು ಆಯೋಜಕರು, ಪ್ರಸಾರಮಾಧ್ಯಮ ಇಬ್ಬರಿಗೂ ಜೊತೆಯಾಗಿರಬೇಕು ಅಥವಾ ಒಪ್ಪಂದದಂತೆ ಇರಬೇಕು. (B) Cut–Paste, Copy–Reupload ತಡೆಯುವ ಕ್ರಮಗಳು 1. YouTube / Facebook Copyright Protection Tools: ಯೂಟ್ಯೂಬ್‌ನಲ್ಲಿ Content ID ಸೌಲಭ್ಯ ಇದೆ. ನೀವು ನಿಮ್ಮ ಪ್ರಸಾರವನ್ನು ಅದರಲ್ಲಿ ನೋಂದಾಯಿಸಿದರೆ ಬೇರೆವರು ಅದೇ ದೃಶ್ಯವನ್ನು ಅಪ್‌ಲೋಡ್ ಮಾಡಿದಾಗ ಸ್ವಯಂಚಾಲಿತವಾಗಿ ನೋಟೀಸ್ ಹೋಗುತ್ತದೆ. Facebook ಮತ್ತು Instagramಕ್ಕೂ ಹೋಲುವ “Rights Manager” ವ್ಯವಸ್ಥೆ ಇದೆ. 2. Watermark / Digital Signature: ಪ್ರತಿಯೊಂದು ಪ್ರಸಾರದಲ್ಲಿ ಸಂಸ್ಥೆಯ ಸ್ಥಿರ ಲೋಗೋ ಅಥವಾ watermark ಇರಬೇಕು. “© (Year) – Organizer/Institution Name. All Rights Reserved” ಎಂಬ ಸೂಚನೆ ಸ್ಪಷ್ಟವಾಗಿ ಪ್ರದರ್ಶಿಸಬೇಕು. 3. Legal Disclaimer: ವಿಡಿಯೋ ವಿವರಣೆಯಲ್ಲಿ (description) ಈ ನೋಟ್ ಇರಬೇಕು: “ಈ ಪ್ರಸಾರ ಹಾಗೂ ಅದರ ದೃಶ್ಯ/ಧ್ವನಿ ಹಕ್ಕುಗಳು [ಸಂಸ್ಥೆ/ಮೇಳದ ಹೆಸರು] ಮತ್ತು [ಚಾನಲ್ ಹೆಸರು] ಅವರ ಸಹಮಾಲಿಕತ್ವದಲ್ಲಿವೆ. ಯಾವುದೇ ಅನಧಿಕೃತ ನಕಲು ಅಥವಾ ಪುನರ್‌ಪ್ರಸಾರ ಕಾನೂನುಬದ್ಧವಾಗಿ ಶಿಕ್ಷಾರ್ಹ.” 4. ಕಾನೂನು ನೋಂದಣಿ (Voluntary Registration): ಪ್ರಮುಖ ಕಲಾಪ್ರಸಾರಗಳು ಅಥವಾ ಡಾಕ್ಯುಮೆಂಟೇಶನ್‌ಗಳನ್ನು Indian Copyright Office (Delhi) ನಲ್ಲಿ Form XIV ಮೂಲಕ “Video Work” ರೂಪದಲ್ಲಿ ನೋಂದಾಯಿಸಬಹುದು. 3 .. ಕಲಾಪ್ರಸಾರ ಶಿಸ್ತು ನಿಯಮಾವಳಿ (Draft Framework) ನಿಮ್ಮ ಸಂಸ್ಥೆ ಅಥವಾ ಕಲಾಪೋಷಕ ಸಂಘವು ಇಂತಹ ಪ್ರಸಾರಗಳನ್ನು ನಿಯಂತ್ರಿಸಲು ಕೆಳಗಿನ ರೀತಿಯ “ಯಕ್ಷಗಾನ ಕಲಾಪ್ರಸಾರ ನೀತಿ ಸಂಹಿತೆ” ರೂಪಿಸಬಹುದು: ಯಕ್ಷಗಾನ ಕಲಾಪ್ರಸಾರ ನೀತಿ ಸಂಹಿತೆ – ಪ್ರಮುಖ ಅಂಶಗಳು 1. ಉದ್ದೇಶ: ಯಕ್ಷಗಾನದ ಶ್ರೇಷ್ಠತೆಯನ್ನು ಕಾಪಾಡುವ ಹಾಗೂ ಡಿಜಿಟಲ್ ಪ್ರಸಾರದಲ್ಲಿ ನೈತಿಕ ಮತ್ತು ಕಾನೂನಾತ್ಮಕ ಶಿಸ್ತನ್ನು ರೂಪಿಸುವುದು. 2. ಅನುಮತಿ ಕ್ರಮ: ಪ್ರಸಾರದ ಮೊದಲು ಕಲಾವಿದರು, ಆಯೋಜಕರು, ಮತ್ತು ಪ್ರಸಾರ ಸಂಸ್ಥೆ ನಡುವೆ ಲಿಖಿತ ಒಪ್ಪಂದ ಅಗತ್ಯ. 3. ಪ್ರಸಾರ ಗುಣಮಟ್ಟ: ಕನಿಷ್ಠ ತಾಂತ್ರಿಕ ಮಾನದಂಡಗಳು (1080p HD, ಸಮನ್ವಿತ ಧ್ವನಿ, ಸ್ಥಿರ ಕ್ಯಾಮೆರಾ ಕೋನಗಳು) ಕಡ್ಡಾಯ. 4. ಪ್ರಸಾರ ಸಮಯ ಮತ್ತು ಆಯ್ಕೆ: ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಪೀಠಾಧಿಪತಿಗಳ ಅಥವಾ ಯಜಮಾನರ ಅನುಮತಿ ಅವಶ್ಯ. 5. ಕಾಮೆಂಟ್ ನಿಯಂತ್ರಣ: ಅಸಭ್ಯ ಅಥವಾ ಅನಗತ್ಯ ಕಾಮೆಂಟ್‌ಗಳನ್ನು ತಡೆಯಲು moderated live chat ಬಳಕೆ. ನಿಯಮ ಉಲ್ಲಂಘನೆ ಮಾಡಿದ ಬಳಕೆದಾರರನ್ನು ತಕ್ಷಣ ನಿರ್ಬಂಧಿಸಬೇಕು. 6. ಕಾಪಿರೈಟ್ ಸೂಚನೆ: ಪ್ರತಿಯೊಂದು ಪ್ರಸಾರದಲ್ಲಿ ಸ್ಪಷ್ಟ ಹಕ್ಕುಸ್ವಾಮ್ಯ ಸೂಚನೆ ಇರಬೇಕು. 7. ದಾಖಲೆ ಸಂಗ್ರಹ: ಪ್ರಸಾರವಾದ ಪ್ರತಿಯೊಂದು ದೃಶ್ಯವನ್ನು ಕನಿಷ್ಠ 3 ವರ್ಷಗಳವರೆಗೆ ಸಂಸ್ಥೆಯ ಡಿಜಿಟಲ್ ಆರ್ಕೈವ್‌ನಲ್ಲಿ ಉಳಿಸಬೇಕು. ನೇರ ಪ್ರಸಾರವು ಕಲೆಯ ಪ್ರಸರಣದ ಶಕ್ತಿ; ಆದರೆ ನಿಯಮವಿಲ್ಲದ ಪ್ರಸಾರ ಕಲೆಯ ಗೌರವಕ್ಕೆ ಧಕ್ಕೆಯುಂಟುಮಾಡಬಹುದು.ಆದ್ದರಿಂದ – “ಯಕ್ಷಗಾನದ ಪ್ರಸಾರವು ಕಲೆಗಿಂತಲೂ ಹೆಚ್ಚಾಗಿ ಸಂಸ್ಕೃತಿಯ ಪ್ರತಿನಿಧಿ. ಅದಕ್ಕೆ ಸಂಸ್ಕಾರವಾದ ನಿಯಮಾವಳಿ ಅಗತ್ಯ.” ಕಲೆಯ ಪ್ರಸರಣ ಮತ್ತು ಸಂಸ್ಕೃತಿಯ ಶಿಸ್ತಿನ ಸೇತುವೆ ನೇರ ಪ್ರಸಾರವು ಕೇವಲ ತಂತ್ರಜ್ಞಾನವಲ್ಲ — ಅದು ಕಲೆಯ ಜನಪ್ರಿಯತೆಯ ಶಕ್ತಿಯೂ ಸಂಸ್ಕೃತಿಯ ಜವಾಬ್ದಾರಿಯೂ ಆಗಿದೆ.ಪ್ರಸಾರದಿಂದ ಕಲೆಯ ವಿಸ್ತಾರವಾಗಲಿ, ಆದರೆ ಸಂಯಮ ಮತ್ತು ಗೌರವ ಕಾಪಾಡಲಿ — ಇದು ಮಾಧ್ಯಮಗಳ ನೈತಿಕ ಕರ್ತವ್ಯ. “ಯಕ್ಷಗಾನ ಪ್ರಸಾರವು ಕೇವಲ ದೃಶ್ಯವಲ್ಲ; ಅದು ಸಂಸ್ಕೃತಿಯ ಸಂವಹನ. ಒಟ್ಟಿನಲ್ಲಿ ಹೇಳುವುದಾದರೆ ನೇರ ಪ್ರಸಾರದ ದಿಂದ ಕಲೆಯ ಜಾಗತಿಕೀಕರಣ ಮತ್ತು ಪ್ರೇಕ್ಷಕ ವಿಸ್ತಾರ ಹಾಗೂ ಯುವಜನರ ಆಸಕ್ತಿ ಹೆಚ್ಚಾಗುತ್ತದೆ. ಅಸಂಯಮಿತ ಕಾಮೆಂಟ್, ತಾಂತ್ರಿಕ ಅಸಮರ್ಪಕತೆ ಯನ್ನು ಶಿಸ್ತು ಬದ್ಧ ಯೋಜನೆಗಳಿಂದ ನಿಯಂತ್ರಿಸಬಹುದು. ತಂತ್ರಜ್ಞಾನ ಎಂಬುದು ಸಂಸ್ಕೃತಿಯ ಸೇವಕ ಶಿಸ್ತಿನಿಂದ ಬಳಸಿದರೆ ಕಲೆಗೆ ಆಶೀರ್ವಾದ. ಆದ್ದರಿಂದ ನೇರ ಪ್ರಸಾರವನ್ನು ನಿರ್ಬಂಧಿಸದೇ — ಶಿಸ್ತುಬದ್ಧವಾಗಿ ಬೆಳೆಸಬೇಕಿದೆ . ಯಕ್ಷಗಾನವನ್ನು ಜನಪ್ರಿಯಗೊಳಿಸುವ ನೇರ ಪ್ರಸಾರವನ್ನು ನಿಷೇಧಿಸುವುದು ಅದರ ಪ್ರಸರಣವನ್ನು ಹೃಸ್ವಗೊಳಿಸಿದಂತಾಗುತ್ತದೆ.. ಬದಲಿಗೆ ಅದರ ಸೌಂದರ್ಯ, ಶಿಸ್ತಿನ, ಮತ್ತು ಸಂವೇದನೆಯ ಬಲದಿಂದ "ಸಂಸ್ಕೃತಿಯ ಮಾಧ್ಯಮ ಮಾದರಿ" ರೂಪಿಸುವುದು ನವಯುಗದ ಅಗತ್ಯವಾಗಿದೆ. ಕುಮಾರ ಸುಬ್ರಹ್ಮಣ್ಯ ಮುಳಿಯಾಲ

Saturday, February 26, 2011

ಕಳಕೊ೦ಡಿದ್ದೇನೆ

(ಓದಿರದ ಗೆಳೆಯರಿಗಾಗಿ ಮರು ಪ್ರಕಟಣೆ)

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
ಸ್ವಾಮಿ, ಹುಡುಕಿಕೊಡಿ.

ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!.

ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!.

ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!.

ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!.

ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!.

ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

Sunday, November 7, 2010

ಬಾರೆ ಭಾವದ ಗೆಳತಿ

ನಿನ್ನ ಹೊಳೆವ ಕಣ್ಣಿನ
ಕಾ೦ತಿಯಾದರೆ ನಾನು,
ನಿನ್ನ ನೋಟಕೊ೦ದು ಪಥವಾಗಲೇನು?

ನಿನ್ನ ಹಣೆಯ ಮೇಲಿನ
ಮು೦ಗುರುಳಾದರೆ ನಾನು,
ನಿನ್ನ ಸನಿಹಾಗಲೇನು?

ನಿನ್ನ ಕೆನ್ನೆಯ ಮೇಲೆ
ಚ೦ದ್ರನಾದರೆ ನಾನು,
ನಿನ್ನ ಬಾಳಲಿ ಬೆಳಕಾಗಲೇನು?

ನಿನ್ನ ನಗುವಿನ
ಭಾವವಾದರೆ ನಾನು,
ನಿನ್ನ ಜೀವದ ಉಸಿರಾಗಲೇನೂ?

ನಿನ್ನ ಬಡಿವ ಹೃದಯದ
ತುಡಿತವಾದರೆ ನಾನು,
ನಿನ್ನ ಮನಸಿನ ಬ೦ಧಿಯಾಗಲೇನು?

ನಿನ್ನ ಭಾವದ
ವೀಣೆಯಾದರೆ ನಾನು,
ನಿನ್ನ೦ತರ೦ಗವ ಮೀಟಲೇನು?
ಬಾಳ ಬೆಳಗಲೇನೂ....
ಬೆಳಗಲೇನೂ........
.........

Saturday, October 9, 2010

ವ್ಯಾಪಾರ.

ಸ್ವಾಮೀ
ವ್ಯಾಪಾರಕ್ಕಿದೆ
ನನ್ನ ಕನಸುಗಳು
ಬೇಕಾಗಿದೆ ಗಿರಾಕಿಗಳು

ಲ೦ಚ ರಹಿತ ವ್ಯವಸ್ತೆ
ಬೆಳೆಸಬೇಕೆ೦ದುಕನಸು
ಸಾಕಾರಗೊಳಿಸುವರು
ಬೇಕಾಗಿದ್ದಾರೆ

ಸ್ವಾರ್ಥರಹಿತ ಪ್ರೀತಿ
ಬೆಳೆಸಬೇಕೆ೦ದು ಕನಸು
ಬೆಳೆಸ ಹೃದಯ
ಬೇಕಾಗಿದೆ

ಕಲ್ಮಶರಹಿತ ಊರ
ಬೆಳೆಸಬೇಕೆ೦ದು ಕನಸು
ಉಳಿಸುವ ಮನಸ್ಸು
ಬೇಕಾಗಿದೆ

ಕುಡಿತರಹಿತ
ವ್ಯಸನವಿರದಸಮಾಜ
ಬೆಳೆಸುವ ಕನಸು
ಜನರು ಬೇಕಾಗಿದೆ

ನಿಸ್ವಾರ್ಥ ನಾಯಕರು
ನಾಡು ನುಡಿಯ ಪ್ರೇಮಿಗಳು
ಬೇಕಾಗಿದ್ದಾರೆ

ನನ್ನ ಕನಸುಗಳು
ಮಾರಾಟಕ್ಕಿದೆ
ಸ್ವಸ್ಥ ಗಿರಾಕಿಗಳು
ಬೇಕಾಗಿದ್ದಾರೆ
..................